ಅರ್ಥರ್, ಹೋಲಿ ಕಾಂಪ್ಟನ್ (1892--) -೧೯೨೭
ಜರ್ಮನಿ-ಭೌತಶಾಸ್ತ್ರ-ಎಲೆಕ್ಟ್ರಾನ್‍ಗಳ ಚೈತನ್ಯ ನಷ್ಟ ವಿವರಿಸಿದಾತ.
ಕಾಂಪ್ಟನ್ ತಂದೆ ವೋಸ್ಟರ್‍ನ ಡೀನ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. 10 ಸೆಪ್ಟೆಂಬರ್ 1892 ರಂದು ಕಾಂಪ್ಟನ್ ಜನಿಸಿದನು.1913ರಲ್ಲಿ ವಿಜ್ಞಾನದಲ್ಲಿ ಪದವಿ ಗಳಿಸಿ, 1914ರಲ್ಲಿ ಪ್ರಿನ್ಸ್‍ಟನ್”ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿ 1916ರಲ್ಲಿ ಡಾಕ್ಟರೇಟ್ ಗಳಿಸಿದನು. ಇದಾದ ನಂತರ ಮಿನ್ನೆಸೋಟಾದಲ್ಲಿ ಭೌತಶಾಸ್ತ್ರದ ಉಪನ್ಯಾಸಕನಾದನು 1919ರಲ್ಲಿ ವೆಸ್ಟಿಂಗ್ ಹೌಸ್ ಲ್ಯಾಂಪ್ ಕಂಪನಿ ಸೇರಿ, ಅಲ್ಲಿ ಸಂಶೋಧಕನಾಗಿ ವೃತ್ತಿ ಜೀವನ ಮುಂದುವರೆಸಿದನು. 1920ರಲ್ಲಿ ಸೇಂಟ್ ಲೂಯಿಯಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1923ರಲ್ಲಿ ಚಿಕಾಗೋ ವಿಶ್ವವಿದ್ಯಾಲಯಕ್ಕೆ ಹೋಗಿ ಪ್ರಾಧ್ಯಾಪಕನಾದನು. 1945ರಲ್ಲಿ ಸೇಂಟ್ ಲೂಯಿಗೆ ಮರಳಿ ಛಾನ್ಸೆಲರ್‍ನಾಗಿ ನೇಮಕಗೊಂಡಿದ್ದನು. 1954ರಲ್ಲಿ ಇಲ್ಲಿಂದ ನಿವೃತ್ತನಾಗಿ ಜೀವನದ ಕೊನೆಯತನಕ ವಾಷಿಂಗ್ಟನ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕನಾಗಿದ್ದನು. ಕಾಂಪ್ಟನ್ ಪ್ರಿನ್ಸ್‍ಟನ್‍ನಲ್ಲಿ ತನ್ನ ಆರಂಭಿಕ ಸಂಶೋಧನಾ ಜೀವನ ಪ್ರಾರಂಭಿಸಿದಾಗ, ಭೂಮಿಯ ಆವರ್ತನೆಯನ್ನು ಪ್ರದರ್ಶಿಸುವ ವಿಧಾನ ರೂಪಿಸಿದನು. ಇದಾದ ಅಲ್ಪಾವಧಿಯಲ್ಲೇ ಕ್ಷ ಕಿರಣಗಳತ್ತ ತಿರುಗಿದನು. ಸ್ಪಟಿಕಗಳಿಂದ ಪ್ರತಿಫಲಿತಗೊಂಡ ಕ್ಷ ಕಿರಣಗಳ ತೀವ್ರತೆಯನ್ನು ಅಳೆದು, ಅದರ ಅಣುರಚನೆ ನಿರ್ಧರಿಸುವ ಸಿದ್ಧಾಂತವನ್ನು ಕಾಂಪ್ಟನ್ ಮಂಡಿಸಿದನು.
1918ರಲ್ಲಿ ಕ್ಷ ಕಿರಣಗಳ ಚದುರಿಕೆಯ ಅಧ್ಯಯನ ಪ್ರಾರಂಭಿಸಿದನು. ಇದನ್ನು ಕುರಿತಾದ ಪ್ರಯೋಗಗಳಿಂದ 1922ರಲ್ಲಿ ಮುಕ್ತ ಎಲೆಕ್ಟ್ರಾನ್‍ಗಳಿಗೆ ಸಂಘಟ್ಟಿಸಿ ಚದುರಿದ ಕ್ಷ ಕಿರಣದ ತರಂಗಾಂತರ (Wave Length) ದೀರ್ಘವಾಗುವುದು ತಿಳಿದು ಬಂದಿತು. ಇದರಿಂದ ಸಂಘಟನೆಯ ನಂತರ ಕ್ಷ ಕಿರಣಗಳಲ್ಲಿ ಮೊದಲಿಗಿಂತಲೂ ಅಲ್ಪ ಚೈತನ್ಯವಿರುವುದು ಖಚಿತವಾಯಿತು. ಈಗ ಇದನ್ನು ಕಾಂಪ್ಟನ್ ಪರಿಣಾಮವೆಂದು ಕರೆಯಲಾಗುತ್ತಿದೆ. ಕಾಂಪ್ಟನ್ ಸಿದ್ಧಾಂತ, ವೈದ್ಯುತ್ ಕಾಂತೀಯ ಅಲೆಗಳ ಕಣ ಸ್ವರೂಪಕ್ಕೆ ಸಾಕ್ಷ್ಯಗಳನ್ನು ಒದಗಿಸಿತು. ಮುಂದೆ ಸಿ. ಟಿ. ಅರ್ ವಿಲ್ಸನ್ ತಾನು ನಿರ್ಮಿಸಿದ ಮೇಘಕೋಠಿಯಲ್ಲಿ (Cloud Chamber) ಸಂಘಟ್ಟನೆಯಿಂದ ಹಿಂದಕ್ಕೆ ಸರಿಸಲ್ಪಟ್ಟ ಎಲೆಕ್ಟ್ರಾನ್‍ಗಳ ಜಾಡನ್ನು ಪಡೆದು ಕಾಂಪ್ಟನ್ ತೀರ್ಮಾನಗಳಿಗೆ ಸುಸ್ಪಷ್ಟವಾದ ಪುರಾವೆಗಳನ್ನು ಒದಗಿಸಿದನು. ಕಾಂಪ್ಟನ್ ಹಾಗೂ ಫ್ಲೆಕ್ಸೆನರ್ ಸಹಘಟನಾ ವಿಧಾನದಿಂದ ಕಾಂಪ್ಟನ್ ಪರಿಣಾಮಕ್ಕೆ ಪ್ರಾಯೋಗಿಕ ಸಾಕ್ಷ್ಯ ಒದಗಿಸಿದರು. ಜರ್ಮನಿಯ ವಿಜ್ಞಾನಿಗಳಾದ ಬೋಥೆ ಹಾಗೂ ಗೀಗರ್, ಸ್ವತಂತ್ರವಾಗಿ, ಇದೇ ಕಾಲಕ್ಕೆ ಇಂತಹದೇ ವಿಧಾನ ಅಭಿವೃದ್ದಿಗೊಳಿಸಿದರು. ಇವೆಲ್ಲ ಸಂಶೋಧನೆಗಳಿಗಾಗಿ ಕಾಂಪ್ಟನ್, ಟಿ.ಆರ್.ವಿಲ್ಸನ್ ನೊಂದಿಗೆ 1927ರ ನೊಬೆಲ್ ಪ್ರಶಸ್ತಿ ಪಡೆದನು. ಕಾಂಪ್ಟನ್, ಸಿ.ಎ¥sóï.ಹೆಗೆನ್ ಜೊತೆಗೂಡಿ ಕ್ಷ-ಕಿರಣಗಳ ಸಂಪೂರ್ಣ ಆಂತರಿಕ ಪ್ರತಿಫಲನ, ಹಾಗೂ ಸಂಪೂರ್ಣ ಧೃವೀಕರಣದ ವಿದ್ಯಾಮಾನಗಳ ಅಸ್ತಿತ್ವವನ್ನು ಪ್ರಯೋಗಗಳಿಂದ ತೋರಿಸಿದನು. ಇದರಿಂದ ಪರಮಾಣುವಿನಲ್ಲಿರುವ ಎಲೆಕ್ಟ್ರಾನ್‍ಗಳನ್ನು ಕರಾರುವಾಕ್ಕಾಗಿ ನಿರ್ಧರಿಸುವುದು ಸಾಧ್ಯವಾಯಿತು. ಕಾಂಪ್ಟನ್ ಹಾಗೂ ಡೋವನ್, ರೇಖಿತಫಲಕ (Grating) ಬಳಸಿ, ಕ್ಷ-ಕಿರಣಗಳ ತರಂಗಾಂತರ ನಿರ್ಧರಿಸಿದರು. ಇವುಗಳನ್ನು ಬಳಸಿ ಅವೋಗ್ಯಾಡ್ರೊ ಸಂಖ್ಯೆಯನ್ನು ನಿರ್ಧರಿಸಿದಾಗ ಎಲೆಕ್ಟ್ರಾನ್‍ಗಿರುವ ಆವೇಶದ ಪರಿಷ್ಕೃತ ಮೌಲ್ಯ ದಕ್ಕಿತು. 1930ರಿಂದ 1940ರ ಅವಧಿಯಲ್ಲಿ ಭೂಮಿಯ ವಿವಿಧ ಭಾಗಗಳಲ್ಲಿನ ವಿಶ್ವ ಕಿರಣಗಳ ತೀವ್ರತೆ ಹಾಗೂ ಸಾಂದ್ರತೆಯನ್ನು ನಿರ್ಧರಿಸುವ ಯೋಜನೆಯ ಮುಂದಾಳುವಾಗಿದ್ದನು.
1927ರಲ್ಲಿ ಜೆ. ಕ್ಲೇ ವಿಶ್ವ ಕಿರಣಗಳ ಸಾಂದ್ರತೆಯ ಮೇಲೆ ಅಕ್ಷಾಂಶಗಳ ಪರಿಣಾಮವಿರುವುದನ್ನು ಹೇಳಿದ್ದನು. ಕಾಂಪ್ಟಾನ್ ನೇತೃತ್ವದ ತಂಡದ ಸಂಶೋಧನೆಯಿಂದ ಇದು ಸರಿಯೆಂದು ಆದರೆ ಇದಕ್ಕೆ ಭೂಸ್ಥಾನಕ್ಕಿಂತಲೂ ಭೂಕಾಂತತ್ವವೇ ಪ್ರಮುಖ ನಿರ್ಧಾರಕ ಅಂಶವೆಂದು ತೀರ್ಮಾನಿಸಿದನು. ಇದರ ಆಧಾರದ ಮೇಲೆ ಭೂಕಾಂತತ್ವದ ತೀವ್ರತೆ ನಿರ್ಧರಿಸುವ ವಿಧಾನಗಳು ರೂಪುಗೊಂಡವು. ಕಾಂಪ್ಟನ್ ಹಲವಾರು ಪ್ರೌಢಲೇಖನಗಳನ್ನು ಖ್ಯಾತ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಿಸಿದನು. ಅಸಂಸಂದ ಅಕಾಡೆಮಿ ಆಫ್ ಆಟ್ರ್ಸ್ ಅಂಡ್ ಸೈನ್ಸಸ್‍ನ ರುಮ್ಫೋರ್ಡ್ ಪದಕ 1927ರಲ್ಲಿ ಕಾಂಪ್ಟನ್‍ಗೆ ಪ್ರದಾನಿಸಲ್ಪಟ್ಟಿತು. 1928ರಲ್ಲಿ ರೇಡಿಯೋ ಲಾಜಿಕಲ್ ಸೊಸೈಟಿ ಆಫ್ ನಾರ್ಥ್ ಅಮೆರಿಕಾದ ಪದಕ, ಹ್ಯೂಗ್ಸ್ ಪದಕ 1940ರಲ್ಲಿ ಫ್ರಾಂಕ್ಲಿನ್ ಪದಕಗಳ ಗೌರವ ಕಾಂಪ್ಟನ್‍ನ್ನು ಅರಸಿ ಬಂದವು. ಹಲವಾರು ಗೌರವ, ಪದಕ, ಪ್ರಾಧ್ಯಾಪಕ ಹುದ್ದೆಗಳು, ತಂಡಗಳ ನೇತೃತ್ವದ ಜವಾಬ್ದಾರಿ ಕಾಂಪ್ಟನ್ ಜೀವನ ತುಂಬಿ ತುಳುಕಿದವು. 1941ರಲ್ಲಿ ಪರಮಾಣು ಚೈತನ್ಯವನ್ನು ಯುದ್ದಾಸ್ತ್ರವಾಗಿ ಬಳಸುವ ಸಾಧ್ಯತೆಯ ಅಧ್ಯಯನಕ್ಕಾಗಿ ಅಸಂಸಂ, ಸ್ಥಾಪಿಸಿದ ಸಮಿತಿಯ ಕಾರ್ಯದರ್ಶಿಯಾಗಿ ಕಾಂಪ್ಟನ್ ನೇಮಕಗೊಂಡನು. ಇದರ ಪರಿಣಾಮವಾಗಿ ಎನ್ರಿಕೋ ಫರ್ಮಿ, ಎಲ್ ಝಿಲಾರ್ಡ್, ಇ. ಪಿ. ವಿಗ್ನರ್ ಹಾಗೂ ಇತರರ ನೆರವಿನಲ್ಲಿ ಮೊಟ್ಟ ಮೊದಲ ನಿಯಂತ್ರಿತ ಯುರೇನಿಯಂ ವಿದಳನ (Fission) ಸ್ಥಾವರ ನಿರ್ಮಾಣಗೊಂಡಿತು. ಮುಂದೆ ಇದು ವಾಷಿಂಗ್ಟನ್ ಹ್ಯಾನ್‍ಪೆÇೀರ್ಡ್‍ನಲ್ಲಿ ಬೃಹತ್ ಪ್ಲುಟೋನಿಯಂ ಉತ್ಪಾದಿಸುವ ಸ್ಥಾವರದಲ್ಲಿ ಕೊನೆಗೊಂಡಿತು. ಇದರಿಂದ ಹಿರೋಷಿಮಾ, ನಾಗಸಾಕಿಗಳ ಮೇಲೆ ಪ್ರಯೋಗಿಸಿದ ಬೈಜಿಕಾಸ್ತ್ರ (Nuclear Weapon) ತಯಾರಾಯಿತು. ಪರಮಾಣು ಅಸ್ತ್ರ ಬಳಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದವರಲ್ಲಿ ಕಾಂಪ್ಟನ್ ಪ್ರಮುಖನು. ಬಿಡುವಿನ ವೇಳೆಯನ್ನು ಟೆನಿಸ್ ಆಟ ಸಂಗೀತ, ಛಾಯಾಗ್ರಾಹಣದಲ್ಲಿ ಕಳೆಯುತ್ತಿದ್ದ ಕಾಂಪ್ಟನ್ 15 ಮಾರ್ಚ್ 1962ರಂದು ನಿಧನನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/11/2020