ಬ್ರಾಗ್ , ಸರ್ ವಿಲಿಯಂ (ಹೆನ್ರಿ) (1862-1942) -೧೯೧೫
ಬ್ರಿಟನ್-ಭೌತಶಾಸ್ತ್ರ- ಕ್ಷ-ಕಿರಣಗಳ ಲಾಕ್ಷಣಿಕ ರೋಹಿತ ಅನಾವರಣಗೊಳಿಸಿದಾತ. ತನ್ನ ಮಗನಾದ ಬ್ರಾಗ್ ಸರ್ ಲಾರೆಸ್ಸ್ ಜೊತೆ ಕ್ಷ-ಕಿರಣ ಸ್ಫಟಿಕಾಲೇಖ ವಿಧಾನಗಳನ್ನು ಅಭಿವೃದ್ದಿಗೊಳಿಸಿದಾತ.
ನಲವತ್ತು ವಯಸ್ಸಿನ ನಂತರ ಸಂಶೋಧನೆಗಳಿಂದ ಕೈ ಬೆರಳೆಣಿಕೆಯ ಸಂಶೋಧಕರ ಪಟ್ಟಿಗೆ ವಿಲಿಯಂ ಬ್ರಾಗ್ ಸೇರುತ್ತಾನೆ. 1912ರ ನಂತರ ವಿಲಿಯಂ ತನ್ನ ಮಗ ಲಾರೆನ್ಸ್‍ನನ್ನು ಸಹ ಸಂಶೋಧಕವಾಗಿಸಿಕೊಂಡನು. ಕೇಂಬ್ರಿಜ್‍ನಲ್ಲಿ ಓದಿದ ವಿಲಿಯಂ 1886ರಲ್ಲಿ ಅಡಿಲೇಡ್‍ನಲ್ಲಿ ಗಣಿತದ ಪ್ರಾಧ್ಯಾಪಕನಾದನು 1904ಎಂದ ವಿಕಿರಣಶೀಲತೆಯ ಬಗೆಗೆ ತೀವ್ರ ಸಂಶೋಧನೆ ಕೈಗೊಂಡ ವಿಲಿಯಂ, 1909ರಲ್ಲಿ ಲೀಡ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾದ ನಂತರ ವಾನ್ ಲಾಯೆ ನಡೆಸಿದ ಸಂಶೋಧನೆಗಳಿಂದ ಪ್ರೇರಿತನಾಗಿ ಕ್ಷ-ಕಿರಣಗಳ ಅಧ್ಯಯನದಲ್ಲಿ ತೊಡಗಿದನು. 1913ರಲ್ಲಿ ವಿಲಿಯಂ, ಅಧಿಕ ಚೈತನ್ಯದ ಎಲೆಕ್ಟ್ರಾನ್‍ಗಳನ್ನು ಪ್ಲಾಟಿನಂ ಫಲಕಕ್ಕೆ ತಾಡಿಸಿದಾಗ ದೊರಕುವ ಕ್ಷ-ಕಿರಣಗಳ ರೋಹಿತದಲ್ಲಿ ಪ್ಲಾಟಿನಂ ಧಾತುವಿನ ಲಕ್ಷಣಗಳಿರುವ ಹಲವಾರು ಸಾಲುಗಳನ್ನು ವಿಲಿಯಂ ಗಮನಿಸಿದನು, ಮೋಸ್ಲೆ, ಇದೇ ಕಾಲಕ್ಕೆ , ಕ್ಷ-ಕಿರಣಗಳ ರೋಹಿತವನ್ನು , ಬೇರೆಯ ಸಂಶೋಧನೆಗಳ ಬಳಸಿಕೊಳ್ಳುವ ಹುನ್ನಾರದಲ್ಲಿದ್ದನು. ವಿಲಿಯಂ ಮಗ ಲಾರೆನ್ಸ್ ಜೊತೆಗೂಡಿ ಪ್ಲಾಟಿನಂಗೆ ಬದಲಾಗಿ, ಹಲವಾರು ಸ್ಪಟಿಕಗಳನ್ನು ಬಳ¸ ಕ್ಷ-ಕಿರಣಗಳ ರೋಹಿತಗಳನ್ನು ಪಡೆದು. ಸ್ಫಟಿಕಾಲೇಖ ವಿಧಾನಕ್ಕೆ ನಾಂದಿ ಹಾಡಿತು. ವಿಲಿಯಂ 1915ರಲ್ಲಿ ಲಂಡನ್ ವಿಶ್ವವಿದ್ಯಾಲಯದ ಕಾಲೇಜಿನ ಪ್ರಾಧ್ಯಾಪಕನಾಗಿ, ಜಾಗತಿಕ ಯುದ್ದದ ಸಮಯದಲ್ಲಿ, ಜಲಾಂತರ್ಗಾಮಿಗಳನ್ನು ಗುರುತಿಸುವ ವಿಧಾನ ಹಾಗೂ ಉಪಕರಣಗಳನ್ನು ನಿರ್ಮಿಸಲು ಯತ್ನಿಸಿದನು. 1923ರಲ್ಲಿ ವಿಲಿಯಂ ರಾಯಲ್ ಇನ್ಸ್‍ಟಿಟ್ಯೂಷನ್ ನಿರ್ದೇಶಕನಾದನು. ಇಡೀ ನೊಬೆಲ್ ಚರಿತ್ರೆಯಲ್ಲಿ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡ ಏಕೈಕ ತಂದೆ-ಮಗರ ಜೋಡಿ0iÉುಂದರೆ ವಿಲಿಯಂ ಹಾಗೂ ಲಾರೆನ್ಸ್ ಮಾತ್ರ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019