ಆರ್ವಿಡ್, ಕಾರ್ಲ್‍ಸನ್ –(1926--) ೨೦೦೦
ಸ್ವೀಡನ್-ವೈದ್ಯಕೀಯ-ಕ್ಯಾಲ್ಸಿಯಂ ಚಯಾಪಚಯ, ಮೂಳೆಗಳಲ್ಲಿ ಖನಿಜಗಳ ಸಂಚಯನದ ಅಧ್ಯಯನ ನಡೆಸಿದಾತ.
ಆರ್ವಿಡ್‍ನ ತಂದೆ ಉಪ್ಸಾಲ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಗಳಿಸಿ ಪ್ರಾಧ್ಯಾಪಕನಾಗಿದ್ದನು , 75ನೇ ವಯಸ್ಸಿನಲ್ಲಿ ಆರ್ವಿಡ್ ತಂದೆ ಮೃತನಾದ ನಂತರ ಆಗ 71 ನೇ ವರ್ಷದವಳಾಗಿದ್ದ ಆರ್ವಿಡ್‍ನ ತಾಯಿ ಕಾನೂನಿನಲ್ಲಿ ದೃಷ್ಟಿಯಲ್ಲಿ ಸ್ತ್ರೀಯರನ್ನು ಕುರಿತಾಗಿ ಲೇಖನಗಳನ್ನು ಪ್ರಕಟಿಸಿ ಗೌರವ ಡಾಕ್ಟರೇಟ್ ಪಡೆದಿದ್ದಳು. ಈ ಕುಟುಂಬದಲ್ಲಿ ಮಾನವಿಕಗಳ ಅಧ್ಯಯನ ಪ್ರಾಶಸ್ತ್ಯ ಪಡೆದಿದ್ದು ವಿಜ್ಞಾನಕ್ಕೆ ಸ್ಥಾನವಿರಲಿಲ್ಲ. ಆರ್ವಿಡ್ ವೈದ್ಯಕೀಯ ಪದವಿ ಗಳಿಸುವುದರೊಂದಿಗೆ ಇದು ಬದಲಾಯಿತು. ಲುಂಡ್ ವಿಶ್ವ ವಿದ್ಯಾಲ್ಯದ ವೈದ್ಯಕೀಯ ಕಾಲೇಜಿನಲ್ಲಿ ಟಾರ್‍ಸ್ಟನ್ ಥನ್‍ಬರ್ಗ್‍ನ ಉಪನ್ಯಾಸಗಳು ಆರ್ವಿಡ್‍ಗೆ ಬಹು ಪ್ರಿಯವಾಗಿದ್ದವು. ಅಂಗಾಂಶಗಳ ಉಸಿರಾಟ ಅದರ ತೀವ್ರತೆಯ ಅಳೆಯುವಿಕೆಯನ್ನು ಅಳೆಯುವ ವಿಧಾನವನ್ನು ಟಾರ್‍ಸ್ಟನ್ ರೂಪಿಸಿದ್ದನು. ಇದೇ ಸಾಧನೆಗಾಗಿ, ಸರಿ ಸುಮಾರು ಇದೇ ಕಾಲದಲ್ಲಿ ಸ್ವತಂತ್ರವಾಗಿ ಕ್ರಿಯಾಶೀಲವಾಗಿದ್ದ ವಾರ್‍ಬರ್ಗ್‍ಗೆ ನೊಬೆಲ್ ಪ್ರಶಸ್ತಿ ದಕ್ಕಿದ್ದಿತು. ಇಲ್ಲಿಯೇ ಪ್ರಾಧ್ಯಾಪಕನಾಗಿದ್ದ ಎರ್ನೆಸ್ಟ್ ಓವೆರ್‍ಟನ್ ಕೋಶ ಪೊರೆಗಳ ಸಂರಚನೆ ಹಾಗೂ ಲಿಪಿಡ್ ಗುಣಗಳ ಬಗೆಗೆ ಸಂಶೋಧಿಸಿ ಖ್ಯಾತನಾಗಿದ್ದನು. ತನ್ನ ಸಾಧನೆಗೆ ನೊಬೆಲ್ ಪ್ರಶಸ್ತಿ ದಕ್ಕದಿದ್ದುದರಿಂದ ಓವರ್‍ಟನ್ ಮಾನಸಿಕ ಖಿನ್ನತೆಗೆ ಒಳಗಾಗಿ ಅಸ್ವಸ್ಥನಾದನು. ಜಗತ್ತಿನ ಮೊದಲ ಕೃತಕ ಮೂತ್ರಪಿಂಡ ನಿರ್ಮಿಸಿದ ನಿಲ್ಸ್ ಆಲ್ವಾಲ್ ಸಹ ಈ ವಿಶ್ವವಿದ್ಯಾಲಯದಲ್ಲಿದ್ದನು . ಆಲ್ವಾನ್‍ನ ತಂತ್ರದಿಂದ ಗ್ಯಾಂಬ್ರೋ ಕಂಪನಿ ಮೊದಲ ಕೃತಕ ಮೂತ್ರ ಪಿಂಡಗಳನ್ನು ಮೂತ್ರದ ಆಪೋಹನಕ್ಕೆ ತಯಾರಿಸಿತು. ಟಾರ್‍ಸ್ಟನ್‍ನ ಶಿಷ್ಯನಾಗಿದ್ದ ಜೊರ್ಗೆನ್ ಲೆಹ್‍ಮಾನ್, ವಕ್ಸ್‍ಮನ್‍ನೊಂದಿಗೆ ಪ್ಯಾರಾ ಅಮೈನೋ ಸ್ಯಾಲಿಸೈಲಿಕ್ ಆಮ್ಲವನ್ನು ಮತ್ತು ಸ್ಟ್ರೆಪ್ಟೋಮೈಸಿನ್ ಕಂಡು ಹಿಡಿದಿದ್ದನು. ಆದರೆ ವಕ್ಸ್‍ಮನ್‍ಗೆ ಮಾತ್ರ ನೊಬೆಲ್ ಪ್ರಶಸ್ತಿ ದಕ್ಕಿದ್ದಿತು. ಇಂತಹ ಹಲವು ಹತ್ತಾರು ಖ್ಯಾತದ ಪ್ರಭಾವ ಆರ್ವಿಡ್ ಮೇಲೆ ಬಿದ್ದಿತು. ಪದವಿ ಗಳಿಸಿದ ನಂತರ ಆರ್ವಿಡ್ ದೇಹದ ಮೇಲೆ ಔಷಧಿಗಳ ಪ್ರಭಾವವನ್ನು ಕುರಿತಾಗಿ ಅಧ್ಯಯನ ಕೈಗೊಂಡನು. ಆರಂಭದಲ್ಲಿ ಮಾದಕ ದ್ರವ್ಯ ಸೇವಿಸಿದವರನ್ನು ಎಚ್ಚರಿಸುವ ಪೆಂಟಿಲೊನೆಟಿಟ್ರಿಜೋಲ್‍ನ ಕ್ರಿಯಾಶೀಲತೆ ಖಿನ್ನತೆ ನಿವಾರಣೆಯ ವಿಧಾನಗಳನ್ನು ಅರಿಯಲು ಆರ್ವಿಡ್ ಯತ್ನಿಸಿದನು. ಪೊಕ್'ಸೆರಿನ್ ಜೊತೆಯಲ್ಲಿ ಆರ್ವಿಡ್ ನಿಕೆಥಮೈಡ್‍ನ ಮಾದಕ ಪರಿಣಾಮಗಳನ್ನು ಅಭ್ಯಸಿಸಿದನು. 1948ರಲ್ಲಿ ಕ್ಯಾಲ್ಸಿಯಂ ಚಯಾಪಚಯ (Metabolism), ನುಂಗುವ ಕ್ಯಾಲ್ಷಿಯಂ ಲವಣ ಮಾತ್ರೆಗಳು, ಮೂಳೆಗಳಲ್ಲಿ ಖನಿಜಗಳ ಸಂಚಯನದ ವಿಟಮಿನ್-ಡಿಯ ಪ್ರಾಮುಖ್ಯತೆ ಮತ್ತು ಹೀರಿಕೆ ಕುರಿತಾಗಿ ಆರ್ವಿಡ್ ಗಮನಾರ್ಹ ಸಂಶೋಧನೆಗಳನ್ನು ನಡೆಸಿದ್ದಾನೆ. 2000ರಲ್ಲಿ ಆರ್ವಿಡ್ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/19/2020