ಫ್ರಾಂಕ್ 26 ಆಗಸ್ಟ್ 1882 ರಂದು ಹ್ಯಾಂಬರ್ಗ್‍ನಲ್ಲಿ ಜನಿಸಿದನು. ಹೈಡೆಲ್‍ಬರ್ಗ್ ವಿಶ್ವವಿದ್ಯಾಲಯ ಸೇರಿ ರಸಾಯನಶಾಸ್ತ್ರದ ಪದವಿಗೆ ನೋಂದಾಯಿಸಿಕೊಂಡಫ್ರಾಂಕ್ ಒಂದು ವರ್ಷದ ನಂತರ ಬರ್¯ನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಅಧ್ಯಯನ ಮುಂದುವರೆಸಿದನು. 1918ರಲ್ಲಿ ಮೊದಲ ಜಾಗತಿಕ ಯುದ್ದದಲ್ಲಿ ಭಾಗಿಯಾಗಿ ‘ಐರನ್ ಕ್ರಾಸ್’ ಪ್ರಶಸ್ತಿ ಪಡೆದನು. 1920ರಲ್ಲಿ ಗಟ್‍ಂಜೆನ್ ವಿಶ್ವವಿದ್ಯಾಲಯದ ಪ್ರಾಯೋಗಿಕ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ಇಲ್ಲಿ ಮ್ಯಾಕ್ಸ್ ಬಾರ್ನ್‍ನ ಸಾಂಗತ್ಯ ಫ್ರಾಂಕ್’ಗೆ ದಕ್ಕಿತು. ಇಲ್ಲಿ ಅತ್ಯುತ್ತಮ ಪ್ರಧ್ಯಾಪಕನೆಂದು ಮೇಧಾವಿ ಶಿಷ್ಯರುಗಳಿಂದ ಶ್ಲಾಘಿಸಲ್ಪಟ್ಟನು. ನಾಝಿಗಳು ಅಧಿಕಾರ ಹಿಡಿದ ನಂತರ ಅಸಂಸಂಗಳ ಬಾಲ್ಟಿಮೋರ್ ನಲ್ಲಿದ್ದ ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1938ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭೌತರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಮ್ಯಾನ್‍ಹಟ್ಟನ್ ಯೋಜನೆಯ ಕೇಂದ್ರವಾಗಿದ್ದ ಚಿಕಾಗೋ ವಿಶ್ವವಿದ್ಯಾಲಯದ ಲೌಹಿಕ ಪ್ರಯೋಗಾಲಯದ ನಿರ್ದೇಶಕನಾಗಿದ್ದನು.1947 ರಿಂದಫ್ರಾಂಕ್ ದ್ಯುತಿಸಂಶ್ಲೇಷಣಾ ಸಂಶೋಧನೆಯಲ್ಲಿ ನಿರತನಾದನು. ಹಟ್ರ್ಸ್‍ನೊಂದಿಗೆ ವಿವಿಧ ಅನಿಲಗಳಲ್ಲಿ ಮುಕ್ತ ಎಲೆಕ್ಟ್ರಾನ್‍ಗಳ ನಡವಳಿಕೆಯನ್ನು ಕುರಿತಾಗಿ ಹಲಾವಾರು ಪ್ರಯೋಗಳನ್ನು ಕೈಗೊಂಡನು. ಇದರಿಂದ ಬೊಹ್ರ್ ಅಣು ಸಿದ್ಧಾಂತಕ್ಕೆ ಪ್ರಾಯೋಗಿಕ ಸಾಕ್ಷ್ಯಗಳು ಲಭ್ಯವಾದವು. ಇದಕ್ಕಾಗುಫ್ರಾಂಕ್ 1925ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.ಫ್ರಾಂಕ್ ಜೀವನುದ್ದಕ್ಕೂ ಜೀವನ್ಮುಖಿ ನೆಲೆಯಲ್ಲಿ ಚಿಂತಿಸಿ ಅದರಂತೆ ಬದುಕಿದನು. ಜರ್ಮನಿಯಲ್ಲಿ ನಾಝಿಗಳ ಮಾನವ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ 1933ರಲ್ಲಿ ಗಟ್ಟಿಂಜೆನ್‍ನಲ್ಲಿ ತನ್ನ ಪ್ರಾಧ್ಯಾಪಕ ಹುದ್ದೆ ತೊರೆದ ಮೊದಲಿಗಫ್ರಾಂಕ್. 1945ರಲ್ಲಿ ಹಿರೋಷಿಮಾದ ಮೇಲೆ ಬೈಜಿಕಾಸ್ತ್ರ ಪ್ರಯೋಗಿಸುವ ಎರಡು ತಿಂಗಳು ಮೊದಲು ಸಹ ವಿಜ್ಞಾನಿಗಳೊಂದಿ ‘ಫ್ರಾಂಕ್ ವರದಿ ‘ ಸಿದ್ಧಪಡಿಸಿ ಜನವಸತಿ ಪ್ರದೇಶದ ಮೇಲೆ ಬೈಜಿಕಾಸ್ತ್ರದ ಬಳಕೆಯನ್ನು ತೀವ್ರವಾಗಿ ವಿರೋಧಿಸಿ, ಸರ್ಕಾರದ ನೀತಿಯ ವಿರುದ್ಧ ದನಿಯೆತ್ತಿದ ಮೊದಲಿಗರಲ್ಲೊಬ್ಬನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/24/2019