ಪೊವೆಲ್, ಸಿಸಿಲ್ ಫ್ರಾಂಕ್ (1903-1969) ೧೯೫೦
ಬ್ರಿಟನ್-ಭೌತಶಾಸ್ತ್ರ- ಹೊಸ ಮೂಲ ಕಣಗಳ ಪತ್ತೆಗೆ ಪ್ರಬಲ ವಿಧಾನಗಳನ್ನು ರೂಪಿಸಿದಾತ.
ಪೊವೆಲ್‍ನ ತಂದೆ, ಕಮ್ಮಾರನಾಗಿದ್ದನು. ಪೊವೆಲ್ ಕೇಂಬ್ರಿಜ್ ಸೇರಿ 1927ರಲ್ಲಿ ಸಿ.ಟಿ.ಆರ್. ವಿಲ್ಸನ್ ಜೊತೆಗೆ ಮೇಘ ಕೋಠಿಗಳಲ್ಲಿನ ಸಾಂದ್ರೀಕರಣ ಅಭ್ಯಸಿಸಿ, ಡಾಕ್ಟರೇಟ್ ಗಳಿಸಿದನು. ಇದೇ ವರ್ಷ ಬ್ರಿಸ್ಟಲ್‍ಗೆ ಹೋಗಿ ವೃತ್ತಿ ಜೀವನ ಪ್ರಾರಂಭಿಸಿದನು. ವಿಯೆನ್ನಾದಲ್ಲಿದ್ದ ಬ್ಲಾವ್, ಹಾಗೂ ವೇನ್‍ಬ್ಯಾಕರ್ ಸಂಶೋಧಕಿಯರು. ಛಾಯಾಗ್ರಹಣದಲ್ಲಿನ ಲೇಪನಗಳು ಬೆಳಕಿನಿಂದ ಮಾತ್ರವಲ್ಲದೆ, ವೇಗ ಕಣಗಳಿಂದಲೂ ಪ್ರಭಾವಕ್ಕೊಳಗಾಗುವುದೆಂದು ತೋರಿಸಿದ್ದರು. ವೇಗಗಾಮಿ ಕಣಗಳ ಜಾಡನ್ನು ಛಾಯಗ್ರಹಣ ಕಾಗದದ ಮೇಲಿನ ಲೇಪನದಲ್ಲಿ ಪಡೆಯಬಹುದು. ಪೊವೆಲ್ ಈ ವಿಚಾರ ಗಮನಿಸಿ, 1930ರಲ್ಲಿ ವೇಗಗಾಮಿ ಕಣಗಳ ಜಾಡನ್ನು ಲೇಪನದ ಮೇಲೆ ಪಡೆದನು. ಇದು ದ್ಯುತ್ಯಾಲೇಖ. ಈ ಜಾಡನ್ನು ಸೂಕ್ಷ್ಮದರ್ಶಕದಿಂದ ಪರಿಶೀಲಿಸಿದನು. ಲೆಕ್ಕಾಚಾರಗಳಿಂದ ಈ ಜಾಡನ್ನು ನಿರ್ಮಿಸಿದ ಕಣಗಳ,ಗಾತ್ರ, ದ್ರವ್ಯ,ಹಾಗೂ ಆವೇಶವನ್ನು ನಿರ್ಧರಿಸಿದನು. ಈ ವಿಧಾನದಿಂದ 1947ರಲ್ಲಿ ಪೊವೆಲ್ ಪೈ-ಮೆಸಾನ್ ಹೆಸರಿನ ಹೊಸ ಮೂಲ ಕಣವನ್ನು ಪತ್ತೆ ಹಚ್ಚಿದನು. ಇದು ಎಲೆಕ್ಟ್ರಾನ್‍ಗಿಂತ 273ಪಟ್ಟು ಹೆಚ್ಚು ದ್ರವ್ಯ ಹೊಂದಿದೆ. 1935ರಲ್ಲಿ ಯುಕಾವ ಇಂತಹ ಮೂಲ ಕಣದ ಅಸ್ತಿತ್ವದ ಮುನ್ಸೂಚನೆ ನೀಡಿದ್ದನು. ಪೆÇವೆಲ್‍ನಿಂದಾಗಿ ಅಧಿಕ ಚೈತನ್ಯದ ಕಣ ಭೌತಶಾಸ್ತ್ರ ಉಗಮಗೊಂಡಿತು. ಪರ್ವತಗಳ ತುದಿಯಿಂದ, ವಾತಾವರಣ ದಾಟಿ ಹಾರಿಸಿದ ಬಲೂನ್‍ಗಳ ಮೂಲಕ, ಪೊವೆಲ್ ವಿಶ್ವ ಕಿರಣಗಳನ್ನು ಅಭ್ಯಸಿಸಿದನು. 1950ರಲ್ಲಿ ಪೊವೆಲ್ ನೊಬೆಲ್ ಪ್ರಶಸ್ತಿ ಸನ್ಮಾನಿತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/26/2019