ಕ್ಯಾಮೆರ್‍ಲಿಂಗ್-ಅವ್ನೆಸ್, ಹೀಕ್ (1853-1926) ೧೯೧೩
ಡೆನ್ಮಾರ್ಕ್-ಭೌತಶಾಸ್ತ್ರ- ಹೀಲಿಯಂ ಅನಿಲವನ್ನು ದ್ರವೀಕರಿಸಿದಾತ.- ಅತಿವಾಹಕತೆಯನ್ನು ಗುರುತಿಸಿದ ಮೊದಲಿಗ.
ಗ್ರೊನಿನ್‍ಜೆನ್‍ನಲ್ಲಿ ಭೌತಶಾಸ್ತ್ರ ಅಭ್ಯಸಿಸಿದ ಕ್ಯಾಮೆರ್‍ಲಿಂಗ್,ಮುಂದೆ ಎರಡು ವರ್ಷಗಳ ಕಾಲ ಹೈಡೆನ್‍ಬರ್ಗ್‍ನಲ್ಲಿ ಬುನ್ಸೆನ್ ಮತ್ತು ಕಿರ್ಕ್‍ಹಾಫ್ ಕೈಕೆಳಗೆ ದುಡಿದನು. ಭೂಮಿ ಆವರ್ತಿಸುತ್ತಿರುವುದಕ್ಕೆ ಹೇಗೆ ಸಾಕ್ಷ್ಯ ಒದಗಿಸಬಹುದೆಂದು ಕ್ಯಾಮರ್’ಲಿಂಗ್ ಚಿಂತಿಸುತ್ತಿದ್ದನು. ಆದರೆ 1882ರಲ್ಲಿ ಲೀಡೆನ್‍ನಲ್ಲಿ ಪ್ರಾಧ್ಯಾಪಕನಾದ ನಂತರ ನಿಮ್ನ ತಾಪಮಾನಗಳಲ್ಲಿ ದ್ರವ್ಯದ ಸ್ವಭಾವ ಹೇಗಿರಬಹುದೆಂದು ವಿಚಾರಿಸತೊಡಗಿದನು. ಡೆವೆರ್ ಸಾರಜನಕವನ್ನು ದ್ರವೀಕರಿಸಿದ್ದನು ಜೌಲ್-ಥಾಮ್ಸನ್ ಪರಿಣಾಮ ಬಳಸಿ ಡೆವೆರ್ ದ್ರವ ಜಲಜನಕವನ್ನು ಪಡೆದಿದ್ದನು. ಕ್ಯಾಮರ್‍ಲಿಂಗ್ ,ಡೆವೆರ್ನ್ ವಿಧಾನವನ್ನು ಸುಧಾರಿಸಿದನು. 1908ರಲ್ಲಿ ದ್ರವ ಜಲಜನಕದ ನೆರವಿನಿಂದ ಹೀಲಿಯಂ ದ್ರವೀಕರಿಸಿದನು. ಹೀಲಿಯಂ 4.25 ಕೆಲ್ವಿನ್‍ನಲ್ಲಿ ಅನಿಲ ರೂಪ ತಾಳುವುದು ಇದರಿಂದ ತಿಳಿಯಿತು. ಇದರ ತಾಪಮಾನವನ್ನು 1೦K ಗೆ (ಕೆಲ್ವಿನ್) ಇಳಿಸಿದಾಗಲೂ ಹೀಲಿಯಂ ಘನರೂಪ ತಾಳಲಿಲ್ಲ. 1911ರಲ್ಲಿ ಕ್ಯಾಮೆರ್’ಲಿಂಗ್ ಪಾದರಸ, ಸೀಸದಂತಹ ಲೋಹಗಳು ಅತ್ಯಲ್ಪ ತಾಪಮಾನಗಳಲ್ಲೂ ಅತಿವಾಹಕಗಳಾಗುವುವೆಂದೂ, ಈ ಸ್ಥಿತಿಯಲ್ಲಿ ವಿದ್ಯುತ್ ಪ್ರವಾಹದ ಹರಿವಿಗೆ ಯಾವುದೇ ವಿರೋಧ ತೋರಿಸುವುದಿಲ್ಲವೆಂದೂ ಪತ್ತೆ ಹಚ್ಚಿದನು. ಇದಕ್ಕಾಗಿ 1913ರ ನೊಬೆಲ್ ಪ್ರಶಸ್ತಿ ಕ್ಯಾಮರ್‍ಲಿಂಗ್‍ಗೆ ಲಭಿಸಿತು. 1957ರಲ್ಲಿ ಅತಿವಾಹಕತೆಗೆ, ಬಿಸಿಎಸ್ ಸಿದ್ಧಾಂತದ ಮೂಲಕ ವಿವರಣೆ ದಕ್ಕಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/26/2020