ಜರ್ಮನಿ-ಭೌತಶಾಸ್ತ್ರ- ಕಪ್ಪು ಕಾಯಗಳ ವಿಕಿರಣ ಶೀಲತೆಯ ಚೈತನ್ಯ ವಿವರಣೆ ಸೂತ್ರ ನೀಡಿದಾತ.
ರೈತ ಕುಟುಂಬದಲ್ಲಿ ಜನಿಸಿದ ವೀನ್, ರೈತನಾಗಬೇಕೆಂದು ಬಯಸಿದ್ದನು. ಕೆಲಕಾಲ ಗಟ್ಟಿಂಜೆನ್‍ನಲ್ಲಿ ವ್ಯಾಸಂಗ ಮಾಡಿದ ವೀನ್ 1884ರಲ್ಲಿ ಬರ್ಲಿನ್‍ನಲ್ಲಿ ಪದವಿ ಗಳಿಸಲು ಕಾಲೇಜಿಗೆ ಸೇರಿದನು. 1886ರಲ್ಲಿ ಬೆಳಕಿನ ವಕ್ರೀಭವನ, ಬೆಳಕಿನ ಹೀರಿಕೆಯನ್ನು ಕುರಿತಾಗಿ ಸಂಪ್ರಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದನು. ತಕ್ಷಣ ಹುಟ್ಟೂರಿಗೆ ಹೋಗಿ ಕೃಷಿಯಲ್ಲಿ ನಿರತನಾದನು. ನಾಲ್ಕು ವರ್ಷಗಳ ಸತತ ಬರಗಾಲದಿಂದ ತತ್ತರಿಸಿದ ವೀನ್ ತನ್ನ ಹೊಲಗಳನ್ನು ಮಾರಿ, ಬರ್ಲಿನ್‍ಗೆ ಹೋಗಿ ಹೆಲ್ಮ್’ಹೋಲ್ಟ್ಸ್’ನ ಸಹಾಯಕನಾದನು. 1900ರಲ್ಲಿ ವುರ್ಜ್‍ಬರ್ಗ್‍ನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡನು. 20 ವರ್ಷಗಳ ನಂತರ, ಮ್ಯೂನಿಕ್‍ನಲ್ಲಿ ರಾಂಟ್‍ಜೆನ್ ನಿಂದ ತೆರವಾದ ಸ್ಥಾನ ಅಲಂಕರಿಸಿದನು.
1892ರಲ್ಲಿ ವೀನ್ ಕಪ್ಪುಕಾಯಗಳ ವಿಕಿರಣದ ಬಗ್ಗೆ ಸಂಶೋಧನೆ ಪ್ರಾರಂಭಿಸಿದನು. ಈ ಸಂಶೋಧನೆ ಅಭಿಜಾತ ಭೌತಶಾಸ್ತ್ರ, ಕ್ವಾಂಟಂ ಬಲವಿಜ್ಞಾನದತ್ತ ತಿರುಗುವಂತೆ ಮಾಡಿತು. ವೀನ್ ಕಪ್ಪು ಕಾಯ ನಿರ್ದಿಷ್ಟ ತಾಪಮಾನದಲ್ಲಿ ಸೂಸುವ ವಿಕಿರಣಗಳ ಚೈತನ್ಯ ನಿರ್ಧರಿಸುವ ಸೂತ್ರ ನೀಡಿದನು. ಈ ಸೂತ್ರದಲ್ಲಿನ ಸ್ಥಿರಾಂಕವನ್ನು ಲುಮ್ಮೆರ್ ಹಾಗೂ ಇ. ಪ್ರಿಂಗ್‍ಷಿಮ್ ಅಳೆದರು. ಇದು ವೀನ್ ಪಲ್ಲಟ ನಿಯಮವೆಂದು ಖ್ಯಾತವಾಯಿತು. ಇದರ ಪ್ರಕಾರ ಕೆಂಪೇರಿದ ತಾಪಮಾನದಲ್ಲಿರುವ ಕಪ್ಪು ಕಾಯವನ್ನು ಇನ್ನೂ ಹೆಚ್ಚು ಕಾಯಿಸಿದಾಗ, ಕಿರು ತರಂಗಾಂತರದ ವಿಕಿರಣವನ್ನು ಹೊರ ಸೂಸಿ ಬಿಳಿ ವರ್ಣ ತಾಳುತ್ತದೆ. ಈಗ ಗರಿಷ್ಟ ವಿಕಿರಣದ ತಾಪಮಾನ ದೀರ್ಘ ತರಂಗಾಂತರಗಳಿಂದ ದೃಗ್ಗೋಚರ ವಿಕಿರಣದ ಕೇಂದ್ರದತ್ತ ಸರಿಯುತ್ತದೆ. 1896ರಲ್ಲಿ ಈ ಸೂತ್ರದ ನೆರವಿನಿಂದ ವೀನ್, ವಿಕಿರಣದ ರೋಹಿತದಲ್ಲಿನ ಚೈತನ್ಯ, ಅದರ ತರಂಗಾಂತರ ಹಾಗೂ ತಾಪಮಾನಗಳಿಗೆ ಅನುಲೋಮವಾಗಿರುವುದೆಂದು ವಿವರಿಸಿದನು. ವೀನ್ ಸೂತ್ರ ಹ್ರಸ್ವ ತರಂಗಾಂತರಗಳಿಗೆ ಸಮರ್ಪಕವಾಗಿದ್ದರೆ, ದೀರ್ಘ ತರಂಗಾಂತರಗಳಿಗೆ ತಪ್ಪಾಗಿರುತ್ತದೆ. ರ್ಯಾಲೆ, ದೀರ್ಘ ತರಂಗಾಂತರಗಳಿಗೆ ಸಮರ್ಪಕವಾದ ಆದರೆ ಹ್ರಸ್ವ ತರಂಗಾಂತರಗಳಿಗೆ ಅನ್ವಯವಾಗದ ಕಪ್ಪು ಕಾಯ ವಿಕಿರಣ ಸೂತ್ರ ನೀಡಿದನು. ಇಂತಹ ವ್ಯತ್ಯಾಸಕ್ಕೆ ಕಾರಣ ಹುಡುಕ ಹೊರಟ ಪ್ಲಾಂಕ್ ಚೈತನ್ಯ ಪೆÇಟ್ಟಣಗಳ ರೂಪದಲ್ಲಿ ಹೊರ ಹೊಮ್ಮುವುದೆಂದು ಭಾವಿಸಿದರೆ, ಹ್ರಸ್ವ ಹಾಗೂ ದೀರ್ಘ ತರಂಗಾಂತರಗಳೆರಡಕ್ಕೂ ಸರಿ ಹೊಂದುವ ವಿವರಣೆ ನೀಡಬಹುದೆಂದು ತಿಳಿಸಿದನು. ಅಭಿಜಾತಶಾಸ್ತ್ರದಲ್ಲಿ ಇಂತಹ ಪೊಟ್ಟಣ ರೂಪದ ಚೈತನ್ಯಗಳ ಪರಿಕಲ್ಪನೆಗೆ ಅವಕಾಶಗಳಿರಲಿಲ್ಲ. 1900ರಲ್ಲಿ ಪ್ಲಾಂಕ್ ತನ್ನ ಕ್ವಾಂಟಂ ಸಿದ್ಧಾಂತ ಮಂಡಿಸಿದನು. ಇದು ಭೌತಶಾಸ್ತ್ರದಲ್ಲಿ ಕ್ರಾಂತಿ ತಂದಿತು. 1911 ರಲ್ಲಿ ವೀನ್ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/11/2020