ಓವೆನ್, ವಿಲಿಯಂ ರಿಚರ್ಡ್‍ಸನ್ (1879-1959) ೧೯೨೮
ಇಂಗ್ಲೆಂಡ್-ಭೌತಶಾಸ್ತ್ರ-ವಿದ್ಯುತ್ ವಿಸರ್ಜನೆ ನಿಯಮ ನೀಡಿದಾತ.
ವಿಲಿಯಂ 26 ಏಪ್ರಿಲ್ 1879ರಂದು ಜನಿಸಿದನು. ಬೌಟ್ಲಿ ಗ್ರ್ಯಾಮರ್ ಶಾಲೆಯಿಂದ ಪ್ರೌಢಶಿಕ್ಷಣ ಮುಗಿಸಿ, 1879ರಲ್ಲಿ, ವಿದ್ಯಾರ್ಥಿ ವೇತನ ಪಡೆದು ಟ್ರಿನಿಟಿ ಕಾಲೇಜನ್ನು ಸೇರಿದನು. ಕೇಂಬ್ರಿಜ್ ಹಾಗೂ ಲಂಡನ್ ವಿಶ್ವವಿದ್ಯಾಲಯಗಳಿಂದ ಅತ್ಯುತ್ತಮ ಶ್ರೇಣಿಯಲ್ಲಿ ಪದವಿ ಗಳಿಸಿದನು. 1900ರಲ್ಲಿ ಪದವಿ ಮುಗಿಸಿದ ತಕ್ಷಣವೇ, ಕ್ಯಾವೆಂಡಿಷ್ ಪ್ರಯೋಗಾಲಯ ಸೇರಿ ಬಿಸಿ ಕಾಯಗಳಿಂದ ಹೊಮ್ಮುವ ಅಧ್ಯಯನ ಪ್ರಾರಂಭಿಸಿದನು. 1902ರಲ್ಲಿ ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಅಯ್ಕೆ ಹೊಂದಿದನು. 25 ನವೆಂಬರ್ 1901ರಲ್ಲಿ ಕೇಂಬ್ರಿಜ್‍ನ ಫಿಲಾಸಫಿಕಲ್ ಸೊಸೈಟಿಯಲ್ಲಿ ಕಾದ ಲೋಹಗಳಿಂದ ಹೊರ ಹೊಮ್ಮುವ ವಿದ್ಯುತ್ ನಿಯಮ ನೀಡಿದನು. ಇದನ್ನು ಮುಂದೆ ಹಲವಾರು ಜನರು ಪ್ರಯೋಗಗಳಿಂದ ಸರಿಯೆಂದು ತೋರಿಸಿದರು. ಇದಕ್ಕಾಗಿ ವಿಲಿಯಂ 1928ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. 1906 ರವರೆಗೆ ಇದೇ ವಿಷಯವನ್ನು ಕುರಿತಾಗಿ ವಿಲಿಯಂ ಇನ್ನು ಹೆಚ್ಚಿನ ಪ್ರಯೋಗಗಳನ್ನು ನಡೆಸಿದನು. ಈ ಕಾಲದಲ್ಲಿ ವಿಲಿಯಂ ಅಸಂಸಂಗಳ ಪ್ರಿನ್ಸ್’ಟನ್ ವಿಶ್ವವಿದ್ಯಾಲಯದಲ್ಲಿದ್ದನು. 1913ರ ತನಕ ಇಲ್ಲಿಯೇ ಇದ್ದ ವಿಲಿಯಂ ಈ ಕಾಲದಲ್ಲಿ ಔಷ್ಣೀಯ ವಿಸರ್ಜನೆ , ದ್ಯುತಿ ವೈದ್ಯುತ್ ಪರಿಣಾಮ ಗೈರೋಕಾಂತೀಯ ಪರಿಣಾಮಗಳ ಬಗೆಗೆ ಸಂಶೋಧನೆ ಮಾಡಿದನು. 1911ರಲ್ಲಿ ಅಮೆರಿಕನ್ ಫಿಲಾಸಫಿಕಲ್ ಸೊಸೈಟಿಯ ಸದಸ್ಯನಾಗಿ, 1913ರಲ್ಲಿ ಲಂಡನ್‍ನ ರಾಯಲ್ ಸೊಸೈಟಿಯ ಫೆಲೋ ಆಗಿ ನೇಮಕಗೊಂಡನು. 1914ರಲ್ಲಿ ತಾಯ್ನಾಡಾದ ಇಂಗ್ಲೆಂಡ್‍ಗೆ ಮರಳಿ ಲಂಡನ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾದನು. 1920ರಲ್ಲಿ ರಾಯಲ್ ಸೊಸೈಟಿಯ ಹ್ಯೂಗ್ಸ್ ಪದಕ ದಕ್ಕಿತು. 1939ರಲ್ಲಿ ನೈಟ್ ಪದವಿ ಪ್ರಧಾನವಾಯಿತು. 1914 ಎಂದ ರಾಸಾಯನಿಕ ಕ್ರಿಯಾ ಮೂಲವಾದ ಎಲೆಕ್ಟ್ರಾನ್ ಸಿದ್ಧಾಂತ, ಕ್ವಾಂಟಂ ಅಧ್ಯಯನ ನಡೆಸಿದನು. ಎಲೆಕ್ಟ್ರಾನ್ ಸಿದ್ಧಾಂತ, ಕ್ವಾಂಟಂ ಸಿದ್ಧಾಂತ ಅಣ್ವಯಿಕ ಜಲಜನಕ ರೋಹಿತ, ಮೆದು ಕ್ಷ ಕಿರಣಗಳ ಕುರಿತಾಗಿ ವಿಲಿಯಂ ವಿಶೇಷ ಆಸಕ್ತಿ ಹೊಂದಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 9/25/2019