ಪೆರಿ, ಜೀನ್ ಬ್ಯಾಪ್ಟಿಸ್ಟ್ (1870-1942) ೧೯೨೬
ಫ್ರಾನ್ದ್-ಭೌತ ರಸಾಯನಶಾಸ್ತ್ರ- ಪರಮಾಣು ಅಸ್ತಿತ್ವವನ್ನು ಸಂದೇಹಕ್ಕೆಡೆಯಿಲ್ಲದಂತೆ ತೋರಿಸಿದಾತ.
ಪೆರಿನ್,ಪ್ಯಾರಿಸ್ ಲೈಯಾನ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿ, 1910ರಲ್ಲಿ ಸೊರ್‍ಬೊನ್ನೆಯಲ್ಲಿ ಭೌತ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. 1941ರಲ್ಲಿ ಅಸಂಸಂಗಳಿಗೆ ಪಲಾಯನಗೈದನು. ಡಾಕ್ಟರೇಟ್‍ನ ಸಂಶೋಧನೆಯಲ್ಲಿರುವಾಗ ಪೆರಿನ್, ಕ್ಯಾಥೋಡ್ ಕಿರಣಗಳನ್ನು ಅಭ್ಯಸಿಸಿ ಅವು ಋಣಾತ್ಮಕ ಆವಿಷ್ಟ ಹೊಂದಿವೆಯೆಂದು ತೋರಿಸಿದನು. ಅವುಗಳ ಹಾಗೂ ಹಾಗೂ ದ್ರವ್ಯದ ಅಂದಾಜು ನೀಡಿದನು. ಪೆರಿನ್, ಕ್ಯಾಥೋಡ್ ಕಿರಣಗಳು ಅಲೆಗಳಲ್ಲವೆಂದು , ಅವು ಕಣಗಳೆಂದು ಸಂಶಯಾತೀತವಾಗಿ ಸಾಧಿಸಿದನು. ಜೆ.ಜೆ. ಥಾಮ್ಸನ್ ಪೆರಿನ್‍ನ ಪ್ರಯೋಗಗಳನ್ನು ಪರಿಷ್ಕರಿಸಿ ಈ ಕಣಗಳು ಎಲೆಕ್ಟ್ರಾನ್‍ಗಳೆಂದು ತೋರಿಸಿದನು. 1908ರಲ್ಲಿ ಪೆರಿನ್ ಕಾಂಬೋಡಿಯಾ ವೃಕ್ಷ ಗ್ಯಾಂಬೇಜ್ ರಾಳದಲ್ಲಿನ ಕಣ ವಿತರಣೆ ಹಾಗೂ ಚಲನೆಯನ್ನು ಬ್ರೌನಿಯನ್ ಚಲನೆಯ ಹಿನ್ನೆಲೆಯಲ್ಲಿ ವಿವರಿಸಿದನು. ಇದು ಐನ್‍ಸ್ಟೀನ್ ನೀಡಿದ ಸೈದ್ಧಾಂತಿಕ ವಿವರಗಳಿಗೆ ಬೆಂಬಲ ನೀಡಿತು. ಪೆರಿನ್, ಅವೋಗ್ಯಾಡ್ರೋ ಸಂಖ್ಯೆಯನ್ನು ಕರಾರುವಕ್ಕಾಗಿ ನಿರ್ಧರಿಸಿದನು. ಪರಮಾಣುಗಳ ಅಸ್ತಿತ್ವದ ಸಾಕ್ಷ್ಯ ಒದಗಿಸಿದ್ದಕ್ಕಾಗಿ ಪೆರೇನ್ 1926ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/6/2019