ಬ್ರಾಗ್ ಸರ್ (ವಿಲಿಯಂ) ಲಾರೆನ್ಸ್ (1890-1971 ) - ೧೯೧೫
ಬ್ರಿಟನ್-ಭೌತಶಾಸ್ತ್ರ - ಡಬ್ಲು.ಎಚ್.ಬ್ರಾಗ್ ಜೊತೆ ಸೇರಿ ಕ್ಷ-ಕಿರಣ ಸ್ಪಟಿಕಾಲೇಖ ( X-Ray Crystallography) ಸ್ಥಾಪಿಸಿದಾತ.
ಅಡಿಲೇಡ್‍ನನಲ್ಲಿ ಜನಿಸಿದ ಲಾರೆನ್ಸ್ ಗಣಿತ ಪದವಿ ಗಳಿಸಿ, 1910ರಲ್ಲಿ ಕೇಂಬ್ರಿಜ್‍ಗೆ ಹೋಗಿ ನೆಲೆಸಿದ ನಂತರ ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದನು. ಬ್ರಾಗ್‍ನ ತಂದೆಯೂ ಸಹ ಭೌತಶಾಸ್ತ್ರದ ಒಲವು ತಳೆದಿದ್ದವನಾಗಿದ್ದನು. ಲಾಯೆ ಸ್ಪಟಿಕಗಳಿಂದ, ಕ್ಷ – ಕಿರಣಗಳನ್ನು ವಿವರ್ತನಗೊಳಿಸಬಹುದೆಂದು (Diffraction) ಹೇಳಿದ್ದನು ಈ ಬಗ್ಗೆ ಕಾರ್ಯ ನಿರತರಾದ ಬ್ರಾಗ್ ನಿರ್ದಿಷ್ಟ ಅಣು ದೂರದಲ್ಲಿ ಜಾಲಕ ಸಮತಲಗಳನ್ನು (Lattice Plane) ಹೊಂದಿರುವ , ಸ್ಪಟಿಕದ ಮೂಲಕ ನಿರ್ದಿಷ್ಟ ಸಂಪಾತ ಕೋನದಲ್ಲಿ , ಗೊತ್ತಿರುವ ತರಂಗಾತರದ ಕ್ಷ-ಕಿರಣವನ್ನು ಹಾಯಿಸಿದಾಗ ಆಗುವ ವಿವರ್ತನವನ್ನು ಲಾರೆನ್ಸ್ ಲೆಕ್ಕಾಚಾರ ಹಾಕಿದನು. ಇದು ಬ್ರಾಗ್ ನಿಯಮವೆಂದು ಖ್ಯಾತ. ಸ್ಪಟಿಕದ ಅಣು ಪದರುಗಳ ಮೂಲಕ ಕ್ಷ – ಕಿರಣ ಸಾಗಿದಾಗ ಹಲವು ಪದರಗಳಿಂದ ಪ್ರತಿಫಲನದ ಮೂಲಕ ವ್ಯತಿಕರಣಗೊಂಡು (Interference) ಬ್ರಾಗ್ ನಿರೂಪಿಸಿದ ನಿಯಮದಂತೆ ವರ್ತಿಸುತ್ತದೆ. ಲಾರೆನ್ಸ್ ತನ್ನ ತಂದೆ ನಿರ್ಮಿಸಿದ್ದ ಕ್ಷ-ಕಿರಣದ ಗೋನಿಯೋ ಮೀಟರ್ ಬಳಸಿ ತನ್ನ ತಂದೆಯೊಂದಿಗೆ ಸಂಶೋಧನೆ ಮುಂದುವರೆಸಿದನು. ಗೊತ್ತಿರುವ ತರಂಗಾಂತರದ ಕ್ಷ-ಕಿರಣಗಳನ್ನು ಬಳಸಿ, ಅವರು ವಜ್ರ, ತಾಮ್ರ, ಗಂಧಕ ಹಾಗೂ ಹಲವಾರು ಲವಣಗಳ ಅಣು ಪದರುಗಳ ಮದ್ಯದ ದೂರವನ್ನು ನಿರ್ಧರಿಸುವಲ್ಲಿ ಸಫಲರಾದನು. ಬ್ರಾಗ್ ಈ ಬಗೆಯ ಅಧ್ಯಯನಕ್ಕೆ ತೊಡಗುವ ಮೊದಲು ಸ್ಪಟಿಕಗಳ ಅಧ್ಯಯನ ಅವುಗಳ ಬಾಹ್ಯ ರಚನೆ ಹಾಗೂ ಸ್ವರೂಪಗಳನ್ನು ಅರಿಯುವಲ್ಲಿಗೆ ಸೀಮಿತಗೊಂಡಿದ್ದಿತು. ಬ್ರಾಗ್ ಬಳಕೆಗೆ ತಂದ ಕ್ಷ-ಕಿರಣ ಸ್ಪಟಿಕಾಲೇಖ ಅವುಗಳ ಅಣ್ವಯಿಕ ಆಂತರ್ಯವನ್ನು ಅರಿಯುವಲ್ಲಿ ರಾಜಮಾರ್ಗವಾಯಿತು.ಬ್ರಾಗ್ 1915ರಲ್ಲಿ ತನ್ನ ತಂದೆಯೊಂದಿಗೆ ನೊಬೆಲ್ ಪುರಸ್ಕೃತನಾದಾಗ ಅವನ ವಯಸ್ಸು ಕೇವಲ 25. ಈತ ನೊಬೆಲ್ ಚರಿತ್ರೆಯಲ್ಲೇ ಅತಿ ಕಿರಿಯ. 1919ರಲ್ಲಿ ಬ್ರಾಗ್ ಮ್ಯಾಂಚೆಸ್ಟರ್’ನಲ್ಲಿ 1958ರಲ್ಲಿ ಕೇಂಬ್ರಿಜ್‍ನಲ್ಲಿ ಪ್ರಾಧ್ಯಾಪಕನಾದನು.ಛಾಯಾ ಪತ್ರದ ಮೇಲೆ (Photographic Film) ಕ್ಷ-ಕಿರಣಗಳಿಂದ ಸ್ಪಟಿಕದಿಂದಾಗುವ ವಿವರ್ತನವನ್ನು ಬೆಳಕಿನ ಚುಕ್ಕೆಗಳಾಗಿ ಪಡೆಯುವ ವಿಧಾನವನ್ನು ಬ್ರಾಗ್ ಬಳಕೆಗೆ ತಂದನು. ಇದರಿಂದಾಗಿ, ಯಾವುದೇ ಸ್ಫಟಿಕದ ಅಣು ಸಾಂದ್ರತೆಯನ್ನು ನಿರ್ದರಿಸುವುದು ಸಾಧ್ಯವಾಯಿತು. ಆಧುನಿಕ ಲೋಹಶಾಸ್ತ್ರ, ಸ್ಪಟಿಕಶಾಸ್ತ್ರ, ಹಾಗೂ ಅಣ್ವಯಿಕ ಜೀಮಶಾಸ್ತ್ರ ಬ್ರಾಗ್ ಹಾಗೂ ಅವನ ಸಂಗಡಿಗರು ಕೇಂಬ್ರಿಜ್‍ನಲ್ಲಿ ರೂಪಿಸಿದ ಈ ವಿಧಾನದ ಮೆಲೆ ಬಹು ಅವಲಂಬಿತವಾಗಿವೆ. ಬ್ರಾಗ್‍ನ ಜೀವನದುದ್ದಕ್ಕೂ, ಅವನಿಗಿಂತ ಮುಂದೆ ಮೊದಲ ಹೆಜ್ಜೆಗಳನ್ನು ಹಾಕಿದಾತ ಅವನ ತಂದೆ, 1954ರಲ್ಲಿ ರಾಯಲ್ ಇನ್ಸ್‍ಟಿಟ್ಯೂಟನ್ ನಿರ್ದೇಶಕರಾದ ಬ್ರಾಗ್ ವಿಜ್ಞಾನವನ್ನು ಜನಪ್ರಿಯಗೊಳಿಸಲು ಬಹುವಾಗಿ ಶ್ರಮಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020