ಬೆಂಗ್ಟ್ , ಐ .ಸ್ಯಾಮುಯೆಲ್‍ಸನ್ (1934--) ೧೯೮೨
ಸ್ವೀಡನ್-ವೈದ್ಯಕೀಯ-ಪ್ರೊಸ್ಟೋಗ್ಲಾಂಡಿನ್‍ಗಳ ರಾಚನಿಕ ಸ್ವರೂಪ ಕುರಿತಾಗಿ ಅಧ್ಯಯನ ನಡೆಸಿದಾತ.
ಬೆಂಗ್ಟ್, 21 ಮೇ 1934 ರಂದು ಹಾಮ್‍ಸ್ಟೆಡ್ ಪಟ್ಟಣದಲ್ಲಿ ಜನಿಸಿದನು. ಲುಂಡ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಗಳಿಸಿದನು. ಇದರ ನಂತರ ಸ್ಟಾಕ್‍ಹೋಂನ ಕೆರೋಲಿನ್ಸ್‍ಕಾ ಸಂಸ್ಥೆಯಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಹೆಚ್ಚಿನ ಪದವಿ ಗಳಿಸಿದನು. ಅಸಂಸಂದ ಹಾರ್ವರ್ಡ್‍ನಲ್ಲಿ ಒಂದು ವರ್ಷ ಸಂಶೋಧನಾ ವಿದ್ಯಾರ್ಥಿಯಾಗಿದ್ದು, ತಾಯ್ನಾಡಿಗೆ ಮರಳಿದನು. 1967ರಲ್ಲಿ ಸ್ಟಾಕ್‍ಹೋಂನ ರಾಯಲ್ ವೆಟೆರಿನರಿ ಕಾಲೇಜಿನ ವೈದ್ಯಕೀಯ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. ಬೆಂಗ್ಟ್ ಕೊಲೆಸ್ಟೆರಾಲ್‍ನ ಚಯಾಪಚಯ ಕುರಿತಾಗಿ ಆಳ ಅಧ್ಯಯನ ನಡೆಸಿದ್ದಾನೆ. ಪೆÇ್ರೀಸ್ಟೋಗ್ಲಾಂಡಿನ್‍ಗಳ ರಾಚನಿಕ ಸ್ವರೂಪ ಕುರಿತಾಗಿ ಸುನೆ ಬರ್ಜ್‍ಸ್ಟ್ರೊಮ್‍ನೊಂದಿಗೆ ನಡೆಸಿದ ಸಂಶೋಧನೆಗಳು ಗಮನಾರ್ಹವೆನಿಸಿವೆ. ಆರ್ಕಿಯಾಡೂನಿಕ್ ಅಮ್ಲಗಳ ರೂಪಾಂತರಿತ ಉತ್ಪನ್ನಗಳಾದ ಎಂಡೋಪೆರಾಕ್ಸೈಡ್, ಥ್ರೋಂಬಾಕ್ಸಿನ್ ಲ್ಯೂಕೋಟೀನ್ಸ್‍ಗಳನ್ನು ಕುರಿತಾದ ಅಧ್ಯಯನಗಳಿಗಾಗಿ 1982ರಲ್ಲಿ ಬೆಂಗ್ಟ್ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಊತ (Thrombosis)) ಹಾಗೂ ಒಗ್ಗದಿಕೆಯ (Allergy) ಚಿಕಿತ್ಸೆಯಲ್ಲಿ ಬೆಂಗ್ಟ್ ಸಂಶೋಧನೆಗಳು ಬಳಕೆಯಾಗುತ್ತಿವೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/29/2020