ನೀಲ್ಸ್ ,ಗುಸ್ತಾವ್– ಡ್ಯಾಲೆನ್
ಸ್ವೀಡನ್-ಇಂಜಿನಿಯರ್-ರಸಾಯನಶಾಸ್ತ-ಅಸಿಟಿಲಿನ್ ತಂತ್ರಜ್ಞಾನದ ಮುಂಚೂಣಿಗ.
ಗುಸ್ತಾವ್, ಸ್ಕಾರ್‍ಬೋರ್ಗ್ ಪ್ರಾಂತದ ಸ್ಟೆನ್‍ಸ್ಟಾರ್ಪ್ ಹಳ್ಳಿಯ ರೈತ ಕುಟುಂಬದಲ್ಲಿ 30 ನವೆಂಬರ್ 1869ರಲ್ಲಿ ರಂದು ಜನಿಸಿದನು. ಪ್ರೌಢ ಶಿಕ್ಷಣ ಪೂರೈಸಿದ ಗುಸ್ತಾವ್, ಕೃಷಿ ಶಿಕ್ಷಣ ಪಡೆಯಲು ಕಾಲೇಜಿಗೆ ಸೇರಿದನು. ಇಲ್ಲಿ ಲವಲ್ ಎಂಬ ಉಪಾಧ್ಯಾಯ ಈತನಿಗೆ ತಾಂತ್ರಿಕ ಶಿಕ್ಷಣ ಹೊಂದುವಂತೆ ಸಲಹೆ ಮಾಡಿದನು. ಇದರಿಂದ ಉತ್ತೇಜಿತನಾದ ಗುಸ್ತಾವ್, ಗೊಥೆನ್‍ಬರ್ಗ್‍ನಲ್ಲಿದ್ದ ಷಾಲ್ಮರ್ಸ್ ತಾಂತ್ರಿಕ ಕಾಲೇಜಿನ ಪ್ರವೇಶ ಪರೀಕ್ಷೆ ಬರೆದು, 1892ರಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನು. 1896ರಲ್ಲಿ ಇಂಜಿನಿಯರಿಂಗ್ ಪದವಿಯೊಂದಿಗೆ ಹೊರಬಂದು ಸ್ವಿಟ್ಸಲ್ರ್ಯಾಂಡ್‍ಗೆ ಹೋಗಿ ಅಲ್ಲಿ ಐಗಿನೋಸಿಷೆಸ್ ಪಾಲಿಟೆಕ್ನಿಕ್‍ನಲ್ಲಿ ಸ್ಟೊಡೋಲಾ ಕೈ ಕೆಳಗೆ ಕೆಲಸ ಮಾಡಿದನು. ಇಲ್ಲಿ ಒಂದು ವರ್ಷವಿದ್ದು ಸ್ವೀಡನ್‍ಗೆ ಹಿಂದಿರುಗಿದನು. ಇಲ್ಲಿ ಸಮಾಲೋಚಕ ಇಂಜಿನಿಯರ್ ಆಗಿ ಖಾಸಗಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದನು. ಕೆಲಕಾಲದ ನಂತರ 1901ರಲ್ಲಿ ಸ್ವೀಡನ್ ಕಾರ್ಬೈಡ್ ಹಾಗೂ ಆಸಿಟಿನ್ ಲಿ, ಕಂಪನಿಯ ತಾಂತ್ರಿಕ ವಿಭಾಗದ ಮುಖ್ಯಸ್ಥನಾದನು. ಇದನ್ನು ತೊರೆದು ಗ್ಯಾಸ್ ಅಕ್ಯುಮುಲೇಟರ್ ಕಂಪನಿ ಸೇರಿ 1906ರಲ್ಲಿ ಅದರ ಮುಖ್ಯ ಇಂಜಿನಿಯರ್ ಹುದ್ದೆಗೇರಿದನು. 1909ರಲ್ಲಿ ಇದು ಸ್ವೀಡಿಷ್ ಗ್ಯಾಸ್ ಅಕ್ಯುಮುಲೇಟರ್ ಕಂಪನಿ ಹೆಸರಿನಲ್ಲಿ ಪುನರ್ಸಂಘಟನೆಗೊಂಡಿತು. ಇದಕ್ಕೆ ಗುಸ್ತಾಫ್ ನಿರ್ವಾಹಕ ನಿರ್ದೇಶಕನಾದನು. ಗುಸ್ತಾಫ್ಪ್ರೌಢಶಾಲೆಯಲ್ಲಿದ್ದಾಗಲೇ ಹುಲ್ಲು ಕತ್ತರಿಸುವ ಯಂತ್ರ ನಿರ್ಮಿಸಿದ್ದನು. ಹಾಲಿನಲ್ಲಿರುವ ಕೊಬ್ಬಿನ ಅಂಶ ನಿರ್ಧರಿಸುವ ಉಪಕರಣ, ಹಾಲು ಕರೆಯುವ ಯಂತ್ರ, ಹಾಲು ಪಾಸ್ತರೀಕರಿಸುವ ಯಂತ್ರಗಳನ್ನು ತಯಾರಿಸಿದ್ದನು. ಗುಸ್ತಾವ್ಗೆ ಹೊಸದಾಗಿ ಚಿಂತಿಸುವುದು, ಉಪಕರಣ, ಸಲಕರಣೆ ತಯಾರಿಸುವುದು ರಕ್ತಗತವಾಗಿದ್ದಿತು. 1901ರಲ್ಲಿ ಗುಸ್ತಾಫ್ ಸಾಯಂಕಾಲ ತಾನಾಗಿಯೇ ಹತ್ತಿ ಬೆಳಗಿನ ಜಾವ ಆರಿ ಹೋಗುವ ದೀಪಸ್ತಂಭ, ಸ್ವಯಂಚಾಲಿತ ದೀಪಗಳನ್ನು ಉಪಜ್ಞಿಸಿದನು. ಅಸಿಟಿಲಿನ್‍ನ್ನು ಸುರಕ್ಷಿತವಾಗಿರಿಸುವುದು ಆ ಕಾಲಕ್ಕೆ ಬಹು ಕಠಿಣ ಕಾರ್ಯವಾಗಿದ್ದಿತು. ಸಂರಂಧ್ರಿತ ಅ್ಯಸ್‍ಬೆಸ್ಟಾಸ್ ಹಾಗೂ ಡಯಟೋಮೇಷಿಯಸ್ ಪೂರಿತ ಮಣ್ಣಲೇಪಿತ ಸಿಲಿಂಡರ್‍ನಲ್ಲಿ ಸಂರಕ್ಷಿತವಾಗಿ ಅಸಿಟಿಲೀನ್ ಸಂಗ್ರಹಿಸುವ ವಿಧಾನವನ್ನು ಬಳಕೆಗೆ ತಂದನು. 1912ರಲ್ಲಿ ಅಸಿಟಿಲಿನ್ ಸಿಲಿಂಡರ್‍ಗಳಿಗೆ ಒದಗಿಸುವ ಸುರಕ್ಷ ಕವಾಟಗಳ ಪರೀಕ್ಷೆಯಲ್ಲಿರುವಾಗ ಘಟಿಸಿದ ಸ್ಪೋಟದಿಂದಾಗಿ ಗುಸ್ತಾವ್, ಕಣ್ಣಿನ ದೃಷ್ಟಿ ದೋಷಕ್ಕೊಳಗಾದನು. ಆದರೆ ಇದು ಅವನ ಉತ್ಸಾಹಕ್ಕೆ ಭಂಗ ತರಲಿಲ್ಲ. ಈ ಸ್ಥಿತಿಯಲ್ಲೇ ಆತ ಪನಾಮ ಕಾಲುವೆಗೆ ದೀಪ ವ್ಯವಸ್ಥೆ ಒದಗಿಸುವ ಗುತ್ತಿಗೆ ಪಡೆದು ಯಶಸ್ವಿಯಾಗಿ ಪೂರ್ಣಗೊಳಿಸಿದನು. ಗುಸ್ತಾವ್, 1913ರಲ್ಲಿ ಸ್ವೀಡನ್ ರಾಯಲ್ ಅಕಾಡೆಮಿಯ, 1918ರಲ್ಲಿ ಅಕಾಡೆಮಿ ಆಫ್ ಸೈನ್ಸ್‍ನ ಅಂಡ್ ಇಂಜಿನಿಯರಿಂಗ್ ಸದಸ್ಯನಾದನು. 1918ರಲ್ಲಿ ಲುಂಡ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕನಾದನು. ಅಂತಾರಾಷ್ಟ್ರೀಯ ಅಸಿಟಿಲೀನ್ ಅನೋಸಿಯೇಷನ್‍ನಿಂದ ಬಂಗಾರದ ಪದಕ ಪಡೆದನು. 1912ರಲ್ಲಿ ಅಸಿಟಿಲಿನ್ ಕುರಿತಾದ ಸಂಶೋಧನೆಗಳಿಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/25/2020