ಫ್ರಾನ್ಸ್- ಭೌತಶಾಸ್ತ್ರ- ವಿಕಿರಣಪಟುತ್ವವನ್ನು (Radioactivity) ಅನಾವರಣಗೊಳಿಸಿದಾತ
ಬೆಕುರೆ ತಾತ ಹಾಗೂ ತಂದೆ ಭೌತಶಾಸ್ತ್ರಜ್ಞರಾಗಿದ್ದರು. ಅವರ ನೆರಳಿನಲ್ಲೇ ಬೆಕುರೆ ಭೌತಶಾಸ್ತ್ರ ಅಭ್ಯಸಿಸಿದನು.ಅವರ ಪ್ರಭಾವಕ್ಕೊಳಗಾಗಿ ವರ್ಣಪ್ರದೀಪ್ತಿಯ (Fluoroscence) ಬಗ್ಗೆ ಆಸಕ್ತಿ ತಳೆದಿದ್ದನಲ್ಲದೆ, ಎಕೊಲೆ ಪಾಲಿಟೆಕ್ನಿಕ್ ನಲ್ಲಿ ತನ್ನ ತಂದೆಯ ಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾದನು. 1895ರಲ್ಲಿ ಪ್ರಾಧ್ಯಾಪಕನಾದನು. ಆಕಸ್ಮಿಕವಾಗಿ ಯುರೇನಿಯಂ ಲವಣದ ಬದಿಗಿಟ್ಟಿದ್ದ. ಛಾಯಾಗ್ರಹಣ ¥sóÀಲಕ ಕಪ್ಪಾಗಿರುವುದನ್ನು ಗವiನಿಸಿದನು ಇದು ಕಪ್ಪಾಗಲು ಅವನ್ನು ಯಾವುದೇ ಬೆಳಕಿಗೆ ಒಡ್ಡಲಾಗಿಲ್ಲವೆಂದು ಖಚಿತಪಡಿಸಿಕೊಂಡನು. ಇದರಿಂದ ಅವನಿಗೆ ಯುರೇನಿಯಂ ಲವಣದ ಯಾವುದೋ ಪ್ರಭಾವದಿಂದ ಇವು ಕಪ್ಪಾಗುವುದು ನಿಶ್ಚಿತವೆನಿಸಿತು. ಬೆಳಕಿನಂತೆ ಪ್ರತಿಫಲನಗೊಳ್ಳದ ಯುರೇನಿಯಂನ ವಿಕಿರಣಶೀಲತೆಯೇ ಇದಕ್ಕೆ ಕಾರಣವೆಂದೂ ಇಂತಹ ವಿಕಿರಣಶೀಲತೆ ಗಾಳಿಯನ್ನು ಅಯಾನೀಕರಣಗೊಳಿಸುವುದೆಂದೂ ಕಂಡು ಹಿಡಿದನು. 1895ರಲ್ಲಿ ರಾಂಟ್‍ಜೆನ್ ಅನಾವರಣಗೊಳಿಸಿದ ಕ್ಷ-ಕಿರಣಕ್ಕೆ ಇಂತಹುದೇ ಸ್ವಭಾವಗಳಿದ್ದರೂ, ಅದು ವಿಕಿರಣಶೀಲತೆಗಿಂತ ಭಿನ್ನವಾದುದು. 1903ರಲ್ಲಿ ಬೆಕುರೆ, ಕ್ಯೂರಿ ಜೊತೆ ಸೇರಿ ನೊಬೆಲ್ ಪ್ರಶಸ್ತಿ ಪಡೆದನು. ಬೆಕುರೆ ಕಾಂತೀಯ ಪರಿಣಾಮ, ಸ್ಪಟಿಕಗಳಿಂದ ಬೆಳಕಿನ ಹೀರಿಕೆಗಳ ಬಗ್ಗೆ ಸಾಕಷ್ಟು ಕೆಲಸ ಮಾಡಿದನಾದರೂ, ವಿಕಿರಣಶೀಲತೆಯ ಅನಾವರಣಕಾರನೆಂತಲೇ ಖ್ಯಾತನಾಗಿದ್ದಾನೆ. ತನ್ನ ಬಳಿಯಿದ್ದ ರೇಡಿಯಂ , ಚರ್ಮವನ್ನು ಸುಡುವುದೆಂದು ಬೆಕುರೆ ಅರಿತನು. ಮುಂದೆ ಇದೇ ತಳಹದಿಯ ಮೇಲೆ ಕ್ಯಾನ್ಸರ್ ರೋಗ ಚಿಕಿತ್ಸೆಗೆ ವಿಕಿರಣ ಚಿಕೆತ್ಸೆ ರೂಪುಗೊಂಡಿತು. ಯಾವುದೇ ವಿಕಿರಣಶೀಲ ಧಾತು, ಪ್ರತಿ ಸೆಕೆಂಡಿಗೆ ಹೊರಸೂಸುವ ವಿಕಿರಣವನ್ನು ಸೂಚಿಸಲು ಬಳಸುವ ಮಾನಕವನ್ನು ಗೌರವಾರ್ಥವಾಗಿ ಬೆಕುರೆ ಎಂದು ಕರೆಯಲಾಗಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/25/2019