অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲೆನಾರ್ಡ್, ಫಿಲೆಫ್ಎಡುಯಾರ್ಡ್ ಆ್ಯಂಟನ್

ಲೆನಾರ್ಡ್, ಫಿಲೆಫ್ಎಡುಯಾರ್ಡ್ ಆ್ಯಂಟನ್

ಲೆನಾರ್ಡ್, ಫಿಲೆಫ್ಎಡುಯಾರ್ಡ್ ಆ್ಯಂಟನ್ –(1862-1947) 1905
Lenard , Phillipp Eduard Anton

ಜರ್ಮನಿ-ಭೌತಶಾಸ್ತ್ರ- ಕ್ಯಾಥೊಡ್ ಕಿರಣ ಹಾಗೂ ದ್ಯುತಿ ವೈದ್ಯುತ್ ಪರಿಣಾಮಗಳ (Photo Electric Effect)  ಬಗೆಗೆ ಸಂಶೋಧಿಸಿದಾತ.

ವ್ಯಾಪಾರಿಯ ಮಗನಾಗಿದ್ದ ಲೆನಾರ್ಡ್, ಬುಡಾಪೆಸ್ಟ್‍ನಲ್ಲಿ ವಿದ್ಯಾಭ್ಯಾಸ ಮಾಡಿ, 1907ರಲ್ಲಿ ಜರ್ಮನಿಯ ಹೈಡೆಲ್ ಬರ್ಗ್‍ನಲ್ಲಿ ಪ್ರಾಧ್ಯಾಪಕನಾದನು.. 1914ರ ವೇಳೆಗೆ ಲೆನಾರ್ಡ್ ಭೌತಶಾಸ್ತ್ರದ ಮೂಲ ಸಂಶೋಧನೆಗಳನ್ನು ಮಾಡಿದ್ದನು.  ಕೆಲವು ಲೋಹಗಳ ಮೇಲೆ ಅತಿನೇರಳೆ ಕಿರಣಗಳನ್ನು ಹಾಯಿಸಿದಾಗ ಎಲೆಕ್ಟ್ರಾನ್‍ಗಳು ಉತ್ಸರ್ಜನೆಗೊಳ್ಳುವುವೆಂದು ತಿಳಿದಿದ್ದನು.  ಲೆನಾರ್ಡ್‍ನ ಪ್ರಯೋಗಗಳಿಂದ ಇಂತಹ ಉತ್ಸರ್ಜನೆ ನಿರ್ದಿಷ್ಟ ತರಂಗಾಂತರಗಳಿದ್ದ ಅತಿ ನೇರಳೆ ಕಿರಣಗಳಿಂದ ಮಾತ್ರ ಸಾಧ್ಯವಿರುವುದು ತಿಳಿಯಿತು.  ಈ ತರಂಗಾಂತರ ಕುಗ್ಗಿದಂತೆ ಉತ್ಸರ್ಜಿತ ಎಲೆಕ್ಟ್ರಾನ್‍ನ ವೇಗವು ಹೆಚ್ಚುವುದು.  ನಿರ್ದಿಷ್ಟ ತರಂಗಾಂತರದಲ್ಲಿ, ಕಿರಣಗಳ ತೀವ್ರತೆ ಹೆಚ್ಚಿದಂತೆ ಉತ್ಸರ್ಜಿತಗೊಳ್ಳುವ ಎಲೆಕ್ಟ್ರಾನ್‍ಗಳ ಸಂಖ್ಯೆಯೂ ಹೆಚ್ಚುವುದು ಗೊತ್ತಾಯಿತು. ಇದನ್ನು ದ್ಯುತಿ ವೈದ್ಯುತ್ ಪರಿಣಾಮವೆಂದು ಗುರುತಿಸಲಾಗಿದೆ.  ಐನ್‍ಸ್ಟೀನ್ ದ್ಯುತಿ ವೈದ್ಯುತ್ ಪರಿಣಾಮಕ್ಕೆ 1905ರಲ್ಲಿ ವಿವರಣೆ ನೀಡಿದನು.  ಮ್ಯಾಕ್ಸ್ ಪ್ಲಾಂಕ್ ಇದನ್ನು ನಿರ್ದಿಷ್ಟ ಕ್ವಾಂಟಂಗಳಲ್ಲಿ (ಶಕಲ=ಗಂತಿ=ಗಂಟು)ವಿವರಿಸಿ, ಕ್ವಾಂಟಂ ಬಲವಿಜ್ಞಾನ ಉಗಮಕ್ಕೆ ಕಾರಣನಾದನು.  ಲೆನಾರ್ಡ್, ಕ್ಯಾಥೋಡ್ ಕಿರಣಗಳನ್ನು ಎಲೆಕ್ಟ್ರಾನ್ ದೂಲಗಳೆಂದು (Beam) ತೋರಿಸಿದನು.  ಕ್ಯಾಥೋಡ್ ಕಿರಣಗಳು ಗಾಳಿ, ಹಾಗೂ ತೆಳು ದೇಹದ ಫಲಕಗಳನ್ನು ಹಾದು ಹೋಗುತ್ತವೆ. ಇದರಿಂದ ಪರಮಾಣು ಋಣ, ಧನ ಆವಿಷ್ಟಗಳೆರಡರ ಸಂಗಮವೆಂದೂ, ಪರಮಾಣುವಿನ ಮಧ್ಯದಲ್ಲಿ ಕ್ಯಾಥೊಡ್ ಕಿರಣಗಳು ಹಾದು ಹೋಗಲು ಖಾಲಿ ಜಾಗವಿರುವುದೆಂದು ತರ್ಕಿಸಿದನು.  1911ರಲ್ಲಿ ರುದರ್’ಫೋರ್ಡ್ , ಮಂಡಿಸಿದ ಪರಮಣು ಸಿದ್ಧಾಂತ ಲೇನಾರ್ಡ್‍ನ ತರ್ಕವನ್ನು ಬೆಂಬಲಿಸಿತು. ಕ್ಷ-ಕಿರಣಗಳನ್ನು ಯಾರು ಅನಾವರಣಗೊಳಿಸಿದರೆಂಬ ಬಗ್ಗೆ ರಾಂಟ್‍ಜೆನ್, ಜೆ.ಜೆ.ಥಾಮ್ಸನ್ ಹಾಗೂ ಲೆನಾರ್ಡ್ ಮಧ್ಯೆ ವಿವಾದಗಳೆದ್ದವು.  ಲೆನಾರ್ಡ್ ಸ್ವಲ್ಪದರಲ್ಲಿಯೆೀ ಕ್ಷ-ಕಿರಣಗಳನ್ನು ಗುರುತಿಸುವಲ್ಲಿ ವಿಫಲಗೊಂಡಿದ್ದನೆಂದು ನಂಬಲಾಗಿದೆ,.  1934ರಲ್ಲಿ ಲೆನಾರ್ಡ್ ಗ್ರೇಟ್ ಮೆನ್ ಆಫ್ ಸೈನ್ಸ್ ಪುಸ್ತಕ ಪ್ರಕಟಿಸಿದನು.  ಇದರಲ್ಲಿ ರಾಂಟ್‍ಜೆನ್ ಹಾಗೂ ಜೆ.ಜೆ.ಥಾಮ್ಸನ್‍ರ ಉಲ್ಲೇಖವಿಲ್ಲ.  ಮೊದಲ ಜಾಗತಿಕ ಯುದ್ದದಲ್ಲಿ ಜರ್ಮನಿಯ ಸೋಲು, ಏರಿದ ಹಣದುಬ್ಬರ, ಕಿಶೋರಾವಸ್ಥೆಯಲ್ಲಿ ತೀರಿಕೊಂಡ ಮಗನ ನೆನಪಿನಲ್ಲಿ ಲೆನಾರ್ಡ್ ಜರ್ಝರಿತನಾಗಿದ್ದನು. ಐನ್‍ಸ್ಟೀನ್ ಹಾಗೂ ಇತರರು ಭೌತಶಾಸ್ತ್ರವನ್ನು ಅತಿಯಾಗಿ ಗಣಿತೀಕರಣಗೊಳಿಸಿ, ಅಗ್ರಾಹ್ಯಗೊಳಿಸಿರುವರೆಂದು ಲೆನಾರ್ಡ್ ಬಲವಾಗಿ ನಂಬಿದ್ದನು.  1919ರಲ್ಲಿ ಲೆನಾರ್ಡ್ ಜರ್ಮನ್ ಭೌತಶಾಸ್ತ್ರವನ್ನು ರೂಪಿಸಬೇಕೆಂದೂ, ಇದು ಯಹೂದಿಗಳಿಂದ ಮುಕ್ತವಾಗಿರಬೇಕೆಂದು ಸಾರಿದನು. ಐನ್‍ಸ್ಟೀನ್ ಅತಿರೇಕದ ಸೈದ್ಧಾಂತಿಕ ನಿಲುವಿನವನೆಂದು ಟೀಕಿಸಿದನು,  ಲೆನಾರ್ಡ್, ನಾಝಿ ಆಡಳಿತ ಬೆಂಬಲಿಸಿದ ಮುಖ್ಯವಾಹಿನಿಯ ಏಕೈಕ ವಿಜ್ಞಾನಿಯೆಂದು ಚರಿತ್ರೆಯಲ್ಲಿ ದಾಖಲಾಗಿದ್ದಾನೆ.  1930ರ ವೇಳೆಗೆ ಜರ್ಮನಿಯಿಂದ ಪ್ರತಿಭಾವಂತ ವಿಜ್ಞಾನಿಗಳ ದಂಡು ಹೊರದೇಶಗಳಿಗೆ ವಲಸೆ ಹೋಗಿ, ಅಲ್ಲಿನ ಭೌತಶಾಸ್ತ್ರ ಪ್ರತಿಭೆಗೆ ಮಂಕು ಕವಿಯತೊಡಗಿತು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate