ಅಸಂಸಂ-ಭೌತಶಾಸ್ತ್ರ- ಈಥರ್ ಮಾಧ್ಯಮದ ಅಸ್ತಿತ್ವ ಹುಡುಕಿದಾತ
ಪೋಲೆಂಡ್‍ನ ಸ್ಟ್ರೆನ್ಲೋನಲ್ಲಿ ಹುಟ್ಟಿದ ಮೈಖೇಲ್‍ಸನ್. ನಾಲ್ಕು, ವರ್ಷದವನಿರುವಾಗ ಅವನ ತಂದೆ ತಾಯಿಗಳು ಅಸಂಸಂಗಳಿಗೆ ವಲಸೆ ಹೋದರು. ಮೈಖೆಲ್‍ಸನ್ ಹದಿನೇಳನೇ ವಯಸ್ಸಿನಲ್ಲಿ ಅನ್ನ ಪೋಲಿಸ್ ನೇವಲ್ ಅಕಾಡೆಮಿ ಸೇರಿದನು. ಇಲ್ಲಿಂದ ಪದವಿ ಗಳಿಸಿ, ಭೌತ ಹಾಗೂ ರಸಾಯನಶಾಸ್ತ್ರದ ಬೋಧಕನಾದನು. ಪಾಠ ಮಾಡುವಾಗ ಬೆಳಕಿನ ವೇಗವನ್ನು ಹೇಗೆ ಅಳೆಯಬಹುದೆಂದು ವಿವರಿಸುತ್ತಿದ್ದ ಮೈಖೇಲ್‍ಸನ್ ಹಿದಕ್ಕಾಗಿ ಮಾಪನೆಯ ಉಪಕರಣಗಳನ್ನು ಉತ್ತಮಗೊಳಿಸತೊಡಗಿದನು. 1880ರಲ್ಲಿ ಎರಡು ವರ್ಷಗಳ ಅವಧಿಗೆ ಯುರೋಪಿಗೆ ಭೇಟಿಯಿತ್ತ ಮೈಖೇಲ್‍ಸನ್ ಹೆಲ್ಮ್ ಹೋಲ್ಟ್ಸ್ ಪ್ರಯೋಗಾಲಯದಲ್ಲಿ ಮೊದಲ ವ್ಯತಿಕರಣ ಮಾಪಕವನ್ನು (Interferometer) ನಿರ್ಮಿಸಿದನು. ಇದರ ವೆಚ್ಚವನ್ನು ಅಲೆಕ್ಸಾಂಡರ್ ಗ್ರಹಾಂ ಬೆಲ್ ಭರಿಸಿದನು. ಬೆಳಕು,. ಈಥರ್ ಎಂದು ಕರೆಯಲಾಗುವ, ವಿಶ್ವವನ್ನು ವ್ಯಾಪಿಸಿರುವ ಮಾಧ್ಯಮದ ಮೂಲಕ ಹರಿಯುತ್ತಿದೆಯೆಂದು ಆ ಕಾಲದಲ್ಲಿ ಪರಿಗಣಿಸಲಾಗಿದ್ದಿತು,. ಇದರ ಪತ್ತೆಗಾಗಿ ಮೈಖೇಲ್‍ಸನ್, ವ್ಯತಿಕರಣಮಾಪಕ ಬಳಸಿ ನಡೆಸಿದ ಪ್ರಯೋಗಗಳು ಅಂತಹ ಮಾಧ್ಯಮ ಇಲ್ಲವೆಂದು ಸೂಚಿಸಿದವು. 1881ರಲ್ಲಿ ನೇವಿ ತೊರೆದು ಮೈಖೇಲ್‍ಸನ್ ಓಹಿಯಾದ ಕ್ಲೀವ್ ಲ್ಯಾಂಡ್‍ನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. ಇಲ್ಲಿ ಮಾರ್ಲೆ ಜೊತೆಗೂಡಿ ಮತ್ತೊಮ್ಮೆ ಈಥರ್‍ನ ಪತ್ತೆಗೆ ಪಯೋಗ ಹಮ್ಮಿಕೊಂಡನು. ಇದರಿಂದಲೂ ಈಥರ್ ಅಸ್ತಿತ್ವ ಸಾಬೀತಾಗಲಿಲ್ಲ. 1905ರಲ್ಲಿ ಐನ್‍ಸ್ಟೀನ್ ಸಾಪೇಕ್ಷತಾವಾದ ಮಂಡಿಸಿ, ವೈದ್ಯುತ್ ಕಾಂತೀಯ ಅಲೆಪ್ರಸರಣಕ್ಕೆ ಮಾಧ್ಯಮದ ಅಗತ್ಯವಿಲ್ಲವೆಂದು ತೋರಿಸಿದನು. ದೂರವನ್ನು ತರಂಗಾಂತರದಲ್ಲಿ ಹೇಳಿದ ಮೈಖೇಲ್‍ಸನ್, ತಾರೆಗಳ ಕೋನೀಯ ವ್ಯಾಸ ಅಳೆದ ಮೊದಲಿಗ. ಚಂದ್ರನಿಂದ, ಭೂಮಿಯ ಘನದ ಮೇಲಾಗುವ ಪರಿಣಾಮ ಅಳೆದನು. 1907ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಅಮೆರಿಕಾದವನಾಗಿ ಮೈಖೇಲ್‍ಸನ್ ಚರಿತ್ರೆಯ ಪ್ಯಟಗಳಲ್ಲಿ ಸೇರಿದ್ದಾನೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/5/2020