ರಾಬರ್ಟ್, ಎಫ್ ಕರ್ಲ್ ಜೂ (1933--) ೧೯೯೬
ಅಸಂಸಂ-ರಸಾಯನಶಾಸ್ತ್ರ- ಇಂಗಾಲದ ಹೊಸ ಬಹುರೂಪಿಯನ್ನು (Allotropy) ಅನಾವರಣಗೊಳಿಸಿದಾತ.
ರಾಬರ್ಟ್, 1933 ಆಗಸ್ಟ್ 23ರಂದು ಟೆಕ್ಸಾಸ್ ಪ್ರಾಂತದ ಅಲೈಸ್‍ನಲ್ಲಿ ಜನಿಸಿದನು. ಈತನ ತಂದೆ, ಚರ್ಚ್‍ನಲ್ಲಿ ಮೆಥಾಡಿಸ್ಟ ಮಿನಿಸ್ಟರ್‍ನಾಗಿದ್ದನು. ದಕ್ಷಿಣ ಟೆಕ್ಸಾಸ್,ಅಲೈಸ್, ಬ್ರಾಡಿ, ಸ್ಯಾನ್ ಅ್ಯಂಟೋನಿಯೋ ಕಿಂಗ್ಸ್ ವಿಲ್ಲೆಯಂತಹ ಪಟ್ಟಣಗಳಲ್ಲಿ ಬಾಲ್ಯವನ್ನು ಕಳೆದ ರಾಬರ್ಟ್, ಒಂಬತ್ತು ವರ್ಷದವನಿರುವಾಗ ರಾಸಾಯನಿಕ ಉಪಕರಣಗಳನ್ನು ಉಡುಗೊರೆಯಾಗಿ ಪಡೆದನು. ಇವುಗಳೊಂದಿಗೆ ಒಂದು ವಾರ ಕಾಲ ಆಟವಾಡಿದ ರಾಬರ್ಟ್ ಮುಂದೆ ತಾನೊಬ್ಬ ದೊಡ್ಡ ರಸಾಯನಶಾಸ್ತ್ರಜ್ಞನಾಗಬೇಕೆಂದು ಕನಸು ಕಂಡನು. ಪ್ರೌಢಶಾಲೆಯ ವೇಳೆಗೆ ಈ ಕನಸನ್ನು ನನಸಾಗಿಸಲು ಯತ್ನಿಸಿದ ರಾಬರ್ಟ್‍ಗೆ ಉಪಧ್ಯಾಯಿನಿ ಲೊರೆನಾ ಡೇವಿಸ್‍ನಿಂದ ಭಾರಿ ಬೆಂಬಲ ದಕ್ಕಿತು. ರಾಬರ್ಟ್‍ನ ತಂದೆ ಉತ್ತಮ ಸ್ಥಾನದಲ್ಲಿದ್ದರೂ, ಆರ್ಥಿಕವಾಗಿ ಅಂತಹ ಸ್ಥಿತಿವಂತನಾಗಿರಲಿಲ್ಲ. ರಾಬರ್ಟ್ ಶಿಕ್ಷಣ ಶುಲ್ಕವಿಲ್ಲದ ರೈಸ್ ಸಂಸ್ಥೆ ಸೇರಿ ರಸಾಯನಶಾಸ್ತ್ರವನ್ನು ಆರಿಸಿಕೊಂಡನು. ಇಲ್ಲಿ ವಿದ್ಯಾಭ್ಯಾಸಮುಗಿಸಿ, ಫಿûಟ್ಜರ್ ಮಾರ್ಗದರ್ಶನದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಬಕ್ರ್ಲೆಯಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೇರಿದನು. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಹಾರ್ವರ್ಡ್‍ನಲ್ಲಿ ಇ.ಬ್ರೈಟ್‍ನೊಂದಿಗೆ ವೃತ್ತಿ ಜೀವನ ಪ್ರಾರಂಭಿಸಿದನು. ನಂತರ ರೈಸ್ ವಿಶ್ವವಿದ್ಯಾಲಯದ ಆಹ್ವಾನಕ್ಕೆ ಓಗೊಟ್ಟು ಉಪ ಪ್ರಧ್ಯಾಪಕನಾದನು. ಇಲ್ಲಿ ವಿದ್ಯಾರ್ಥಿಯಾಗಿದ್ದ ಜಿಮ್ ಕಿನ್ಸ್ ಸಹಕಾರದಲ್ಲಿ ಸ್ಥಿರ ಮುಕ್ತಾಣು (radicle) ರೋಹಿತಗಳ (Spectrum) ಅಧ್ಯಯನ ನಡೆಸಿದನು. 1958ರಿಂದ ರೈಸ್ ಸಂಸ್ಥೆಯಲ್ಲಿರುವಾಗ ರಾಬರ್ಟ್ ಭೌತ ರಸಾಯನಶಾಸ್ತ್ರದಲ್ಲಿನ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸತೊಡಗಿದನು. ಕಾಲ್ಚೆಂಡಿನ ಆಕಾರದಲ್ಲಿ ಅಣುಗಳು ಜೋಡಣೆಗೊಂಡಿರುವ ಇಂಗಾಲದ ಹೊಸ ಬಗೆಯ ಬಹುರೂಪಿಯನ್ನು ಅನಾವರಣಗೊಳಿಸಿದ್ದಕ್ಕಾಗಿ ರಾಬರ್ಟ್, ರಿಚರ್ಡ್ ಸ್ಮಾಲಿ ಹಾಗೂ ಹ್ಯಾರಿ ಕ್ರೋಟೋರೊಂದಿಗೆ 1996ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/30/2020