ಚಾರ್ಲ್ಸ್, ಎಡ್ಯೂಯಾರ್ಡ್ ಗಿಲಾಮೆ (1861-1938) ೧೯೨೦
ಸ್ವಿಟ್ಸಲ್ರ್ಯಾಂಡ್ - ಭೌತಶಾಸ್ತ್ರ- ನಿಖರ ಮಾಪನೆಯ ತಂತ್ರಗಳನ್ನು ಪರಿಚಯಿಸಿದಾತ.
ಚಾರ್ಲ್ಸ್ ಸ್ವಿಸ್'ಜೂರಾ ಪ್ರಾಂತದ ಫ್ಲೂರಿನ್;ನಲ್ಲಿ 15 ಫೆಬ್ರವರಿ 1861 ರಂದು ಜನಿಸಿದನು. ಕ್ರಾಂತಿಯ ದಿನಗಳಲ್ಲಿ ಚಾರ್ಲ್ಸ್ತಾತ ಫ್ರಾನ್ಸ್ ತೊರೆದು, ಲಂಡನ್‍ಗೆ ಬಂದು ಅಲ್ಲಿ ಕೈಗಡಿಯಾರ ವ್ಯಾಪಾರ ಸ್ಥಾಪಿಸಿದ್ದನು. ಈತನ ನಾಲ್ಕು ಮಕ್ಕಳಲ್ಲಿ ಮೂವರು ಇದೇ ವೃತ್ತಿಯಲ್ಲಿ ಮುಂದುವರೆದರೆ, ಚಾರ್ಲ್ಸ್ತಂದೆ ಫ್ಲೂರಿನ್‍ಗೆ ಮರಳಿದ್ದನು. ಚಾರ್ಲ್ಸ್ ಪ್ರಾಥಮಿಕ ಶಿಕ್ಷಣವನ್ನು ನ್ಯೂಷೆಟೆಲ್‍ನಲ್ಲಿ ಮುಗಿಸಿ, ಮುಂದೆ ಝೂರಿಕ್ ಪಾಲಿಟೆಕ್ನಿಕ್‍ನಿಂದ ಡಾಕ್ಟರೇಟ್ ಗಳಿಸಿದನು. ಕೆಲಕಾಲ ಫಿರಂಗಿದಳದಲ್ಲಿ ಕೆಲಸ ಮಾಡಿದ ಚಾರ್ಲ್ಸ್ ನಂತರ ಅಂತರಾಷ್ಟ್ರೀಯ ತೂಕ ಹಾಗೂ ಅಳತೆಯ ಸಂಸ್ಥೆಗೆ ಸಹಾಯಕನಾಗಿ ಸೇರಿದನು. 1902ರಲ್ಲಿ ಇದರ ಸಹಾಯಕ ನಿರ್ದೇಶಕನಾದನು. 1915ರಲ್ಲಿ ನಿವೃತ್ತನಾಗುವವರೆಗೆ ಇದೇ ಹುದ್ದೆಯಲ್ಲಿದ್ದನು. 1936ರಲ್ಲಿ ಮರಣ ಹೊಂದುವವರೆಗೆ ಗೌರವ ನಿರ್ದೇಶಕನಾಗಿ ಮುಂದುವರೆದನು. ಅಲ್ಪ ಕಾಲದಲ್ಲಿ ಫಿರಂಗಿದಳದಲ್ಲಿದ್ದಾಗ, ಚಾರ್ಲ್ಸ್ ಬಲವಿಜ್ಞಾನ ಅಧ್ಯಯನ ಮಾಡಿದನು. ತಾಪಮಾನ ಅಳೆಯುವ ಉಪಕರಣಗಳನ್ನು ಪರಿಷ್ಕರಿಸಿದನು. ಇದನ್ನು ತೂಕ ಹಾಗೂ ಅಳತೆಯ ಇಲಾಖೆಯಲ್ಲಿದ್ದಾಗ ಬಳಕೆಗೆ ತಂದನು. ಮೀಟರ್, ಕೆ.ಜಿ.ಗಳನ್ನು ಸರಿಯಾಗಿ ಅವುಗಳ ಪರಿಮಾಣವನ್ನು ನಿರ್ಧರಿಸಿದನು. ತಾಪಮಾನಗಳು ವಿಸ್ತೃತ ಬದಲಾವಣೆಗಳಾದಗಲೂ, ಅತ್ಯಲ್ಪ ಹಿಗ್ಗುವ, ಕುಗ್ಗುವ ಮಿಶ್ರಲೋಹವನ್ನು ಅಳತೆಯ ಮಾಪಕವಾಗಿ ರೂಪಿಸಲು ಚಾರ್ಲ್ಸ್ ಯತ್ನಿಸಿದನು. ಇದಕ್ಕಾಗಿ ಹಲವಾರು ಕಬ್ಬಿಣ ನಿಕ್ಕಲ್‍ಗಳ ಮಿಶ್ರ ಲೋಹಗಳನ್ನು ಬಳಸಲು ಯತ್ನಿಸಿ ಇನ್ವರ್ ಮಿಶ್ರ ಲೋಹ ಪಡೆಯುವಲ್ಲಿ ಯಶಸ್ವಿಯಾದನು. ಇದು ತಾಪಮಾನಗಳ ವ್ಯತ್ಯಸ್ತದಲ್ಲಿ ಅತ್ಯಲ್ಪ ಬದಲಾಗುವ ಲೋಹವಾಗಿದೆ. ಈಗ ಅತ್ಯಂತ ಖಚಿತವಾಗಿ ಅಳೆಯಬೇಕಾದ ಉಪಕರಣಗಳಲ್ಲಿ ಇದು ಬಳಕೆಯಾಗುತ್ತದೆ. ಚಾರ್ಲ್ಸ್ ಅಳತೆ, ತೂಕ ಅವುಗಳ ನಿಖರ, ಮಾಪನ ಅವುಗಳಿಗೆ ಅನುಸರಿಸಬೇಕಾದ ವಿಧಾನ, ಬಳಸಬೇಕಾದ ಸಾಮಾಗ್ರಿಗಳನ್ನು ಕುರಿತಾಗಿ ಹಲವು ಹತ್ತಾರು ಪಾಂಡಿತ್ಯ ಪೂರ್ಣ ಲೇಖನಗಳನ್ನು ಪ್ರಕಟಿಸಿದನು. ಚಾರ್ಲ್ಸ್ ಜಿನೀವಾ, ಪ್ಯಾರಿಸ್ ನ್ಯಾಷನಲ್ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಗಳಿಂದ ಗೌರವಿತನಾದನು. ಚಾಲ್ರ್ಸ್‍ನ ಈ ತನ್ನ ಸಾಧನೆಗಳಿಗಾಗಿ 1920ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/9/2020