ಲೌ, ಮ್ಯಾಕ್ಸ್ (ಥಿಯೋಡರ್ ಫೆಲಿಕ್ಸ್) –(1879-1960) ೧೯೧೪
ಜರ್ಮನಿ-ಭೌತಶಾಸ್ತ್ರ-ಸ್ಪಟಿಕಗಳಲ್ಲಿ ಅಣುಗಳಿಂದ ಕ್ಷ-ಕಿರಣಗಳು ವಕ್ರಿಭವನಗೊಳ್ಳುವುದನ್ನು (Refraction) ಪರೀಕ್ಷಿಸುವ ಪ್ರಯೋಗ ಸೂಚಿಸಿದಾತ.
ಲೌ, ಭೌತಶಾಸ್ತ್ರವನ್ನು ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದನು. ಎರಡು ವರ್ಷಗಳ ಕಾಲ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದನು. ಭೌತಶಾಸ್ತ್ರದ ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿ, 1919ರಲ್ಲಿ ಬರ್ಲಿನ್‍ನಲ್ಲಿ ನೆಲೆಸಿದನು. 1943ರವರೆಗೆ ಇಲ್ಲಿಯೆೀ ಸೈದ್ಧಾಂತಿಕ ಭೌತಶಾಸ್ತ್ರದ ಪ್ರಾದ್ಯಾಪಕನಾಗಿದ್ದನು, ನ್ಯಾಷನಲ್ ಸೋಷಿಯಾಲಿಸ್ಟ್ ಪಕ್ಷದ (ನಾಝಿ ಪಕ್ಷ ) ಜನಾಂಗೀಯ ತಾರತಮ್ಯ ತಾಳಲಾರದೆ ಕೆಲಸಕ್ಕೆ ರಾಜಿನಾಮೆ ನೀಡಿದನು,. 1946ರಿಂದ ಜರ್ಮನಿಯ ವಿಜ್ಞಾನದ ಪುನರುಜ್ಜೀವನಕ್ಕೆ ಶ್ರಮಿಸಿದನು. ಲೌನ ಆರಂಭಿಕ ಕಾರ್ಯಗಳು ಐನ್‍ಸ್ಟೀನ್‍ರ ಸಾಪೇಕ್ಷ ಸಿದ್ಧಾಂತಕ್ಕೆ ಬೆಂಬಲ ನೀಡಿದವು. ಇಪ್ಪತ್ತನೇ ಶತಮಾನದ ಆದಿಯಲ್ಲಿ ಕ್ಷ-ಕಿರಣಗಳನ್ನು ಅಲ್ಪ-ತರಂಗಾಂತರದ, ಬೆಳಕಿನಂತಹ ವೈದ್ಯುತ್ ಕಾಂತೀಯ ತರಂಗಗಳೆಂದು ಭಾವಿಸಲಾಗಿದ್ದಿತು. ಆದರೆ ಕೆಲ ವಿಜ್ಞಾನಿಗಳು ಇದನ್ನು ಸಂಪೂರ್ಣವಾಗಿ ಒಪ್ಪಿರಲಿಲ್ಲ. ಬಾಹ್ಯ ರಚನೆಗೆ ತಕ್ಕಂತೆ, ಸ್ಪಟಿಕಗಳಲ್ಲಿ ಅಣುಗಳು ನಿರ್ದಿಷ್ಟ ಜೋಡಣೆಯಲ್ಲಿರುತ್ತವೆ. ಎಂದು ನಂಬಲಾಗಿದ್ದಿತು, ಇವೆರಡೂ ಅಭಿಪ್ರಾಯಗಳನ್ನು ತುಲನಾತ್ಮಕ ದೃಷ್ಟಿಯಲ್ಲಿ ನೋಡಿದ ಲೌ, ಇವು ನಿಜವೇ ಆಗಿದ್ದಲ್ಲಿ, ಸ್ಪಟಿಕಗಳ ಅಣುಗಳ ಮಧ್ಯದ ಅಂತರ 10-10 ಮೀಟರ್ ನಷ್ಟಿದ್ದು, ಸ್ಪಟಿಕದ ಮೂಲಕ ಸಾಗುವ ಕ್ಷ-ಕಿರಣಗಳನ್ನು ವಕ್ರೀಭವನಗೊಳಿಸಬೇಕೆಂದು ಸೂಚಿಸಿದನು. 1912ರಲ್ಲಿ ಇದನ್ನು ಪ್ರಯೋಗಗಳಿಂದ ಸರಿಯೆಂದು ತೋರಿಸಲಾಯಿತು. ಲೌ ಸಹಾಯಕನಾಗಿದ್ದ ಡಬ್ಲ್ಯೂ .ಫ್ರೀಡರಿಕ್ ಮತ್ತು ವಿದ್ಯಾರ್ಥಿಯಾಗಿದ್ದ ಪಿ.ಕ್ನಿಪ್ಪಿಂಗ್ ಸ್ಪಟಿಕವೊಂದರ ಮೂಲಕ ಕ್ಷ-ಕಿರಣ ಹಾಯಿಸಿ, ವಕ್ರೀಭವನದ ಮಚ್ಚೆಗಳ ಛಾಯಾ ಬಿಂಬ ಪಡೆದನು. ಇದರಿಂದ ಕ್ಷ-ಕಿರಣ ತರಂಗ ರೂಪಿಯೆಂದು ಖಚಿತವಾಯಿತು. ಇದರ ಆಧಾರದ ಮೇಲೆ ಬ್ರಾಗ್ಸ್, ಕ್ಷ-ಕಿರಣ ಸ್ಪಟಿಕಾಲೇಖದ (Crystallography) ಅಧ್ಯಯನ ಪ್ರಾರಂಭಿಸಿದನು. 1914ರಲ್ಲಿ ಲೌ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 12/21/2019