ಬರ್ಗ್‍ಸ್ಟ್ರೋಮ್, ಸುನೆ ಕಾರ್ಲ್ (1916--) ೧೯೮೨
ಸ್ವೀಡನ್ – ಜೀವ ರಸಾಯನ ಶಾಸ್ತ-ಪೆÇ್ರಸ್ಟೋಗ್ಲಾಂಡಿನ್‍ಗಳನ್ನು ಬೇರ್ಪಡಿಸಿದಾತ.
ಬರ್ಗ್‍ಸ್ಟ್ರೋಮ್ ಸ್ಟಾಕ್‍ಹೋಂನ ರಾಯಲ್ ಕೆರೋನ್ ಇನ್ಸ್‍ಟಿಟ್ಯೂಟ್‍ನಲ್ಲಿ ಪದವಿ ಪಡೆದನು. 1958ರಲ್ಲಿ ಅದೇ ಸಂಸ್ಥೆಗೆ ಜೀವ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸಕ್ಕೆ ಸೇರಿದನು. ಬರ್ಗ್‍ಸ್ಟ್ರೋಮ್‍ನ ಗಮನ ಪ್ರೊಸ್ಟಾಗ್ಲಾಂಡಿಸ್ ರಾಸಾಯನಿಕಗಳ ಕಡೆ ಹರಿದಿದ್ದಿತು. 1930ರ ವೇಳೆಗೆ ಈ ರಾಸಾಯನಿಕಗಳು ಜೈಜೈವಿಕವಾಗಿವ ಪ್ರಭಾವ ಬೀರುತ್ತವೆಯೆಂದು ತಿಳಿದಿದ್ದಿತು. ಈ ರಾಸಾಯನಿಕಗಳ ಪ್ರಭಾವ ಭಾರಿ ಸಂಕೀರ್ಣವಾದುದು. ಇವು ಮಿದುವಾದ ಸ್ನಾಯುಗಳು ಸಂಕೋಚಗೊಳ್ಳದಂತೆ ಮಾಡುತ್ತವೆ. ಇವು ಮಾನವನ ವೀರ್ಯದಲ್ಲೂ, ಕೆರೆಬಿಯನ್ ಸಮುದ್ರದ ವಿಪ್ ಕೋರಲ್ ಪ್ರಾಣಿಯ ಕೋಶದಲ್ಲೂ ವಿಪುಲವಾಗಿ ಅಸ್ತಿತ್ವದಲ್ಲಿವೆ. 1950ರಲ್ಲಿ ಬರ್ಗ್‍ಸ್ಟ್ರೋಮ್ ಮೊದಲಿಗೆ ಎರಡು ಪ್ರೊಸ್ಟಾಗ್ಲಾಂಡಿನ್‍ಗಳನ್ನು ಶುದ್ದ ರೂಪದಲ್ಲಿ ಬೇರ್ಪಡಿಸಿದನು. 1962ರಲ್ಲಿ ಇವೆರಡು ಪ್ರೊಸ್ಟಾಗ್ಲಾಂಡಿನ್‍ಗಳಿಗೆ ಸಾಮಾನ್ಯ ರಾಚನಿಕ ಸ್ವರೂಪವಿದ್ದು, ಐದು ಇಂಗಾಲದ ಬಳೆ ಹಾಗೂ ಬದಿಯ ಇಂಗಾಲದ ಸರಣಿಗಳಿಂದಾಗಿದೆಯೆಂದು ತೋರಿಸಿದನು. ಮುಂದೆ ಇದು ಬಹು ದೊಡ್ಡ ವೈದ್ಯಕೀಯ ರಸಾಯನ ಶಾಸ್ತ್ರವಾಗಿ ಬೆಳೆಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019