ಬ್ಲ್ಯಾಕ್, ಸರ್ ಜೇಮ್ಸ್ (ವೈಟ್) (1924--) ೧೯೮೮
ಬ್ರಿಟನ್-ಔಷಧ ಶಾಸ್ತ್ರ- ಹಲವಾರು ನವೀನ ರೂಪಿಸಿದಾತ.
ಸೇಂಟ್ ಆ್ಯಂಡ್ರೂಸ್‍ನಿಂದ ವೈದ್ಯಕೀಯ ಪದವಿ ಗಳಿಸಿದ ಜೇಮ್ಸ್ , ಉಪನ್ಯಾಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿದನು. ಮುಂದೆ ಮಲಯ ಹಾಗೂ ಗ್ಲಾಸ್ಗೋಗಳಲ್ಲಿ ಅಯ್.ಸಿ.ಅಯ್ ಜೊತೆ ಔಷದಿಗಳ ಸಂಶೋಧನಾü ಕಾರ್ಯ ಪ್ರವೃತ್ತನಾದನು. ನಂತರ ಸ್ಮಿತ್‍ಕ್ಲೈನ್, ಫ್ರೆಂಚ್ ಹಾಗೂ ವೆಲ್‍ಕಂ ಕಂಪನಿಗಳ ಜೊತೆ ಸೇರಿ ಔಷಧಿಶಾಸ್ತ್ರದ ನಾನಾ ವಿಭಾಗಗಳಲ್ಲಿ ಸೇವೆ ಸಲ್ಲಿಸಿದನು. 1988ರಲ್ಲಿ ನೊಬೆಲ್ ಪ್ರಶಸ್ತಿ ಪಡೆದುಕೊಂಡು , ಲಂಡನ್‍ನ ಕಿಂಗ್ಸ್ ಕಾಲೇಜ್ ಹಾಸ್ಪಿಟಲ್ ಮೆಡಿಕಲ್ ಸ್ಕೂಲ್‍ನ ವೈಶ್ಲೇಷಿಕ ಔಷಧಿಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿದ್ದನು. ಜೇಮ್ಸ್ ವೈದ್ಯಕೀಯ ರಂಗಕ್ಕೆ ಎರಡು ಮಹತ್ತರವಾದ ಕಾಣಿಕೆಗಳನ್ನು ನೀಡಿದ್ದಾನೆ. ಹೃದಯದ ಸ್ನಾಯುಗಳಿಗೆ ನಿರ್ದಿಷ್ಟವಾದ ಬೀಟ-ಗ್ರಾಹಿ ಗಳಿವೆಯೆಂದೂ (Beta Receptors)), ಇವು ಚೋದನಿಕೆಗಳ (Hormones) ನಿಯಂತ್ರಣಕ್ಕೆ ಪ್ರತಿಕ್ರಿಯೆ ತೋರಿಸುತ್ತವೆಯೆಂದು, ಸಿದ್ಧಾಂತವೊಂದಿದೆ . ಈ ಸಿದ್ಧಾಂತದ ಆಧಾರದ ಮೇಲೆ ಜೇಮ್ಸ್ ಈ ಭಾಗಗಳನ್ನು ತಡೆಹಿಡಿದರೆ ಚೋದನಿಕೆಗಳು ಹೃದಯದ ಮೇಲೆ ಬೀರಬಹುದಾದ ಪ್ರಭಾವಗಳನ್ನು ನಿವಾರಿಸಿ, ಆ ಮೂಲಕ ಹೃದಯದ ಕಾರ್ಯ ಹೊರೆಯನ್ನು ಇಳಿಸಬಹುದೆಂದು ತರ್ಕಿಸಿದನು. ಇದನ್ನು ಬಹು ಸಮರ್ಪಕವಾದ ಪ್ರೊಪೊನಲಾಲ್ ಎನ್ನುವ ಅನಾರಗೊಮಿಸ್ಟ್’ನ್ನು 1964ರಲ್ಲಿ ಜೇಮ್ಸ್ ಹುಡುಕಿದನು. ಇದಾದ ನಂತರ ಬೀಟ ತಡೆಗಳನ್ನು ಹೃದ್ರೋಗ ಹಾಗೂ ಏರು ರಕ್ತದೊತ್ತಡ ನಿಯಂತ್ರಿಸಲು ವಿಸ್ತೃತವಾಗಿ ಬಳಸಿಕೊಳ್ಳಲಾಗುತ್ತದೆ. ಜೇಮ್ಸ್ ಹೊಟ್ಟೆ ಹುಣ್ಣುಗಳನ್ನು ನಿಯಂತ್ರಿಸಲು ಸರಳ ಹಾಗೂ ಖಚಿತವಾದ ವಿಧಾನ ರೂಪಿಸಲು ಪ್ರಯತ್ನಿಸಿದನು. 1972ರಲ್ಲಿ ಒಂದು ನಿರ್ದಿಷ್ಟ ಬಗೆಯ ಅಂಗಾಂಶ ಗ್ರಾಹಿ ಗಟ್ ಗೋಡೆಯ ಮೇಲಿರುವುದೆಂದೂ ಹಾಗೂ ಇದು ಜಠರದಲ್ಲಿನ ಆಮ್ಲಗಳ ಸ್ರವಿಕೆಯನ್ನು ಪ್ರಚೋದಿಸುವುದೆಂದೂ ಗುರುತಿಸಿದನು. ಈ ಗ್ರಾಹಿಗಳನ್ನು ಸಿಮಿಟಿಡೈನ್ ರಾಸಾಯನಿಕದಿಂದ ಅಡ್ಡಗಟ್ಟಿ ಜಠರದ ಆಮ್ಲ ಸ್ರವಿಕೆಯನ್ನು ನಿಯಂತ್ರಿಸಿ, ಜಠರದ ಹುಣ್ಣುಗಳನ್ನು ವಾಸಿಮಾಡಬಹುದೆಂದು ಸ್ಪಷ್ಟಪಡಿಸಿದನು. ವೈದ್ಯಕೀಯದಲ್ಲಿ ರಾಸಾಯನಿಕಗಳ ಬಳಕೆ ವೈಜ್ಞಾನಿಕತೆಯತ್ತ ಸರಿಯುವಂತೆ ಮಾಡಿದ ಖ್ಯಾತಿ ಜೇಮ್ಸ್‍ಗೆ ಸಲ್ಲುತ್ತದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019