ಬ್ರಿಗ್‍ಮನ್, ಪೆರ್ಸಿ ವಿಲಿಯಮ್ಸ್ (1882-1961 ) - ೧೯೪೬
ಅಸಂಸಂ -ಪ್ರಯೋಗಶೀಲ ವಿಜ್ಞಾನ -ಲೋಹಗಳ ಮೇಲೆ ಅತಿ ಒತ್ತಡದ ಪ್ರಭಾವಗಳನ್ನು ಕುರಿತು ಅಧ್ಯಯನ ನಡೆಸಿದಾತ.
ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬ್ರಿಗ್‍ಮನ್, ಅಲ್ಲೇ ವೃತ್ತಿಗೆ ಸೇರಿ, ನಿವೃತ್ತನಾಗುವವರೆಗೆ ಸೇವೆ ಸಲ್ಲಿಸಿದನು. ಅತಿ ಒತ್ತಡದ ಸ್ಥಿತಿಗಳ ಬಗೆಗೆ ಆಸಕ್ತನಾಗಿದ್ದ ಈತ, ಆ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು ಹಲವಾರು ಹೊಸ ಬಗೆಯ ಉಪಕರಣಗಳನ್ನು ನಿರ್ಮಿಸಿದನು. ಬ್ರಿಗ್‍ಮನ್ ಅತಿ ಒತ್ತಡದ ಸ್ಥಿತಿಯಲ್ಲಿ ಬಹುತೇಕ ದ್ರವಗಳು ಹೆಚ್ಚು ಸ್ನಿಗ್ದವಾಗುವವೆಂದೂ (Viscous), ಮಂಜುಗಡ್ಡೆಯಂತಹ ಘನ ಸಂಯೋಜಿತಗಳು ಹಾಗೂ ರಂಜಕದಂತಹ ಘನ ಧಾತುಗಳು ವಿಶಿಷ್ಟ ಸ್ಥಿತಿಗೆ ತೆರಳುವವೆಂದು ತೋರಿಸಿದನು. ಬ್ರಿಗ್‍ಮನ್ ಪ್ರತಿ ಚದರ ಮಿಟರ್‍ಗೆ ಹತ್ತು ಸಾವಿರ ಟನ್‍ಗೂ ಅಧಿಕದಷ್ಟು ಭಾರಿ ಒತ್ತಡಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದನು. ವಿದ್ಯುತ್ ಪ್ರವಾಹವನ್ನು ಅಸಮದೈಶಿಕ (anisotropic) ಸ್ಫಟಿಕದ ಮೂಲಕ ಹಾಯಿಸಿದಾಗ ಶಾಖ ಬಿಡುಗಡೆ ಅಥವಾ ಹೀರಿಕೆಯಾಗುವುದನ್ನು ಬ್ರಿಡ್‍ಮನ್ ಪರಿಣಾಮವೆಂದು ಭೌತಶಾಸ್ತ್ರದಲ್ಲಿ ಗುರುತಿಸಲ್ಪಟ್ಟಿದೆ. 1946ರಲ್ಲಿ ಬ್ರಿಗ್‍ಮನ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/13/2019