ಇಟಲಿ-ಭೌತಶಾಸ್ತ್ರ- ಇಂಜಿನಿಯರ್ ರೇಡಿಯೋ ಟೆಲೆಗ್ರಾಫಿûಯ ಮುಂಚೂಣಿಗ.
ಪ್ರಾಥಮಿಕ ಶಿಕ್ಷಣವನ್ನು ಖಾಸಗಿಯಾಗಿ ಗಳಿಸಿದ ಮಾರ್ಕೊನಿ, ಲಿವೊರ್ನೋ ತಾಂತ್ರಿಕ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದನು. ಇಪ್ಪತ್ತೊಂದನೇ ವಯಸ್ಸಿನಲ್ಲಿ ಹಟ್ರ್ಸ್‍ನ ವೈದ್ಯುತ್‍ಕಾಂತೀಯ ತರಂಗಗಳ ಬಗೆಗೆ ಕೇಳಿ ರೋಮಾಂಚಿತನಾಗಿದ್ದನು. ಮಾರ್ಕೋನಿ, ಒಂದು ಕಿ. ಮೀ ದೂರಕ್ಕೆ ರೇಡಿಯೋ ತರಂಗಗಳನ್ನು ಕಳಿಸುವ ಪ್ರೇಷಕ, ಹಾಗೂ ಗ್ರಾಹಿಗಳನ್ನು ನಿರ್ಮಿಸಿದನು. 1896ರಲ್ಲಿ, ಬ್ರಿಟಿಷ್ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಮಾರ್ಕೋನಿ, ಮೂರು ವರ್ಷಗಳ ನಂತರ ಮೋರ್ಸ್ ಸಂಕೇತಗಳನ್ನು ಇಂಗ್ಲೀಷ ಕಡಲ್ಗಾಲುವೆಯಾಚೆಗೆ ರವಾನಿಸುವಲ್ಲಿ ಯಶಸ್ವಿಯಾದನು. ಇದು ನೌಕಾದಳವನ್ನು ಸೇರಿದಂತೆ ಬಹು ಜನರ ಗಮನ ಸೆಳೆಯಿತು. ರಾಯಲ್ ನೇವಿಯ ಹಡಗುಗಳಲ್ಲಿ ಮಾರ್ಕೋನಿ ಸಾಧನಗಳು ತಳವೂರಿದವು. 1901ರಲ್ಲಿ ಕಾರ್ನ್‍ವೇಲ್‍ನಿಂದ ಕಳಿಸಿದ ಸಂದೇಶಗಳನ್ನು , ಅಟ್ಲಾಂಟಿಕ್ ಸಾಗರದಾಚೆಗಿನ ನ್ಯೂ ಫೌಂಡ್‍ಲ್ಯಾಂಡ್‍ನಲ್ಲಿ, ಗಾಳಿಪಟದಿಂದ ಮೇಲೇರಿಸಿದ ಅ್ಯಂಟೇನಾದಿಂದ ಸ್ವೀಕರಿಸಲಾಯಿತು, ಇದರಿಂದಾಗಿ 27ನೇ ವಯಸ್ಸಿನಲ್ಲೇ ಮಾರ್ಕೋನಿ ಮನೆ ಮಾತಾದನು. 1909ರಲ್ಲಿ ನೊಬೆಲ್ ಪ್ರಶಸ್ತಿ ವೀಜೇತನಾದನು. ಮಾರ್ಕೊನಿ, ರೇಡಿಯೋ ತರಂಗಗಳನ್ನು ಅನಾವರಣಗೊಳಿಸಲಿಲ್ಲವಾದರೂ, ಅವುಗಳನ್ನು ಕಳಿಸುವ, ಸ್ವೀಕರಿಸುವ ವ್ಯಾವಹಾರಿಕ ಬಳಕೆಗೆ ತರುವ ಮಾರ್ಗಗಳನ್ನು ಸುಗಮಗೊಳಿಸಿದನು. ಮೊದಲ ಜಾಗತಿಕ ಯುದ್ದದಲಿ, ಬಹು ದೂರಕ್ಕೆ ಕಳಿಸಬಹುದಾದ ಲಘು ತರಂಗದ ರೇಡಿಯೋ ಸಲಕರಣೆ ಸಿದ್ದಗೊಳಿಸಿದನು. 1927ರಲ್ಲಿ ಜಾಗತಿಕ ಯುದ್ದದಲ್ಲಿ, ಬಹು ದೂರಕ್ಕೆ ಕಳಿಸಬಹುದಾದ ಲಘು ತರಂಗಾಂತರದ ರೇಡಿಯೋ ಸಲಕರಣೆ ಸಿದ್ದಗೊಳಿಸಿದನು. 1927ರಲ್ಲಿ ಜಾಗತಿಕ ಮಟ್ಟದ ಟೆಲಿಗ್ರಾಫ್ ಜಾಲ ಹರಡಿದನು. ಮಾರ್ಕೊನಿ ಕೊನೆಯವರೆಗೂ ರೇಡಿಯೋ ತರಂಗಗಳ ಸಂಶೋಧನೆಯಲ್ಲಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/28/2020