অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಒಟ್ಟೋ , ಸ್ಟರ್ನ್,

ಒಟ್ಟೋ , ಸ್ಟರ್ನ್,

ಒಟ್ಟೋ , ಸ್ಟರ್ನ್,  (1885-1948)   ೧೯೪೩

ಅಸಂಸಂ-ಭೌತಶಾಸ್ತ್ರ- ಪರಮಾಣುಗಳ ಕಾಂತಕ್ಷೇತ್ರಗಳು ಕ್ವಾಂಟಂ ರೂಪದಲ್ಲಿರುವುವೆಂದು ತೋರಿಸಿದಾತ.

ಒಟ್ಟೋ ಸ್ಟರ್ನ್, ಜರ್ಮನಿಯ ಅಪ್ಪರ್ ಸಿಲೇಸಿಯಾದ ಸೊರಾ ಪಟ್ಟಣದಲ್ಲಿ 17 ಫೆಬ್ರವರಿ1888ರಂದು ಜನಿಸಿದನು.  ಒಟ್ಟೋ ನಾಲ್ಕು ವರ್ಷದವನಿದ್ದಾಗ  ದವಸ, ಧಾನ್ಯಗಳ ವ್ಯಾಪಾರಿಯಗಿದ್ದ ಆತನ ತಂದೆ ಬ್ರೆಸ್ಲೌ ಪಟ್ಟಣಕ್ಕೆ ಹೋಗಿ ನೆಲೆಸಿದನು.  ಇಲ್ಲಿಯೇ ಒಟ್ಟೋನ ಪ್ರಾಥಮಿಕ ಹಾಗೂ ಪ್ರೌಢ ವಿಧ್ಯಾಭ್ಯಾಸಗಳು ಜರುಗಿದವು. ಒಟ್ಟೊ ಝೋಮರ್ಫೆಲ್ಟ್, ಲುಮ್ಮಾರ್  ಹಾಗೂ ಪ್ರಿಂಗ್‍ಷೀಮ್‍ರ ಉಪನ್ಯಾಸಗಳಿಗೆ ಹಾಜರಾದನು.  1906ರಲ್ಲಿ ಭೌತ ರಸಾಯನಶಾಸ್ತ್ರದ ಶಿಕ್ಷಣ ಪಡೆಯಲು ಪ್ರಾರಂಭಿಸಿದ ಒಟ್ಟೋ, 1912ರಲ್ಲಿ ಬ್ರೆಸ್ಲೌ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದನು.  ಇದೇ ವರ್ಷ, ಐನ್‍ಸ್ಟೀನ್‍ನೊಂದಿಗೆ ಪ್ರಾಗ್ ವಿಶ್ವವಿದ್ಯಾಲಯ ಸೇರಿದನು.  ನಂತರ ಇವರಿಬ್ಬರೂ ಝೂರಿಕ್ ವಿಶ್ವವಿದ್ಯಾಲಯಕ್ಕೆ ಹೋದರು. 1913ರಲ್ಲಿ ಭೌತರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು.  1914ರಲ್ಲಿ ಇದೇ ಹುದ್ದೆಗಾಗಿ ಫ್ರಾಂಕ್’ಫರ್ಟ್’ಗೆ ಹೋಗಿ, 1921ರವರೆಗೆ ಅಲ್ಲಿಯೇ ಇದ್ದನು.  1921ರಲ್ಲಿ ರೋಸ್ಟೋಕ್ ವಿಶ್ವವಿದ್ಯಾಲಯ ಸೇರಿ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1919ರ ನಂತರ ಒಟ್ಟೋನ ಕಾರ್ಯರಂಗ ಪ್ರಾಯೋಗಿಕ ಭೌತಶಾಸ್ತ್ರದತ್ತ ಹೊರಳಿತು. ಮೊದಲ ಜಾಗತಿಕ ಯುದ್ದದ ಸಮಯದಲ್ಲಿ ಮಿಲಿಟರಿಯಲ್ಲಿದ್ದು ನಂತರ ಫ್ರಾಂಕ್’ಫರ್ಟ್’ನಲ್ಲಿ ಬಾರ್ನ್ ಜೊತೆ ಕೆಲಸ ಮಾಡಿದನು.  ಮುಂದಿನ ವರ್ಷವೇ ಹ್ಯಾಂಬರ್ಗ್ ವಿಶ್ವವಿದ್ಯಾಲಯದ ಭೌತ ಪ್ರಯೋಗಾಲಯದ ನಿರ್ದೇಶಕನಾದನು.  1933ರವರೆಗೆ ಇಲ್ಲಿ ಸೇವೆ ಸಲ್ಲಿಸಿ, ಅದೇ ವರ್ಷ ಅಸಂಸಂಗಳಿಗೆ ತೆರಳಿ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕನಾದನು.  1945ರವರೆಗೆ ಇಲ್ಲಿಯೇ ಉಳಿದನು. ಒಟ್ಟೋನ ಆರಂಭಿಕ ಆಸಕ್ತಿಗಳು ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ವಿಶೇಷತ:ವಾಗಿ ಕ್ವಾಂಟಂ ಸಿದ್ಧಾಂತ, ಔಷ್ಣೀಯ ಗತಿಶಾಸ್ತ್ರದಲ್ಲಿ (Thermodynamics) ನೆಲೆಗೊಂಡಿದ್ದವು.  1920ರಲ್ಲಿ ಸ್ಟರ್ನ್ ಹಾಗೂ ಡಬ್ಲ್ಯು.ಗೆರ್‍ಲಾಕ್ ಪ್ರಯೋಗವೊಂದನ್ನು ನಡೆಸಿದರು. ಈ ಪ್ರಯೋಗದಲ್ಲಿ , ಬೆಳ್ಳಿಯನ್ನು ನಿರ್ವಾತದಲ್ಲಿ ಬಿಸಿಗೊಳಿಸಿ ಪರಮಾಣು ದೂಲ (Beam)   ಪಡೆದು, ಬೆಳ್ಳಿಯ ಪರಮಾಣು, ಅಸಮ ಕಾಂತಕ್ಷೇತ್ರದಲ್ಲಿ ಮೇಲ್ಮುಖ ಹಾಗೂ ಕೆಳಮುಖ ಗಿರಕಿ ಹೊಂದಿದ್ದು ಈ ಗಿರಕಿಗೆ ಅನುಗುಣವಾಗಿ ಎರಡು ಕವಲಾಗಿ ಸೀಳುವುದನ್ನು ಖಚಿತಪಡಿಸಿದರು. ಈ ಪ್ರಯೋಗದಿಂದ ಝೋಮರ್ಫೆಲ್ಟ್ ಮುನ್ಸೂಚಿಸಿದ್ದ ದೇಶ ಶಕಲತೆಯ (Space Quanta) ಅಸ್ತಿತ್ವ ಖಚಿತವಾಯಿತು.  ಪ್ರೋಟಾನ್ ಸೇರಿದಂತೆ ಉಪ ಪರಮಾಣ್ವಕ (Subatomic) ಕಣಗಳ ಭ್ರಾಮ್ಯತೆಗಳನ್ನು ಒಟ್ಟೋ ನಿರ್ಧರಿಸಿದನು.  ಜಲಜನಕ ಹಾಗೂ ಹೀಲಿಯಂ ಕಿರಣಗಳನ್ನು ವ್ಯತಿಕರಣಗೊಳಿಸಿ (Interference)  ಪರಮಾಣುಗಳ ಅಲೆ ಸ್ವರೂಪವನ್ನು ತೋರಿಸಿ ಖ್ಯಾತನಾದನು. 1930ರಲ್ಲಿ ಬಕ್ರ್ಲೆಯ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದಿಂದ ಸನ್ಮಾನಿತನಾದ ಒಟ್ಟೋ, ಅಸಂಸಂಗಳ ಅಕಾಡೆಮಿ ಆಫ್ ಸೈನ್ಸ್‍ನ ಸದಸ್ಯನಾದನು.  ರಾಯಲ್ ಡ್ಯಾನಿಷ್ ಅಕಾಡೆಮಿ ಆಫ್ ಸೈನ್ಸ್‍ನ ವಿದೇಶಿ ಸದಸ್ಯತ್ವವೂ ಒಟ್ಟೋಗೆ ದಕ್ಕಿತು. ಸ್ಟರ್ನ್, ಹ್ಯಾಂಬರ್ಗ್‍ನಲ್ಲಿ ಪ್ರಾಧ್ಯಾಪಕನಾಗಿ ಅಣ್ವಕ-ಕಿರಣ ಪ್ರಯೋಗಾಲಯ ಸಜ್ಜುಗೊಳಿಸಿ, ಪೌಲಿ, ಬೊಹ್ರ್ ಹಾಗೂ ಪಿ.ಎಹ್ರೆನ್ಫೆಸ್ಟರ್ ಸಾಂಗತ್ಯದಲ್ಲಿ ಪೆÇ್ರೀಟಾನ್‍ನ ಕಾಂತೀಯ ಭ್ರಾಮ್ಯತೆ (Magnetic Moment) ನಿರ್ಧರಿಸಿದನು.  ಇದು ಡಿರಾಕ್‍ನ ಮೌಲ್ಯದ 2ರಿಂದ ಮೂರರಷ್ಟಿದ್ದಿತು. ಅಣ್ವಯಿಕ ಕಿರಣ ವಿಧಾನ  (Molecular Beam Method) ರೂಪಿಸಿದ್ದಕ್ಕಾಗಿ 1943ರಲ್ಲಿ ಸ್ಟರ್ನ್ ನೊಬೆಲ್ ಪ್ರಶಸ್ತಿ ಗೌರವಿತನಾದನು.   1933ರ ನಂತರ ಸ್ಟರ್ನ್, ಪಿಟ್ಸ್‍ಬರ್ಗ್‍ನ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಹೋದನು. ಐಷಾರಾಮ ಜೀವನ, ಉತ್ತಮ ಆಹಾರ, ಚಲನ ಚಿತ್ರಗಳ ಆಸ್ವಾದನೆಗಳಿಂದ ಹೆಸರಾಗಿದ್ದ ಸ್ಟರ್ನ್ 81ನೇ ವಯಸ್ಸಿನಲ್ಲಿ, ಚಿತ್ರ ಮಂದಿರದಲ್ಲಿ ಹೃದಯಾಘಾತದಿಂದ ಮರಣ ಹೊಂದಿದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate