ಕ್ರಿಶ್ಚಿಯಾನೆ , ನುಸ್ಲೀನ್ ವೊಲ್ಹಾರ್ಡ್ –(1942) ೧೯೯೫
ಜರ್ಮನಿ -ವೈದ್ಯಕೀಯ-ಪರಿಶುದ್ಧ ಅರ್‍ಎನ್‍ಎ ಪಾಲಿಮರೇಸ್‍ನ್ನು ಪಡೆಯುವ ವಿಧಾನವನ್ನು ರೂಪಿಸಿದಾಕೆ.
ಕ್ರಿಶ್ಚಿಯಾನೆ 20ಅಕ್ಟೋಬರ್ 1942ರಂದು ಫ್ರಾಂಕ್’ಫರ್ಟ್ ಜನಿಸಿದಳು. ಈಕೆಯ ತಂದೆ ವೈದ್ಯಕೀಯದಲ್ಲಿ ಪ್ರಾಧ್ಯಾಪಕನಾಗಿದ್ದನು. ಪ್ರೌಢಶಾಲೆಯಲ್ಲಿರುವಾಗ ಕ್ರಿಶ್ಚಿಯಾನೆ ಜೀವಶಾಸ್ತ್ರದಲ್ಲಿ ಕುತೂಹಲ ತಾಳಿ, ತನ್ನದೇ ಆದ ವಿಕಾಸ ಸಿದ್ಧಾಂತವನ್ನು ಚಿಂತಿಸಿದಳು. 1964ರಲ್ಲಿ ಟುಬಿನ್‍ಜೆನ್ ವಿಶ್ವವಿದ್ಯಾಲಯದಲ್ಲಿ ಮೊಟ್ಟ ಮೊದಲ, ಏಕೈಕ ಜೀವ ರಸಾಯನಶಾಸ್ತ್ರದ ವಿಭಾಗ ಪ್ರಾರಂಭವಾಯಿತು. ಕ್ರಿಶ್ಚಿಯಾನ್ ಇಲ್ಲಿ ಪದವಿಗೆ ಸೇರಿದಳು. ಅಂತಿಮ ವರ್ಷದಲ್ಲಿ ಸೂಕ್ಷ್ಮಜೀವಿಶಾಸ್ತ್ರ ಮತ್ತು ರಸಾಯನಶಾಸ್ತ್ರಗಳನ್ನು ಅಭ್ಯಸಿಸಿದನು. 1969ರಲ್ಲಿ ಪದವಿ ಪಡೆದಳು. ನಂತರ ಸಂಶೋಧನೆಯ ಅಂಗವಾಗಿ ಪರಿಶುದ್ಧ ಅರ್‍ಎನ್‍ಎ ಪಾಲಿಮರೇಸ್‍ನ್ನು ಪಡೆಯುವ ವಿಧಾನವನ್ನು ಕ್ರಿಶ್ಚಿಯಾನೆ ರೂಪಿಸಿದಳು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/30/2019