ಆಲ್ಫ್ರೆಡ್ ,ಜಿ. ಗಿಲ್‍ಮನ್ –(1941--) ೧೯೯೪
ಅಸಂಸಂ-ಔಷಧಶಾಸ್ತ್ರ- ಜೈವಿಕ ಪೆÇರೆಗಳ ಸಂಕೀರ್ಣ ರಚನೆಯ ತಿಳುವಳಿಕೆಗಾಗಿ ಶ್ರಮಿಸಿದಾತ.
ಗಿಲ್‍ಮನ್‍ನ ತಾತ ಸಂಗೀತೋಪಕರಣಗಳ ವ್ಯಾಪಾರಿಯಾಗಿದ್ದನು. ತಾಯಿ ಶ್ರೇಷ್ಟ ಮಟ್ಟದ ಪಿಯಾನೋ ವಾದಕಿಯಾಗಿದ್ದಳು. ಬಾಲ್ಯದಲ್ಲಿ ಸ್ವಲ್ಪ ಕಾಲ ತಂದೆ ತಾಯಿಗಳಿಂದ ಬಂದ ಸಂಗೀತದ ಅಭಿರುûಚಿ ಕ್ರಿಯಾಶೀಲವಾಗಿದ್ದು ಬರ ಬರುತ್ತಾ ಅದು ಗಿಲ್‍ಮನ್‍ನಲ್ಲಿ ಮಾಸಿಹೋಯಿತು. ಗಿಲ್‍ಮನ್ ತಂದೆ ಅಂಗ ಕ್ರಿಯಾ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿ ಯೇಲ್ ವೈದ್ಯಕೀಯ ಶಾಲೆಯ ಔಷಧ ಶಾಸ್ತ್ರ ವಿಭಾಗದಲ್ಲಿ ಸಿಬ್ಬಂದಿಯಾಗಿದ್ದನು. 1941ರಲ್ಲಿ ಈತ ತನ್ನ ಸ್ನೇಹಿತನಾದ ಗುಡ್‍ಮನ್ ನೊಂದಿಗೆ ಔಷಧಿಶಾಸ್ತ್ರದ ಪುಸ್ತಕ ಪ್ರಕಟಿಸಿದನು. ಈ ಗ್ರಂಥ ಕತೃಗಳ ಜಂಟಿ ಹೆಸರಾದ ಆಲ್ಫ್ರೆಡ್ ಗುಡ್‍ಮನ್ ಗಿಲ್‍ಮನ್ ಎಂದು ಮಗನಿಗೆ ನಾಮಕರಣ ಮಾಡಿದನು. ತಂದೆಯೊಂದಿಗೆ ಆಗಾಗ್ಗೆ ಪ್ರಯೋಗಾಲಯಗಳಿಗೆ ಭೇಟಿ ನೀಡುತ್ತಿದ್ದ ಗಿಲ್‍ಮನ್‍ಗೆ ಜೀವಶಾಸ್ತ್ರ, ವೈದ್ಯಕೀಯದಲ್ಲಿ ಅಭಿರುಚಿ ಚಿಗುರೊಡೆಯಿತು. 1962ರಲ್ಲಿ ಕ್ಲೀವ್‍ಲ್ಯಾಂಡ್‍ನಲ್ಲಿರುವ ಕೋಸ್ಟ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ ಸೇರಿದ ಗಿಲ್‍ಮನ್ ಚಕ್ರೀಯ ಎಎಮ್‍ಪಿ ಕುರಿತಾಗಿ ಸಂಶೋಧನೆಗೆ ನೊಂದಾಯಿಸಿಕೊಂಡನು ಇದೇ ಕಾಲಕ್ಕೆ ರ್ಯಾಲ್ ಮೆದುಳಿನಲ್ಲಿರುವ ಚಕ್ರೀಯ ಎಎಮ್‍ಪಿ (Cyclic AMP) ಕುರಿತಾಗಿ ಅಧ್ಯಯನ ನಡೆಸಿದರೆ ಗಿಲ್‍ಮನ್ ಥೈರಾಯಿಡ್ ಗ್ರಂಥಿಯನ್ನು ಅರಿಯಲು ಯತ್ನಿಸಿದನು. 1971ರಲ್ಲಿ ಚಾರ್ಲೊಟ್ಜ್ ವಿಲ್ಲೆಯಲ್ಲಿರುವ ವರ್ಜೀನಿಯಾ ವಿಶ್ವವಿದ್ಯಾಲಯದಿಂದ ಔಷಧಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಇಲ್ಲಿ ಎಲಿಮಾಲ್ ರಾಸ್‍ನೊಂದಿಗೆ ಜೈವಿಕ ಪೆÇರೆಗಳ ಸಂಕೀರ್ಣ ರಚನೆಯ ತಿಳುವಳಿಕೆಗಾಗಿ ಶ್ರಮಿಸಿದನು. ಇವುಗಳಲ್ಲಿನ ಸಂಶೋಧನೆಗಳಿಗಾಗಿ 1994ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/18/2020