ಅ್ಯಂಡರ್‍ಸನ್ ಕಾರ್ಲ್ ಡೇವಿಡ್ (1905-91) - ೧೯೩೬
ಅಸಂಸಂ-ಭೌತಶಾಸ್ತ್ರ- ಪಾಸಿಟ್ರಾನ್ ಹಾಗೂ ಮ್ಯೂಯಾನ್ ಮೂಲ ಕಣಗಳನ್ನು ಕಂಡುಹಿಡಿದಾತ.
ಆ್ಯಂಡರ್‍ಸನ್ ಅಸಂಸಂಗೆ ವಲಸೆ ಬಂದ ಸ್ವೀಡಿಷ್ ದಂಪತಿಗಳ ಏಕೈಕ ಮಗ. ಲಾಸ್‍ಏಂಜೆಲ್ಸ್‍ನಲ್ಲಿ ಶಿಕ್ಷಣ ಪಡೆದು ಕ್ಯಾಲಿಪೆÇೀರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೊನೆಯ ತನಕ ಕಾರ್ಯನಿರ್ವಹಿಸಿದಾತ. ಡಿರಾಕ್ 1928ರಲ್ಲಿ ಭವಿಷ್ಯನುಡಿದಿದ್ದ ಪಾಸಿಟ್ರಾನ್ ಕಣವನ್ನು 1932ರಲ್ಲಿ ಆ್ಯಂಡರ್‍ಸನ್ ಆಕಸ್ಮಿಕವಾಗಿ ಆವಿಷ್ಕರಿಸಿದನು. ಇದರ ಪರಿಣಾಮವಾಗಿ ಡಿರಾಕ್‍ನ ಸಾಪೇಕ್ಷ ಕ್ವಾಂಟಂ ಬಲವಿಜ್ಞಾನ ಸಾರ್ವತ್ರಿಕ ಮನ್ನಣೆ ಪಡೆಯಿತಲ್ಲದೆ ಅವನ ಎಲೆಕ್ಟ್ರಾನ್ ಸಿದ್ಧಾಂತ ಪುರಸ್ಕೃತಗೊಂಡಿತು. ಡಿರಾಕ್ ಮುನ್ನುಡಿದಂತೆ ಪ್ರತಿಕಣಗಳ ಅಸ್ತಿತ್ವ ನಿಜವೆಂದು ಒಪ್ಪಲಾಯಿತು. ವಿ.ಎಫ್.ಹೆಸ್ ಜೊತೆಗೆ ಹಂಚಿಕೊಂಡಂತೆ ಆ್ಯಂಡರ್‍ಸನ್ 1936ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ವಿಶ್ವ ಕಿರಣಗಳ ಅಧ್ಯಯನ ಮಾಡುತ್ತಿದ್ದ ,ಆ್ಯಂಡರ್‍ಸನ್ ಪ್ರಯೋಗಗಳಲ್ಲಿ ದೊರೆತ ವಿಲಕ್ಷಣ ಫಲಿತಾಂಶಗಳನ್ನು ವಿಶ್ಲೇಷಿಸಿ , ದ್ರವ್ಯದಲ್ಲಿ ಎಲೆಕ್ಟ್ರಾನ್‍ಗೆ ಸಮನಾದ ಆದರೆ ಧನ ಆವಿಷ್ಟದ ಕಣಗಳನ್ನು ಗುರುತಿಸಿದನು. ಇವೇ ಪಾಸಿಟ್ರಾನ್‍ಗಳು, ಅ್ಯಂಡರ್ ಸನ್ ಈ ಅನಾವರಣವನ್ನು ಒಂದೇ ವರ್ಷದ ನಂತರ ಬ್ಲಾಕೆಟ್ ಹಾಗೂ ಓಖಿಯಾಲಿನಿ ಖಚಿತಗೊಳಿಸಿದರು.
1932ರಲ್ಲಿ ಆ್ಯಂಡರ್‍ಸನ್ ,ವಿಶ್ವ ಕಿರಣಗಳನ್ನು ಅಧ್ಯಯನ ಮಾಡುವಾಗಲೇ ಎಲೆಕ್ಟ್ರಾನ್‍ನ 130ರಷ್ಟು ಭಾರವಾದ, ಎಲೆಕ್ಟ್ರಾನ್‍ನಷ್ಟು I್ಮಣ ಮೌಲ್ಯವುಳ್ಳ ಪೈ ಮೆಸಾನ್ ಅಥವಾ ಪೈಯಾನ್ ಎನ್ನುವ ಮೂಲ ಕಣವನ್ನು ಗುರುತಿಸಿದನು. ಇದರಿಂದ ಯುಕೋವನ ಪ್ರಬಲ ಬೈಜಿಕ ಬಲ (Sಣಡಿoಟಿg ಓuಛಿಟeಚಿಡಿ ಈoಡಿಛಿe) ಸಂವಹನೆಯ ಸಿದ್ಧಾಂತಕ್ಕೆ ಪುರಾವೆ ಒದಗಿಸಿದಂತಾಯಿತು. ಆ್ಯಂಡರಸನ್‍ನ ಮುಂದುವರೆದ ಪ್ರಯೋಗಗಳಿಂದ ಅವನು ಗುರುತಿಸಿದ್ದು ಪೈ ಮೆಸಾನ್ ಅಲ್ಲವೆಂತಲೂ ಅದು ಮತ್ತೊಂದು ಕಣ ಮ್ಯು ಮೆಸಾನ್ ಎಂತಲೂ ಸಿದ್ಧವಾಯಿತು. ನಿಜವಾದ ಪೈ-ಮೆಸಾನ್‍ನನ್ನು 1947ರಲ್ಲಿ ಪೆÇವೆಲ್ ಮೊದಲ ಬಾರಿಗೆ ಪತ್ತೆ ಹಚ್ಚಿದನು. ಎಲೆಕ್ಟ್ರಾನ್ ಹಾಗೂ ಪಾಸಿಟ್ರಾನ್ ಸಮಾನ ಸಾಮರ್ಥ್ಯದ ಪ್ರತಿಕಣಗಳಾಗಿರುವುದರಿಂದ , ಒಂದನ್ನೊಂದು ತಾಗಿದ ತಕ್ಷಣ ವಿನಾಶಗೊಂಡು ಚೈತ್ಯ ಬಿಡುಗಡೆಯಾಗುತ್ತದೆ. ಆದ್ದಎಂದ ಪಾಸಿಟ್ರಾನ್ ಅಪರೂಪಿ ಹಾಗೂ ಮುಕ್ತ ಎಲೆಕ್ಟ್ರಾನ್ ಈ ವಿಶ್ವದಲ್ಲಿ ಅಸ್ಥಿರವೆಂದು ಈಗ ಭಾವಿಸಲಾಗಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/16/2020