ಕ್ರೈಗ್, ಸಿ ಮೆಲ್ಲೋ , ೨೦೦೬
ಅಸಂಸಂ-ರಸಾಯನಶಾಸ್ತ್ರ-ಪಜೀವಕೋಶದಲ್ಲಿ ಪೆÇ್ರೀಟೀನ್ ಉತ್ಪಾದನೆ ನಿಯಂತ್ರಣ ಕುರುತಾಗಿ ಸಂಶೋಧಿಸಿದಾತ.
ಕ್ರೈಗ್ ಈಗ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಜೀವ ಕೋಶಗಳು ಪ್ರಾಣಿಗಳ ಮೂಲಘಟಕಗಳು. ಇವುಗಳ ಸಂಯೋಜನೆಯಿಂದಲೇ ಜೀವಿಯ ಅಸ್ತಿತ್ವ ಸಾಧ್ಯವಾಗಿದೆ. ಜೀವ ಕೋಶದಲ್ಲಿ ಕೇಂದ್ರದಲ್ಲಿ ನ್ಯೂಕ್ಲಿಯಸ್ ಅಥವಾ ಕೋಶಬೀಜವಿದೆ. ಇದನ್ನು ಕೋಶ ದ್ರವ್ಯ(Cytoplasm) ಆವರಿಸಿದೆ. ಜೀವ ಕೋಶದ ಕ್ರಿಯೆಗಳಿಗೆ, ಪೆÇೀಷಣೆಗೆ ಚೈತನ್ಯದ ಅಗತ್ಯವಿದೆ. ಈ ಪೆÇೀಷಣೆ ಕೋಶ ದ್ರವ್ಯದಿಂದ ಉತ್ಪಾದಿಸಲ್ಪಡುವ ಪೆÇ್ರೀಟೀನ್‍ಗಳಿಂದ ದಕ್ಕುತ್ತದೆ. ಕೋಶದ್ರವ್ಯ ಜೀವಕೋಶಕ್ಕೆ ಅಗತ್ಯವಾದ ಪೆÇ್ರೀಟೀನ್‍ಗಳನ್ನು ಉತ್ಪಾದಿಸುವಂತೆ ಕೋಶಬೀಜದಲ್ಲಿರುವ ಡಿಎನ್‍ಎ, ದೂತ ಆರ್‍ಎನ್‍ಎ (m-RNA=Messenger RNA) ಮೂಲಕ ಆದೇಶಿಸುತ್ತದೆ. ಇಂತಹ ಆದೇಶ ಬಂದಾಗಲೇ ಪೆÇ್ರೀಟೀನ್ ಉತ್ಪಾದನೆ ಸಾಧ್ಯ. ಈ ಕ್ರಿಯೆಯನ್ನು ಪಾರಲಿಖಿತತೆ (Transcription) ಎನ್ನುತ್ತಾರೆ. ದೂತ ಆರ್‍ಎನ್‍ಎ ಕಾರ್ಯ ನಿರ್ವಹಣೆಯಲ್ಲಿ ಕುಂದು ಕೊರತೆಗಳುಂಟಾದಾಗ ಜೀವಕೋಶದಲ್ಲಿ ಪ್ರೋಟೀನ್ ಉತ್ಪಾದನೆ ಏರು ಪೇರಾಗಿ ಅಥವಾ ಸ್ಥಗಿತಗೊಂಡು ಕೋಶ ಮಟ್ಟದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕ್ರೈಗ್ ಹಾಗೂ ಆ್ಯಂಡ್ರೂ ಝಡ್ ಫೈರ್, ಡಿಎನ್‍ಎಯಿಂದ ಮಾಹಿತಿ ಸಾಗಿಸಲು ಅರ್‍ಎನ್‍ಎ ಬದಲಾಗಿ ಆರ್‍ಎನ್‍ಒವನ್ನು ಕೋಶದೊಳಕ್ಕೆ ಸೇರಿಸಿದರು. ಇದರಿಂದಾಗಿ ದೂತ ಆರ್‍ಎನ್‍ಎಗಳನ್ನು ಬೇಕಾದಂತೆ ನಿಯಂತ್ರಿಸುವುದು ಸಾಧ್ಯವಾಯಿತು. ಈ ತಂತ್ರಜ್ಞಾನದಿಂದ, ದೇಹದಲ್ಲಿ ಕೋಶ ಮಟ್ಟದಲ್ಲಿ ನಡೆಯುವ ಕ್ರಿಯೆಗಳನ್ನು ನಿರ್ದಿಷ್ಟ ಫಲಿತಾಂಶ ದಕ್ಕುವಂತೆ ಮಾರ್ಪಡಿಸಬಹುದು. ಇದನ್ನು ವೈರಸ್ ಆಕ್ರಮಣ, ಕ್ಯಾನ್ಸರ್‍ನಂತಹ ರೋಗ ಚಿಕಿತ್ಸೆಗಳಲ್ಲೂ ಅಳವಡಿಸಿಕೊಳ್ಳಬಹುದು. ಈ ತಂತ್ರಜ್ಞಾನದ ಅಭಿವೃದ್ಧಿಗಾಗಿ ಕ್ರೈಗ್ 2006ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/18/2020