ಮಿಲಿಕನ್, ರಾಬರ್ಟ್ ಆ್ಯಂಡ್ರೂಸ್ (1923--) ೧೯೨೩
ಅಸಂಸಂ-ಭೌತಶಾಸ್ತ್ರ-ಐನ್‍ಸ್ಟೀನ್ ಮತ್ತು ಮ್ಯಾಕ್ಸ್ ಪ್ಲಾಂಕ್ ಸಿದ್ಧಾಂತಗಳಿಗೆ ಪ್ರಾಯೋಗಿಕ ಸಾಕ್ಷ್ಯ ಒದಗಿಸಿದಾತ.
ಮಿಲಿಕನ್ 22 ಮಾರ್ಚ್ 1868ರಂದು ಇಲಿನಾಯ್‍ನ ಮಾರಿಸನ್ ಪಟ್ಟಣದಲ್ಲಿ ಜನಿಸಿದನು. ಈತನ ಪೂರ್ವಿಕರು ಅಸಂಸಂಗಳಿಗೆ ಬಂದು ನೆಲೆಸಿದ ಪ್ರಥಮ ಕುಟುಂಬದಲ್ಲೊಬ್ಬರಾಗಿದ್ದರು. 1886ರಲ್ಲಿ ಓಹಿಯೋದ ಒಬೆರ್ಲಿನ್ ಕಾಲೇಜನ್ನು ಸೇರಿದನು. ಇಲ್ಲಿ ಗ್ರೀಕ್ ಹಾಗೂ ಗಣಿತ ಮಿಲಿಕನ್ ನೆಚ್ಚಿನ ವಿಷಯಗಳಾಗಿದ್ದವು. 1891ರಲ್ಲಿ ಪದವಿ ಗಳಿಸಿದ ನಂತರ, ಭೌತಶಾಸ್ತ್ರದ ಶಿಕ್ಷಕನಾಗಿ ಕೆಲಸ ಮಾಡಿದನು. 1893ರಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಬೆಳಕಿನ ಧೃವೀಕರಣದ ಮೇಲೆ ಸಂಪ್ರಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದನು. 1895ರಿಂದ ಒಂದು ವರ್ಷದ ಕಾಲ ಗಟ್ಟಿಂಜೆನ್ ಹಾಗೂ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದನು. 1896ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಬೋಧಕನಾದನು. ಇಲ್ಲಿ ಭೌತಶಾಸ್ತ್ರದ ಪಠ್ಯವನ್ನು ಪರಿಷ್ಕರಿಸಿದನು. ವೈದ್ಯುತ್ ,ದೃಗ್ ಹಾಗೂ ಅಣ್ವಯಿಕ ಭೌತಶಾಸ್ತ್ರಗಳ ಅಧ್ಯಯನದಲ್ಲಿ ಮಿಲಿಕನ್ ನಿರತನಾಗಿದ್ದನು. 1910ರಲ್ಲಿ ಪತನ ಹನಿ ವಿಧಾನ ಬಳಸಿ ಮಿಲಿಕನ್ ಎಲೆಕ್ಟ್ರಾನ್‍ನ ವೈದ್ಯುತ್ ಆವಿಷ್ಟವನ್ನು ಕರಾರುವಕ್ಕಾಗಿ ನಿರ್ಧರಿಸಿದನು. ಅಲ್ಲದೆ ಇದು ಎಲ್ಲಾ ಪರಮಾಣುಗಳಿಗೆ ಸ್ಥಿರವಾಗಿರುವುದೆಂದು ಸಾಧಿಸಿದನು. ಇದರಿಂದ ವಿದ್ಯುತ್‍ಗೆ ಪರಮಾಣು ವಿವರಣೆಯ ಹಿನ್ನೆಲೆ ಒದಗಿಸಿದನು. ದ್ಯುತಿ ವೈದ್ಯುತ್ ಪರಿಣಾಮ ಕುರಿತಾಗಿ ಹಲವಾರು ಪ್ರಯೋಗಗಳನ್ನು ನಡೆಸಿ, ಐನ್‍ಸ್ಟೀನ್‍ರ ದ್ಯುತಿವೈದ್ಯುತ್ ಸಿದ್ಧಾಂತಕ್ಕೆ , ಮಾಕ್ಸ್ ಪ್ಲಾಂಕ್‍ನ ಸಿದ್ಧಾಂತಕ್ಕೆ ಪುರಾವೆ ಒದಗಿಸಿದನು. ಈ ಕೆಲಸಗಳಿಗಾಗಿ ಮಿಲಿಕನ್ 1923ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಮಿಲಿಕನ್‍ನಿಂದ ಅತಿ ನೇರಳೆ ಹಾಗೂ ಕ್ಷ ಕಿರಣ ವಿಕಿರಣಗಳ ಮಧ್ಯದ ರೋಹಿತಗಳನ್ನು ಅನಾವರuಗೊಳಿಸಿದನು. ಮೊದಲನೆ ಜಾಗತಿಕ ಯುದ್ದದ ಸಮಯದಲ್ಲಿ ಜಲಾಂತರ್ಗಾಮಿ ವಿರೋಧಿ ತಂತ್ರ ರೂಪಿಸಲು ಯತ್ನಿಸಿದನು. ಮಿಲಿಕನ್ ಉತ್ತಮ ಟೆನಿಸ್ ಹಾಗೂ ಗಾಲ್ಫ್ ಆಟಗಾರನಾಗಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019