ವಾಲ್ಸ್, ಜೊಹಾನ್ನೆಸ್ ಡಿಡರಿಕ್ ವ್ಯಾಂಡರ್ (1837-1923) ೧೯೧೦
ಡೆನ್ಮಾರ್ಕ್-ಭೌತಶಾಸ್ತ್ರ- ಅನಿಲಗಳ ಸ್ಥಿತಿ ವಿವರಣೆಯ ಸಮೀಕರಣ ನೀಡಿದಾತ.
ವ್ಯಾಂಡರ್‍ವಾಲ್ಸ್ ತಂದೆ ಬಡಗಿಯಾಗಿದ್ದನು. ವಿದ್ಯಾಭ್ಯಾಸ ಮುಗಿಸಿದಮೇಲೆ ವಾಲ್ಸ್ ಹೇಗ್‍ನಲ್ಲಿ ಶಾಲಾ ಶಿಕ್ಷಕನಾಗಿ, ನಂತರ ಮುಖ್ಯೋಪಾಧ್ಯಾಯನಾದನು. ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡುವ ತರಬೇತಿ ಹೊಂದಿದ ವಾಲ್ಸ್, ಲೀಡೆನ್‍ನಲ್ಲಿ ಭೌತಶಾಸ್ತ್ರದ ಪದವಿ ಪಡೆದನು. 1873ರಲ್ಲಿ ಡಾಕ್ಟರೇಟ್‍ಗಾಗಿ ಅನಿಲಗಳ ಸ್ಥಿತಿ ಕುರಿತ ಸಂಪ್ರಂಬಂಧ ಮಂಡಿಸಿದನು. ಟಿ.ಆ್ಯಂಡ್ರೂಸ್ ಹಾಗೂ ಇತರರು ನೈಜ ಅನಿಲಗಳು ಆದರ್ಶ ಅನಿಲಗಳ ಸೂತ್ರಗಳಿಗನುಗುಣವಾಗಿ ವರ್ತಿಸುವುದಿಲ್ಲವೆಂದು ಹೇಳಿದ್ದರು. ಆದರ್ಶ ಅನಿಲಗಳ ಸಿದ್ಧಾಂತದಲ್ಲಿ, ಅನಿಲದ ಪರಮಾಣುಗಳಿಗೆ ಗಾತ್ರ ಅಥವಾ ಪರಸ್ಪರ ಆಕರ್ಷಣೆ ಇರುವುದಿಲ್ಲ. ಆ್ಯಂಡ್ರೂಸ್ ನೈಜ ಅನಿಲಗಳಿಗೆ ಒಂದು ನಿರ್ದಿಷ್ಟ ತಾಪಮಾನವಿದ್ದು, ಈ ತಾಪಮಾನದಿಂದ ಕೆಳಗೆ, ಒತ್ತಡ ಮಾತ್ರದಿಂದ ದ್ರವೀಕರಿಸಬಹುದೆಂದು ತೋರಿಸಿದ್ದನು. ವಾಲ್ಸ್, ನೈಜ ಅನಿಲಗಳಿಗೆ ಸಮರ್ಪಕವಾದ ಹೊಸ ಸೂತ್ರ ನೀಡಿದನು. ಇದರಲ್ಲಿ ಅನಿಲದ ಎರಡು ಅನಿಲಗಳ ಮಧ್ಯದ ಪರಸ್ಪರ ಆಕರ್ಷಣೆ ಹಾಗೂ ಪರಮಾಣುಗಳು ಪರಿಗಣಿತವಾಗಿದ್ದವು. ವಾಲ್ಸ್ ನೀಡಿದ ಸೂತ್ರದಲ್ಲಿ ಸ್ಥಿರಗಳನ್ನು ಸರಿಯಾಗಿ ನಿರ್ದರಿಸಿದ್ದೇ ಆದರೆ ನೈಜ ಅನಿಲಗಳ, ವೀಕ್ಷಿತ ಪರಿಣಾಮಗಳು ಸಮರ್ಪಕವಾಗಿರುತ್ತಿದ್ದವು. 1877ರಲ್ಲಿ ವ್ಯಾಂಡರ್ ವಾಲ್ಸ್ ಅ್ಯಮಡಸ್ಟರ್‍ಡ್ಯಾಂನಲ್ಲಿ ಪ್ರಾಧ್ಯಾಪಕನಾದನು. 1910ರಲ್ಲಿ ವಾಲ್ಸ್‍ಗೆ ನೊಬೆಲ್ ಪ್ರಶಸ್ತಿ ದಕ್ಕಿತು
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019