অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಾಡ್ವಿಕ್ , ಸರ್ ಜೇಮ್ಸ್

ಚಾಡ್ವಿಕ್ , ಸರ್ ಜೇಮ್ಸ್

ಚಾಡ್ವಿಕ್ , ಸರ್ ಜೇಮ್ಸ್  (1891-1974 ) ೧೯೩೫

ಬ್ರಿಟಿನ್-ಭೌತಶಾಸ್ತ್ರ-ನ್ಯೂಟ್ರಾನ್ ಕಣವನ್ನು ಕಂಡು ಹಿಡಿದಾತ.

1911ರಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಚಾಡ್ವಿಕ್ ಭೌತಶಾಸ್ತ್ರದ ಪದವಿ ಗಳಿಸಿ ಅಲ್ಲೇ ರುದರ್’ಫೋರ್ಡ್‍ನ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮುಂದುವರಿಸಿದನು. 1913ರಲ್ಲಿ ಸಂಶೋಧನ ವೇತನ ಪಡೆಯುವುದರ ಮೂಲಕ ಬರ್ಲಿನ್‍ನಲ್ಲಿ ಗೈಗರ್ ಹ್ಯಾನ್ಸ್ ಜೊತೆ ಕೆಲಸ ಮಾಡುವ ಅವಕಾಶ ಚಾಡ್ವಿಕ್‍ಗೆ ಲಭ್ಯವಾಯಿತು.  1914ರಲ್ಲಿ ಜಾಗತಿಕ ಯುದ್ದ ಪ್ರಾರಂಭವಾಗಿ, ಚಾಡ್ವಿಕ್‍ನ ವೇತನ ನಿಂತು ಹೋಗಿ ಮುಂದೆ ನಾಲ್ಕು ವರ್ಷಗಳ ಕಾಲ ಕುದುರೆಯ ಲಾಯಕ್ಕೆ ಲಗತ್ತಾದ ಕೋಣೆಯೊಂದರಲ್ಲಿ ದುರ್ದೆಸೆಯಲ್ಲಿ ಕಾಲ ಕಳೆಯುವಂತಾಯಿತು.  ಇಂತಹ ಸ್ಥಿತಿಯಲ್ಲೂ, ಚಾಡ್ವಿಕ್ ನೆರ್ನ್‍ಸ್ಟ್ ಹಾಗೂ  ಇನ್ನಿತರ ಬೆಂಬಲದಿಂದಾಗಿ ಸಂಶೋಧನೆ ವiುಂದುವರೆಸಿದನು. 1915ರ ವೇಳೆಗೆ ರುದರ್’ಫೋರ್ಡ್ ಕೇಂಬ್ರಿಜ್‍ಗೆ ಹೋಗಿದ್ದನು.  ಚಾಡ್ವಿಕ್ ಮತ್ತೊಮ್ಮೆ ರುದರಫೋರ್ಡ್ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು. ಮುಂದಿನ 16 ವರ್ಷಗಳ ಕಾಲ ಚಾಡ್ವಿಕ್, ರುದರ್’ಫೋರ್ಡ್’ನ ಪ್ರಧಾನ ಸಂಶೋಧಕ ಸಂಗಡಿಗನಾಗಿ ಬೆಳೆದನು. ಚಾಡ್‍ವಿಕ್ ಹಾಗೂ ರುದರ್’ಫೋರ್ಡ್ ಜೋಡಿ ಆಲ್ಫಾ ಕಣಗಳನ್ನು  ತಾಡಿಸಿ ಧಾತುಗಳನ್ನು ಪಾರವಿಕಲ್ಪಗೊಳಿಸುವ (Transmutation)  ಅಧ್ಯಯನ ಪ್ರಾರಂಭಿಸಿದರು.  ಚಾಡ್ವಿಕ್ , ರುದರ್’ಫೋರ್ಡ್ ಜೊತೆ ಸೇರಿ ಹೀಲಿಯಂ ಧಾತುವಿನ ಬೀಜದ ಬಗೆಗೆ ವಿಶೇಷ ಅಧ್ಯಯನ ನಡೆಸಿದನು.  ಹೀಲಿಯಂನ ಬೀಜ ಆಲ್ಫಾ ಕಣವೆಂದು ವೈಜ್ಞಾನಿಕ ರಂಗದಲ್ಲಿ ಪ್ರಚಲಿತ. ಇತರ ಧಾತುವಿನ ಭಾರದ ಬೀಜಗಳಿಂದಾಗಿ, ಆಲ್ಫಾ ಕಣಗಳನ್ನು ಚದುರಿಸುವ ವಿಧಾನ ಅಭ್ಯಸಿಸಿದ ಚಾಡ್ವಿಕ್, ಆಲ್ಫಾ ಕಣದ ಧನಾವೇಶ ಮೌಲ್ಯವನ್ನು ನಿರ್ಧರಿಸಿದನು.  ಹಗುರವಾದ ಧಾತುಗಳನ್ನು ಆಲ್ಫಾ ಕಣಗಳಿಂದ ತಾಡಿಸಿ, ಅವು ಕೃತಕವಾಗಿ ಶಿಥಿಲಗೊಳ್ಳುವಂತೆ ಮಾಡಿ ಚಾಡ್ವಿಕ್ ನಾನಾ ಪ್ರಯೋಗಗಳನ್ನು ಅಭ್ಯಸಿಸಿದನು. 1932ರಲ್ಲಿ ಚಾಡ್ವಿಕ್ ಪರಮಾಣುವಿನ ಬೀಜದಲ್ಲಿ ಧನ ಕಣವಾದ ಪ್ರೋಟಾನ್ ಜೊತೆಗೆ, ವಿದ್ಯುದಾವಿಷ್ಟತೆಯಿಲ್ಲದ ಆದರೆ ಅದರಷ್ಟೇ ದ್ರವ್ಯರಾಶಿಯಯ ಮತ್ತೊಂದು ಕಣವಿರುವುದೆಂದೂ, ಮುನ್ನುಡಿದು ಅದನ್ನು ನ್ಯೂಟ್ರಾನ್ ಎಂದು ಹೆಸರಿಸಿದನು.  1920ರಲ್ಲಿ ರುದರ್’ಫೋರ್ಡ್ ಸಹ ಈ ನಿಟ್ಟಿನಲ್ಲಿ ಸಂಶಯಿಸಿದ್ದನು.  ತನ್ನ ಅನುಮಾನವನ್ನು ಖಚಿತಪಡಿಸಿಕೊಳ್ಳಲು, ಚಾಡ್ವಿಕ್ ತನ್ನವೇ ಆದ ಪ್ರಯೋಗಗಳನ್ನು ಯೋಜಿಸಿದನು,.  ಪ್ರಯೋಗಗಳ ಫಲಿತಾಂಶ ಚಾಡ್ವಿಕ್‍ನ ಊಹೆಗಳು ನಿಜವೆಂದು ಸ್ಪಷ್ಟಗೊಳಿಸಿದವು.  ನ್ಯೂಟ್ರಾನ್ ಅನಾವರಣ, ಪರಮಾಣು, ಬೈಜಿಕ ಅಧ್ಯಯನದಲ್ಲಿ ಮಹತ್ವದ ಮೈಲಿಗಲ್ಲಾಯಿತು. 1935ರಲ್ಲಿ ನ್ಯೂಟ್ರಾನ್ ಅನಾವರಣಗೊಳಿಸಿದ್ದಕ್ಕಾಗಿ ಚಾಡ್ವಿಕ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು,  ಇದಾದ ಕೆಲ ಕಾಲದಲ್ಲೇ ಸ್ಲೈಕ್ಲೋಟ್ರಾನ್ ನಿರ್ಮಾಣ ಕುರುತಾದಂತೆ ಚಾಡ್ವಿಕ್ ಹಾಗೂ ರುದರ್’ಫೋರ್ಡ್  ಮಧ್ಯೆ ಸೈದ್ಧಾಂತಿಕ ಘರ್ಷಣೆ ಉಂಟಾಯಿತು.  ಸ್ಲೈಕ್ಲೋಟ್ರಾನ್ ಪರ ಗುಂಪನ್ನು ಚಾಡ್ವಿಕ್ ಪ್ರತಿನಿಧಿಸಿದರೆ, ರುದರ್ಫೋರ್ಡ್  ಅದನ್ನು ನಖಶಿಖಾಂತ ವಿರೋಧಿಸಿದನು.  ಇದರಿಂದಾಗಿ ಚಾಡ್ವಿಕ್ ಲಿವರ್‍ಪೂಲ್‍ಗೆ ತೆರಳಿ ಬ್ರಿಟನ್‍ನ ಮೊದಲ ಸೈಕ್ಲೋಟ್ರಾನ್‍ನ ನಿರ್ಮಾಣದ ನೇತೃತ್ವ ವಹಿಸಿದನು . ಜಾಗತಿಕ ಯುದ್ದ ಪ್ರಾರಂಭವಾದಾಗ ಪ್ರತಿ ಸ್ಪರ್ಧಿಯಾದ ಜರ್ಮನಿ ಬೈಜಿಕಾಸ್ತ್ರ (Nuclear Weapon) ತಯಾರಿಸುವ ಮೊದಲೇ ಬ್ರಿಟನ್ ತಯಾರಿಸುವಂತೆ ಮಾಡುವ ಹೊಣೆ ಚಾಡ್ವಿಕ್ ಹೆಗಲ ಮೇಲೆ ಬಿದ್ದಿತು.  ಇಂಗ್ಲೆಂಡ್, ಜರ್ಮನಿಯ ಸನಿಹದಲ್ಲಿರುವುದಎಂದ, ಇಂತಹ ಯೋಜನೆ ಸದಾ ಭಯದ ನೆರಳಿನಲ್ಲೇ ಜರುಗಬೇಕಾಗಿರುವುರಿಂದ ಬೈಜಿಕಾಸ್ತ್ರ ತಯಾರಿಕೆಯನ್ನು ಅಸಂಸಂಗಳಲ್ಲಿ ಕೈಗೊಳ್ಳುವಂತೆ ನಿರ್ಧರಿಸಲಾಯಿತು,.  ಅಸಂಸಂದಲ್ಲಿ ಚಾಡ್ವಿಕ್ ಪರಮಾಣು ಅಸ್ತ್ರ ತಯಾರಿಕೆಗೆ ಭಾರಿ ಯಶಸ್ವಿಯಾದ ಚಾಲನೆ ನೀಡಿ ಅದು ಕಾರ್ಯಗತವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದನು.  ಜಾಗತಿಕ ಯುದ್ದದ ನಂತರ ತಾಯ್ನಾಡಿಗೆ ಮರಳಿದ ಚಾಡ್ವಿಕ್,  ಪರಮಾಣು ನೀತಿ ಕುರಿತಂತೆ ಬ್ರಿಟಿಷ್ ಸರ್ಕಾರಕ್ಕೆ ಸಲಹೆಗಾರನಾಗಿದ್ದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 5/1/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate