ಲೊಹ್ರೆಂಟ್ಸ್, ಹೆಂಡ್ರಿಕ್ ಅ್ಯಂಟನ್ (1903-1971) ೧೯೦೨
ಡೆನ್ಮಾರ್ಕ್-ಸೈದ್ಧಾಂತಿಕ ಭೌತಶಾಸ್ತ್ರ- ಎಲೆಕ್ಟ್ರಾನ್ ಹಾಗೂ ವೈದ್ಯುತ್ ಕಾಂತೀಯ ಶಾಸ್ತ್ರಗಳ ಸಿದ್ಧಾಂತಗಳಿಗೆ ಗಣನೀಯ ಕೊಡುಗೆ ನೀಡಿದಾತ.
ಲೊಹ್ರೆಂಟ್ಸ್, ಅರ್ನ್‍ಹೆಮ್ ಹಾಗೂ ಲೀಡೆನ್‍ಗಳಲ್ಲಿ ಅಧ್ಯಯನ ಪೂರೈಸಿದನು. ಇಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಬೆಳಕಿನ ಪ್ರತಿಫಲನ ಕುರಿತು ಈತ ಪ್ರಕಟಿಸಿದ ಲೇಖನದಿಂದಾಗಿ ಅವನು ಲೀಡೆನ್‍ನ ಭೌತಶಾಸ್ತ್ರ ವಿಭಾಗದ ಪೀಠ ಅಲಂಕರಿಸಿದನು. 1912 ಟೆಯ್ಲರ್ ಇನ್ಸ್ಟಿಟಿಟ್ಯೂಟ್‍ನ ನಿರ್ದೇಶಕನಾದನು. ಲೊಹ್ರೆಂಟ್ಸ್ ಸಂಪ್ರಬಂಧ ಎರಡು ಮಾಧ್ಯಮಗಳಿರುವಾಗ ಮ್ಯಾಕ್ಸ್‍ವೆಲ್‍ನ ತರಂಗದ ಸಮೀಕರಣಗಳನ್ನು ಹೇಗೆ ಪರಿಹರಿಸಬೇಕೆಂದು ತೋರಿಸಿತು. ಚಲಿಸುತ್ತಿರುವ ಮಾಧ್ಯಮದಲ್ಲಿ ಬೆಳಕಿನ ಸ್ವಭಾವ ಕುರಿತು ಫ್ರೆನೆಲ್ ಸೂತ್ರವನ್ನು ಲೊಹ್ರೆಂಟ್ಸ್ ವಿಶ್ಲೇಷಿಸಿದನು,. 1892ರಲ್ಲಿ ಎಲೆಕ್ಟ್ರಾನ್ ಸಿದ್ಧಾಂತ ಪ್ರಕಟಿಸಿ, ಎಲೆಕ್ಟ್ರಾನ್‍ಗಳು ಈಥರ್‍ನಲ್ಲಿ ಹುದುಗಿರುವುವೆಂದೂ, ಅವು ಮ್ಯಾಕ್ಸ್’ವೆಲ್‍ನ ವೈದ್ಯುತ ಕಾಂತೀಯ ತರಂಗಗಳನ್ನು ವರ್ಗಾಯಿಸಿ, ತಮ್ಮದೇ ಆದ ಕ್ಷೇತ್ರ ಬಲವನ್ನು ಹೊಂದಿವೆಯೆಂದು ಲೊಹ್ರೆಂಟ್ಸ್ ಬಲವಾಗಿ ವಾದಿಸಿದನು. 1889ರಲ್ಲಿ ಹೀವಿಸೈಡ್ ಸ್ವತಂತ್ರವಾಗಿ ಇದೇ ಬಗೆಯ ಬಲಗಳನ್ನು ಸೂಚಿಸಿದ್ದನು. ಲೊಹ್ರೆಂಟ್ಸ್ ಸೂಕ್ಷ್ಮ ಮಟ್ಟದಲ್ಲಿ ಕ್ರಿಯಾಶೀಲನಾಗಿರುವ ಎಲೆಕ್ಟ್ರಾನ್‍ಗಳು ಹೇಗೆ ಸ್ಥೂಲ ರೂಪದಲ್ಲಿ ಎದ್ದು ಕಾಣುವ ಪರಿಣಾಮಗಳಿಗೆ ಕಾರಣವೆಂದು ವಿವರಿಸಿದನು. 1899ರಲ್ಲಿ ಈತ ಎಲೆಕ್ಟ್ರಾನ್ ಎಂಬ ಪದ ಟಂಕಿಸಿದನು. ಎಲೆಕ್ಟ್ರಾನ್‍ಗಳನ್ನು ಕ್ಯಾಥೋಡ್ ಕಿರಣಗಳಿಗೆ ಸಂಬಂಧಿಸಿದನು. ಎಲೆಕ್ಟ್ರಾನ್‍ಗಳು ಕಂಪಿಸಿದಾಗ,. ಮ್ಯಾಕ್ಸ್‍ವೆಲ್ ಸೂಚಿಸಿದ ವೈದ್ಯುತ್ ಕಾಂತೀಯ ಅಲೆಗಳು ಉದಿಸುತ್ತವೆಯೆಂದು ಲೊಹ್ರೆಂಟ್ಸ್ ಪ್ರತಿಪಾದಿಸಿದನು. ಝೀಮನ್ ಬೆಳಕಿನ ರೋಹಿತದ ಸಾಲುಗಳು ಕಾಂತಕ್ಷೇತ್ರದ ಪ್ರಭಾವದಲ್ಲಿ ಸೀಳಲ್ಪಡುವ ಝೀಮನ್ ಪರಿಣಾಮ ಗುರುತಿಸಿದನು. ಝೀಮನ್ ಹಾಗೂ ಲೊಹ್ರೆಂಟ್ಸ್ 1902ರ ನೊಬೆಲ್ ಪ್ರಶಸ್ತಿ ಪಡೆದರು. ಭೌತಶಾಸ್ತ್ರದಲ್ಲಿ ಎಲೆಕ್ಟ್ರಾನ್ ಸಿದ್ಧಾಂತ ಅತ್ಯಂತ ಯಶಸ್ವಿಯಾಯಿತಲ್ಲದೆ, ಅದು ದ್ಯುತಿ ವೈದ್ಯುತ್ ಪರಿಣಾಮ (Photoelectric Effect) ವಿವರಿಸಲು ಸೋತಾಗ ಅದನ್ನು ಪರಿಷ್ಕರಿಸಲು ಹೊಸದಾದ ಕ್ವಾಂಟಂ ಸಿದ್ಧಾಂತ ಸೃಜಿಸಲಾಯಿತು. ಲೊಹ್ರೆಂಟ್ಸ್ , ಮೈಕೆಲ್‍ಸನ್ ಮತ್ತು ಮಾರ್ಲೆ ಪ್ರಯೋಗವನ್ನು ವಿಶ್ಲೇಷಿಸಿ, ಚಲಿಸುತ್ತಿರುವ ಕಾಯಗಳು ಅವು ಚಲಿಸುತ್ತಿರುವ ದಿಕ್ಕಿನಲ್ಲಿ ಸ್ವಲ್ಪ ಸಂಕೋಚನಗೊಳ್ಳುತ್ತಿದೆಯೆಂದು ಸಾಧಿಸಿದನು. ಫಿûಟ್‍ಜೆರಾಲ್ಡ್ ಸ್ವತಂತ್ರವಾಗಿ ಇಂತಹುದೇ ತೀರ್ಮಾನಗಳಿಗೆ ಬಂದಿದ್ದನು. ಅದಕ್ಕಾಗಿ ಇದನ್ನು ಫಿಟ್‍ಜೆರಾಲ್ಡ್-ಲೊಹ್ರೆಂಟ್ಸ್ ಸಂಕುಚನವೆಂದು ಕರೆಯುತ್ತಾರೆ. 1904ರಲ್ಲಿ ಲೊಹ್ರೆಂಟ್ಸ್ ಇದಕ್ಕೆ ಗಣಿತೀಯ ವಿವರಣೆ ಅಭಿವೃದ್ದಿಗೊಳಿಸಿದನು. 1905ರಲ್ಲಿ ಐನ್‍ಸ್ಟೀನ್‍ರ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ ಇದು ತನ್ನ ಪರಿಪೂರ್ಣ ಅರ್ಥ ಕಂಡಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/12/2019