অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ಯೂರಿ, ಮೇರಿ

ಕ್ಯೂರಿ, ಮೇರಿ

ಕ್ಯೂರಿ, ಮೇರಿ (1867-1934) 1903 &೧೯೧೧

Curie, Marie

ಪೋಲೆಂಡ್-ಫ್ರಾನ್ಸ್- ಭೌತಶಾಸ್ತ್ರ ವಿಕಿರಣಪಟು ಧಾತುಗಳಾದ (Radioactive Elements) ಪೊಲೇನಿಯಂ ಹಾಗೂ ರೇಡಿಯಂಗಳನ್ನು ಅನಾವರಣಗೊಳಿಸಿದಾಕೆ -–ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದಾಕೆ.


ಮೇರಿ ಕ್ಯೂರಿಯ ಮೂಲ ಹೆಸರು ಮಾನ್ಯ ಸ್ಲ್ಕೊಡೋವಸ್ಕಾ.  ಮೇರಿ. ರಷ್ಯನ್ ಪ್ರಾಬಲ್ಯದ ಪೆÇೀಲೆಂಡ್‍ನಲ್ಲಿ ಕಡು ಬ ಡವ ಕುಟುಂಬದಲ್ಲಿ ಹುಟ್ಟಿ ಬೆಳೆದಳು.  ತೀವ್ರ ದೇಶಾಭಿಮಾನಿಗಳಾಗಿದ್ದ ಮೇರಿಯ ತಂದೆ, ತಾಯಿಗಳು , ಪೋಲಿಷ್  ಭಾಷೆ ಹಾಗೂ ಸಂಸ್ಕೃತಿಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು. ಮೇರಿಯ ತಂದೆ ಗಣಿತ ಹಾಗೂ ಭೌತಶಾಸ್ತ್ರದ ಬೋಧಕನಾಗಿದ್ದು, ತಾಯಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಳಾಗಿದ್ದಳು. ಮೇರಿ ಬಾಲ್ಯದಿಂದಲೇ ಭೌತಶಾಸ್ತ್ರದತ್ತ ಆಕರ್ಷಿತಳಾಗಿದ್ದಳಾದರೂ , ಕಡು ಬಡತನದ ಕೌಟುಂಬಿಕ ಹಿನ್ನೆಲೆಯಲ್ಲಿ ಅವಳಿಗೆ ಉನ್ನತ ವ್ಯಾಸಂಗ ಮಾಡುವುದೇ ಆಸಾಧ್ಯವೆಂಬ ಸ್ಥಿತಿ ಬಂದೊದಗಿತು. ಅದಲ್ಲದೆ ಪೋಲೆಂಡ್‍ನಲ್ಲಿ ಆ ಕಾಲಕ್ಕೆ ಮಹಿಳೆಯರು ಉನ್ನತ ವಿಧ್ಯಾಭ್ಯಾಸ ಮಾಡುವ ಅವಕಾಶಗಳು, ಹಾಗೂ ಸಾಮಾಜಿಕ ಒಪ್ಪಿಗೆಯೂ ಇರಲಿಲ್ಲ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮೇರಿಯ ಸೋದರಿ ಬ್ರೊನ್ಯಾ ಅವಳ ನೆರವಿಗೆ ನಿಂತಳು. ಹೇಗಾದರೂ ಮಾಡಿ ಮೇರಿ ಉನ್ನತ ವಿದ್ಯಾಭ್ಯಾಸ ಮಾಡಲು ಬ್ರೊನ್ಯಾ  ನೆರವೀಯಬೇಕೆಂದೂ, ಅದಕ್ಕೆ ಪ್ರತಿಯಾಗಿ ಮೇರಿಯೂ ಬ್ರಾನ್ಯಾಳಿಗೆ ನೆರವಾಗಬೇಕೆಂದೂ ಸೋದರಿಯರಲ್ಲಿ ಒಪ್ಪಂದವೊಂದಾಯಿತು. ಇದಕ್ಕಾಗಿ ಬ್ರೊನ್ಯಾ ಚರ್ಚ್‍ನ ಗವರ್ನೆಸ್ ಕೆಲಸಕ್ಕೆ ಸೇರಿದಳು. 1891ರಲ್ಲಿ ಮೇರಿ, ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ಯಾರಿಸ್‍ಗೆ ಬಂದು ನೆಲೆಸಿದಳು. ಪರಿಪೂರ್ಣತೆಯತ್ತ ಸದಾ ನೋಟವಿಟ್ಟಿದ್ದ ಮೇರಿ ಅಷ್ಟೇ ಸ್ವತಂತ್ರ ಮನೋಭಾವದವಳೂ, ಶ್ರಮ ಸಾಹಸಿಯೂ ಆಗಿದ್ದಳು.  1893ರಲ್ಲಿ ಸೊರಬೊನ್ನೆ ವಿಶ್ವ ವಿಧ್ಯಾಲಯದಲ್ಲಿ ಪ್ರಥಮ ಸ್ಥಾನ ಗಳಿಸಿ, ಪದವಿ ಸಂಪಾದಿಸಿದಳು. ಮುಂದಿನ ವರ್ಷ ಪೋಲೆಂಡ್‍ನಿಂದ ದೊರೆತ ಶಿಷ್ಯವೇತನದಲ್ಲಿ ಗಣಿತದ ಅಧ್ಯಯನ ಮಾಡಿ, ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಗಳಿಸಿದಳು. ಈ ಅವಧಿಯಲ್ಲಿ ಮೇರಿ, ಪೀರೆ ಕ್ಯೂರಿಯನ್ನು ಬೇಟಿಯಾದಳು. ಆಗ್ಗೆ 35 ವಯಸ್ಸಾಗಿದ್ದ ಪೀರೆ ಸ್ಕೂಲ್ ಆಫ್ ಇಂಡಸ್ಟ್ರೀಯಲ್ ಫಿನಿಕ್ಸ್ ಅಂಡ್ ಕೆಮೆಸ್ಟ್ರಿ ಸಂಸ್ಥೆಯಲ್ಲಿ ಪೀಝೋ ವೈದ್ಯುತ ಶಾಸ್ತ್ರದ ಮೇಲೆ ಕೆಲಸ ಮಾಡುತ್ತಿದ್ದನು. ವಿದ್ಯಾಭ್ಯಾಸದ ನಚಿತರ ಪೋಲೆಂಡಿಗೆ ಮರಳಿ ಉಪನ್ಯಾಸಕಳಾಗಬೇಕೆಂದಿದ್ದ ಮೇರಿ ಪೀರೆಯ ಪರಿಚಯವಾದ ನಂತರ ತನ್ನ ನಿರ್ಧಾರ ಬದಲಿಸಿ, 1895ರಲ್ಲಿ ಅವನನ್ನು ಮದುವೆಯಾದುದಲ್ಲದೆ ಮೇರಿ ಕ್ಯೂರಿಯೆಂದು ಗುರುತಿಸಲ್ಪಟ್ಟಳು.

1892ರಲ್ಲಿ ಬೆಕೂರೆ, ಯುರೇನಿಯಂ ಲವಣಗಳಲ್ಲಿನ ವಿಕಿರಣಶೀಲತೆಯನ್ನು ಕಂಡು ಹಿಡಿದನು.  ಡಾಕ್ಟರೇಟ್ ಪದವಿ ಸಂಶೋಧನಾ ವಿಷಯದ ಹುಡುಕಾಟದಲ್ಲಿದ್ದ ಮೇರಿಗೆ ಬೆಕೂರೆ ಗುರುತಿಸಿದ ಹೊಸ ವಿದ್ಯಾಮಾನ ಗಮನ ಸೆಳೆಯಿತು. ತನ್ನ ಗಂಡನ ಪ್ರಯೋಗಾಲಯದಲ್ಲೇ ಕೆಲಸ ಮಾಡುತ್ತಾ ಮೇರಿ , ವಿಕಿರಣಶೀಲತೆ  ಯುರೇನಿಯಂನ ಅಣ್ವಯಿಕ ಗುಣವೆಂತಲೂ, ಯುರೇನಿಯಂನಂತೆ ಥೋರಿಯಂ ಸಹ ವಿಕಿರಣಶೀಲವೆಂತಲೂ, ತೋರಿಸಿದಳು.  1897ರಲ್ಲಿ ಮೇರಿ ಐರೇನ್‍ಗೆ ಜನ್ಮ ನೀಡಿದಳು. ಮುಂದೆ ಐರೇನ್ ಕೂಡ ನೊಬೆಲ್ ಪ್ರಶಸ್ತಿ ಪುರಸ್ಕೃತಳಾದಳು. ಹಲವಾರು ನೈಸರ್ಗಿಕ ಖನಿಜಗಳನ್ನು ವಿಕಿರಣಶೀಲ ಅಧ್ಯಯನಕ್ಕೆ ಆರಿಸಿಕೊಂಡ ಮೇರಿ ಪಿಚ್‍ಬ್ಲೆಂಡ್ ಹಾಗೂ ಚಾರ್ಕೋಲೈಟ್ ಅದಿರುಗಳಿಂದ ಹೊಮ್ಮುವ ವಿಕಿರಣಶೀಲತೆ , ಯುರೇನಿಯಂ ಹಾಗೂ ಥೋರಿಯಂಗಿಂತ ಪ್ರಬಲವಾಗಿರುವುದು ತಿಳಿಯಿತು. ಇದರಿಂದ ಮೇರಿ ಈ ಅದಿರುಗಳಲ್ಲಿ ಯುರೇನಿಯಂಗಿಂತ ಹೆಚ್ಚು ಪ್ರಬಲವಾದ ವಿಕಿರಣಶೀಲ ಸರಕಿರುವುದಾಗಿ ಅನುಮಾನಿಸಿದಳು. ಪಿಚ್‍ಬ್ಲೆಂಡನಿಂದ ಈ ಹೊಸ ಧಾತುವನ್ನು ಪ್ರತ್ಯೀಕಿಸಲು ಮೇರಿ ಪ್ರಾರಂಭಿಸಿದಳು. ಇದಕ್ಕಾಗಿ ಅವಳು ಆಯ್ದುಕೊಂಡಿದ್ದ ಅಂಶಿಕ ಸ್ಪಟಿಕೀಕರಣ (Partial Crystallisation) ಬಹು ಪ್ರಯಾಸಕರ ಮಾರ್ಗವಾಗಿದ್ದಿತು.  ಹೆಂಡತಿಗೆ ನೆರವಾಗಲೋಸುಗ ಪೀರೆ ಕ್ಯೂರಿ ತನ್ನ ಸ್ವಂತ ಸಂಶೋಧನೆಗೆ ರಾಜೀನಾಮೆ ನೀಡಿದನು. ಆಗಿನ ಕಾಲಕ್ಕೆ ವಿಕಿರಣಶೀಲತೆಯಿಂದ ಮಾನವರ ಮೇಲಾಗುವ ಅಪಾಯಗಳ ಅರಿವಿರದ ಕ್ಯೂರಿ ದಂಪತಿಗಳು ಯಾವುದೇ ಸುರಕ್ಷ ಕ್ರಮ ಕೈಗೊಳ್ಳದೆ ಸಂಶೋಧನೆ ಮುಂದುವರೆಸಿದರು. ಕ್ಯೂರಿಗಳು ಸಿದ್ದಪಡಿಸಿದ ಟಿಪ್ಪಣಿಗಳಲ್ಲಿ ಕೊನೆ,ಕೊನೆಗೆ ಅತ್ಯಂತ ಪ್ರಬಲ ವಿಕಿರಣಶೀಲತೆಯ ಅಪಾಯದ ಎಚ್ಚರಿಕೆಗಳು ದಾಖಲಾಗಿವೆ. 1898ರ ಜುಲೈನಲ್ಲಿ ಕ್ಯೂರಿ ದಂಪತಿಗಳು ಎರಡು ಹೊಸ ವಿಕಿರಣಶೀಲ ಧಾತುಗಳ ಅಸ್ತಿತ್ವವನ್ನು ಜಗತ್ತಿಗೆ ಸಾರಿದರು. ತನ್ನ ತಾಯ್ನಾಡಿನ ಗೌರವರ್ಥವಾಗಿ ಮೇರಿ ಅದರಲ್ಲಿ ಒಂದನ್ನು ಪೊಲೋನಿಯಂ ಎಂದು ಹೆಸರಿಸಿದಳು. ಇದೇ ವರ್ಷದ ಡಿಸೆಂಬರನಲ್ಲಿ ಪೊಲೋನಿಯಂಗಿಂತ ಪ್ರಬಲ ವಿಕಿರಣಶೀಲ ಯುರೇನಿಯಂನ್ನು ಪ್ರತ್ಯೇಕಿಸಿದರು. ಬೊಹಿಮಿಯಾದ ತ್ಯಾಜ್ಯ ಗಣಿಗಳಿಂದ ಪಡೆದ ಕಚ್ಚಾ ಅದಿರಿನಿಂದ , ಯುರೇನಿಯಂನ್ನು ಪ್ರತ್ಯೇಕಿಸಲು ಮನೆಯ ಹಿತ್ತಲಿನಲ್ಲಿದ್ದ ಷೆಡ್‍ನಲ್ಲಿ ಅವಿರತ ಶ್ರಮಪಟ್ಟರು.  ಹಲವು ಹಂತದ, ಹಲವು ವರ್ಷಗಳ ಶ್ರಮದ ಫಲವಾಗಿ 1902ರಲ್ಲಿ ಅವರು 100 ಮಿ.ಲಿಗ್ರಾಂ ಯುರೇನಿಯಂನ್ನು ಶುದ್ದ ರೂಪದಲ್ಲಿ ಪಡೆಯುವಲ್ಲಿ ಸಾರ್ಥಕತೆ ಕಂಡರು. ಈ ಧಾತು ಎಷ್ಟು ಪ್ರಬಲವಾಗಿತ್ತೆಂದರೆ, ಸುತ್ತಲಿನ ಗಾಳಿಯನ್ನು ಅಯೋನೀಕರಿಸುತ್ತಿತ್ತಲ್ಲದೆ, ನೀರನ್ನು ವಿಯೋಜಿಸಿ ಶಾಖ ಬಿಡುಗಡೆ ಮಾಡುತ್ತಿದ್ದು ಕತ್ತಲಲ್ಲೂ ಹೊಳೆಯುತ್ತಿದ್ದಿತು. 

1903ರಲ್ಲಿ ಮೇರಿ ಕ್ಯೂರಿ , ಡಾಕ್ಟರೇಟ್ ಗಾಗಿ ಸಂಪ್ರಬಂಧ ಮಂಡಿಸಿ, ಫ್ರಾನ್ಸ್‍ನಲ್ಲಿ ಆ ಕೀರ್ತಿಗೆ ಪಾತ್ರಳಾದ ಮೊದಲ ಮಹಿಳೆ ಎನಿಸಿದಳು.  1903ರಲ್ಲಿ ಕ್ಯೂರಿ ದಂಪತಿಗಳಿಗೆ, ಬೆಕೂರೆ ಜೊತೆ ಸೇರಿದಂತೆ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ದಕ್ಕಿತು. 1904ರಲ್ಲಿ ಕ್ಯೂರಿ ದಂಪತಿಗಳಿಗೆ ಎರಡನೇ ಹೆಣ್ಣು ಮಗು ಈವ್ ಜನಿಸಿದಳು. ಆದರೆ ಅದಿರಿನಿಂದ, ಯುರೇನಿಯಂನ್ನು ಪ್ರತ್ಯೇಕಿಸುವಾಗ ದೀರ್ಘಾವಧಿ ವಿಕಿರಣಶೀಲತೆಗೆ ತುತ್ತಾಗಿದ್ದ ಪೀರೆಯ ಆರೋಗ್ಯ ಹದಗೆಡುತ್ತಾ ಬಂದಿತು. 1904ರಲ್ಲಿ ಪೀರೆಯನ್ನು ಸೊರೆಬೊನ್ನೆಯ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಿಸಲಾಯಿತಲ್ಲದೆ, ಮೇರಿಯನ್ನು ಪೀರೆಗಾಗಿ ನಿರ್ಮಿಸಲು ಪ್ರಾಯೋಜಿತಗೊಂಡಿದ್ದ ಪ್ರಯೋಗಾಲಯದ ಉಸ್ತುವಾರಿ ಮುಖ್ಯಸ್ಥೆಯನ್ನಾಗಿಸಲಾಯಿತು.  ಈ ಪ್ರಯೋಗಾಲಯ 1915ರಲ್ಲಿ ಪ್ರಾರಂಭವಾಯಿತು.  ಆದರೆ ಅದನ್ನು ನೋಡುವ ಭಾಗ್ಯ ಪೀರೆಗಿರಲಿಲ್ಲ.  ಏಕೆಂದರೆ 1906ರಲ್ಲಿ ರಸ್ತೆ ಅಪಘಾತದಲ್ಲಿ ಪೀರೆ ಅಸು ನೀಗಿದನು.  ಪೀರೆಯ ಮರಣದ ನಂತರ , ಅವನ ಸ್ಥಾನವನ್ನು ಅಲಂಕರಿಸುವಂತೆ ಮೇರಿಯನ್ನು ಅಹ್ವಾನಿಸಲಾಯಿತು.ಮೇರಿ , ಸೊರೆಬೊನ್ನೆಯ ಮೊದಲ ಮಹಿಳಾ ಪ್ರಾಧ್ಯಾಪಕಳಾದಳು. ಗಂಡನ ಮರಣದ ನಂತರ ಮಾನಸಿಕವಾಗಿ ಜರ್ಝರಿತಳಾಗಿದ್ದ ಮೇರಿ, ಪೊಲೇನಿಯಂನ್ನು ಶುದ್ದ ರೂಪದಲ್ಲಿ ಪಡೆಯಲು ಯತ್ನಿಸಿದಳು. ಮಕ್ಕಳ ಪಾಲನೆ ಹಾಗೂ ಉಳಿದವರ ಸಂಶೋದನೆಯ ಮೇಲ್ವಿಚಾರಣೆಯಲ್ಲಿಯೇ ಮೇರಿಯ ಉಳಿದ ಜೀವನ ಕಳೆಯಿತು. 1910ರಲ್ಲಿ ಮೇರಿಗೆ ಲೆಜಿಯನ್ ಡಿ ಹಾನರ್ ಗೌರವ ನೀಡಬೇಕೆಂಬ ಪ್ರಸ್ತಾವನೆಯೊಂದು ಸರ್ಕಾರದ ಮುಂದೆ ಬಂದಿತು. ಹಿಂದೆ ಇದೇ ಗೌರವವನ್ನು ಪೀರೆ ತಿರಸ್ಕರಿಸಿದ್ದರಿಂದ, ಮೇರಿಯೂ ಸಹ ಗಂಡನ ಹಾದಿಯನ್ನೇ ತುಳಿದು ಅದನ್ನು ನಿರಾಕರಿಸಿದಳು. ಇದೇ ವೇಳೆಗೆ ಪ್ಯಾರಿಸ್‍ನ ‘ಅಕಾಡೆಮಿಕ್ ಡೆ ಸೈನ್ಸ್’ನ ಚುನಾವಣೆಗೆ ಸ್ಪರ್ದಿಸಿದಳಾದರೂ, ಚುನಾಯಿತಳಾಗಲಿಲ್ಲ. ಮೇರಿ ಚುನಾಯಿತಳಾಗಿದ್ದರೆ, ಪ್ರಥಮ ಮಹಿಳಾ ಸದಸ್ಯೆಯೆಂಬ ಗೌರವಕ್ಕೆ ಪಾತ್ರಳಾಗುತ್ತಿದ್ದಳು. 1911ರಲ್ಲಿ ಪೊಲೇನಿಯಂ ಹಾಗೂ ರೇಡಿಯಂ ಸಂಶೋಧನೆಗಾಗಿ ಮೇರಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಎರಡನೇ ಬಾರಿ ಪಡೆದಳು.  ವಿಕಿರಣಶೀಲತೆಯ ಅಳತೆಯ ಮೂಲವನ್ನು ಕ್ಯೂರಿ ಎಂದು ಕರೆದು, ಕ್ಯೂರಿ ದಂಪತಿಗಳನ್ನು ಗೌರವಿಸಲಾಗಿದೆ. ಈಗಿನ ವ್ಯಾಖ್ಯೆಯಂತೆ ಸೆಕೆಂಡಿಗೆ 3.7x10 ಶೈಥಿಲ್ಯಗಳು ಒಂದು ಕ್ಯೂರಿ. ಮೇರಿ ತನ್ನ 67ನೇ ವಯಸ್ಸಿನಲ್ಲಿ , ವಿಕಿರಣಶೀಲತೆಗೆ ಒಡ್ಡಿಕೊಂಡ ಪರಿಣಾಮವಾಗಿ ಬಿಳಿರಕ್ತಕಣ ದೋಷವುಂಟಾಗಿ  ಕೊನೆಯುಸಿರೆಳೆದಳು. ಮೇರಿ ಸಿದ್ದಾಂತಿಯಾಗಿರಲಿಲ್ಲವಾದರೂ ನಿಪುಣ ವಿಕಿರಣ ರಸಾಯನಶಾಸ್ತ್ರಜ್ಞೆಯಾಗಿದ್ದಳು. ಅವಳ ಕಾರ್ಯಗಳಿಂದ ವಿಕಿರಣಶೀಲ ಕ್ಷೇತ್ರದಲ್ಲಿ ಸಂಶೋಧನೆಯ ಅಗತ್ಯವಿದೆಯೆಂದು ಮನದಟ್ಟಾಯಿತು.  ಮೇರಿ ಅಂತರಾಷ್ಟ್ರೀಯ ಮಟ್ಟದ ಹಾಗೂ ಖ್ಯಾತಿಯ ಮೊದಲ ಮಹಿಳೆ.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 8/9/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate