ಆ್ಯಂಡ್ರ್ಯೂ ,ಝಕಾರಿ ಫೈರ್ –(1959--) ೨೦೦೬
ಅಸಂಸಂ-ತಳಿಶಾಸ್ತ್ರ-ವಂಶವಾಹಕ ನಿಯಂತ್ರಕ ಆರ್‍ಎನ್‍ಎ ಅನಾವರಣಗೊಳಿಸಿದಾತ.
ಆ್ಯಂಡ್ರ್ಯೂಕ್ಯಾಲಿಫೊರ್ನಿರ್ನಿಯ ರಾಜ್ಯದ ಪಾಲೋಆಲ್ಬೋದಲ್ಲಿ 27 ಏಪ್ರಿಲ್ 1959ರಂದು ಜನಿಸಿದನು. 1978ರಲ್ಲಿ ಹತ್ತೊಂಬತ್ತನೇ ವಯಸ್ಸಿನಲ್ಲಿ ಬರ್ಕ್ಲೆಯ ಕ್ಯಾಲಿಫೋರ್ನೀಯ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಪದವಿ ಪಡೆದನು. ನಂತರ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದನು. ಇಲ್ಲಿ ಫಿಲಿಫ್ ಷಾರ್ಪ್‍ನ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ 1983ರಲ್ಲಿ ಡಾಕ್ಟರೇಟ್ ಗಳಿಸಿದನು. ಇದರ ನಂತರ ಬ್ರಿಟನ್‍ಗೆ ಹೋಗೆ ಕೇಂಬ್ರಿಜ್‍ನಲ್ಲಿ ಸಂಶೋಧಕನ ಸ್ಥಾನ ಅಲಂಕರಿಸಿದನು. ಇಲ್ಲಿರುವಾಗಲೇ ನೊಬೆಲ್ ವಿಜೇತರಾದ ಸಿಡ್ನಿ ಬ್ರೆನ್ನರ್ ನೇತೃತ್ವದಲ್ಲಿದ್ದ ಅಣ್ವಯಿಕ ಜೀವಶಾಸ್ತ್ರ ಪ್ರಯೋಗಾಲಯ ಸೇರಿದನು. 1986ರಲ್ಲಿ ತಾಯ್ನಾಡಿಗೆ ಮರಳಿದ ಅ್ಯಂಡ್ರ್ಯೂ 2003ರವರೆಗೆ ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ï ವಾಷಿಂಗ್ಟನ್‍ನ ಭ್ರೂಣಶಾಸ್ತ್ರ ವಿಭಾಗದಲ್ಲಿ ಸಿಬ್ಬಂದಿಯಾದನು. ಇಲ್ಲಿರುವಾಗ ಆರ್‍ಎನ್‍ಎ ಕೆಲವು ವಂಶವಾಹಕಗಳನ್ನು (Genes) ಕ್ರಿಯಾಹೀನಗೊಳಿಸುವ ವಿದ್ಯಾಮಾನವನ್ನು ಗುರುತಿಸಿದನು. ಇದಾದ ನಂತರ ಕ್ರೈಗ್ ಮೆಲ್ಲೊ ಜೊತೆಗೂಡಿ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಮುಂದುವರೆಸಿದನು. ಸಂಶೋಧನೆಯಿಂದ ಆರ್‍ಎನ್‍ಎಯ ತುಣುಕುಗಳು ಜೀವಕೋಶದಲ್ಲಿರುವ ದೂತ ಆರ್‍ಎನ್‍ಎ (Messenger RNA=m-RNA) ಪ್ರೋಟಿನ್ ಉತ್ಪಾದಿಸುವ ಮುನ್ನವೇ ಅದನ್ನು ವಿನಾಶಗೊಳಿಸಿ ಅದರಿಂದ ಪ್ರೇರಿತವಾಗುವ ವಂಶವಾಹಕಗಳನ್ನು ಹತ್ತಿಕ್ಕುವುದು ಖಚಿತವಾಯಿತು. ಇದು ಜೀವಶಾಸ್ತ್ರದಲ್ಲಿನ ಕ್ರಿಯಾ ನಿಯಂತ್ರಣಗಳನ್ನು ನೋಡುವ ದೃಷ್ಟಿಯಲ್ಲಿ ಕ್ರಾಂತಿಯನ್ನು ತಂದಿತಲ್ಲದೆ ವಂಶವಾಹಕಗಳಿಂದ ಮಾಹಿತಿ ಹರಿಯುವ ಮಾರ್ಗವನ್ನು ತೋರಿಸಿತು. ಈ ಸಾಧನೆಗಾಗಿ ಆ್ಯಂಡ್ರ್ಯೂ 2006ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020