অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೊಹೆನ್, ಸೇಮೂರ್ ಸ್ಟ್ಯಾನ್ಲೆ

ಕೊಹೆನ್, ಸೇಮೂರ್ ಸ್ಟ್ಯಾನ್ಲೆ

ಕೊಹೆನ್, ಸೇಮೂರ್ ಸ್ಟ್ಯಾನ್ಲೆ (1917--)  ೧೯೮೬

ಕೊಹೆನ್ 1917 ಏಪ್ರಿಲ್ 30 ರಲ್ಲಿ ನ್ಯೂಯಾರ್ಕ್‍ನಲ್ಲಿ ಜನಿಸಿದನು.  ಆಲ್ಲಿಯೇ ಸ್ಟ್ರೇಟ್ ಕಾಲೇಜಿನಿಂದ , 1936ರಲ್ಲಿ ವಿಜ್ಞಾನದಲ್ಲಿ ಪದವಿ ಗಳಿಸಿದನು.  ನಂತರ ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿ ಚಾರ್‍ಗಾ¥sóïನ ಮಾರ್ಗದರ್ಶನದಲ್ಲಿ ಡಾಕ್ಟರೇಟ್  ಗಳಿಸಿದನು.  ಕೊಹೆನ್, ಬ್ಯಾಕ್ಟೀರಿಯಾಗಳಿಗೆ ರೋಗ ತರುವ ಬ್ಯಾಕ್ಟೀರಿಯಾ¥sóÉೀಜ್ ವೈರಸ್‍ಗಳ ಅಧ್ಯಯನವನ್ನು ಆರಿಸಿಕೊಂಡನು.  ಈ ನಿಟ್ಟಿನಲ್ಲಿ ಕೊಹೆನ್ ಮೊದಲಿಗನಾಗಿದ್ದನು.  ವೈರಸ್‍ಗಳು, ಬ್ಯಾಕ್ಟೀರಿಯಾದ ಮೇಲೆ ದಾಳಿಯೆಸಗಿದಾಗ, ಬ್ಯಾಕ್ಟೀರಿಯಾಗಳ ಕೋಶದಲ್ಲಿನ ಸಹಜವಾದ ಚಯಾಪಚಯ  ಕ್ರಿಯೆಗಳಲ್ಲಿ (Metabolism)ಏರುಪೇರುಗಳಾಗುತ್ತವೆ.  ಇದರ ಪರಿಣಾಮವಾಗಿ ಬ್ಯಾಕ್ಟೀರಿಯಾಗಳಲ್ಲಿ ಬಹು ವಿಶಿಷ್ಟವಾಗಿರುವ ಬಹ್ವಂಗಿಗಳು (Polymers)    ಸಂಶ್ಲೇಷಣೆಗೊಳ್ಳುವುದಿಲ್ಲ. ಇದಕ್ಕೆ ಬದಲಾಗಿ, ವೈರಸ್ ಅಗತ್ಯವಾದ ನ್ಯೂಕ್ಲಿಯಿಕ್ ಆಮ್ಲ ಮತ್ತು ಪೆÇ್ರೀಟೀನ್‍ಗಳು ಸಂಶ್ಲೇಷಣೆಗೊಳ್ಲುವುದೆಂದು, ಕೊಹೆನ್ ವಿಕಿರಣಪಟುತ್ವ ಹೊಂದಿದ ಸಮಸ್ಥಾನಿ (Isotope) ಧಾತುಗಳನ್ನು ಬಳಸಿ ತೋರಿಸಿದನು. ಕೊಹೆನ್ ಹಾಗೂ ಫಯಟ್ ಜಂಟಿಯಾಗಿ ನಡೆಸಿದ ಸಂಶೋಧನೆಯಿಂದ ವೈರಸ್‍ಗಳಲ್ಲಿ 5-ಹೈಡ್ರಾಕ್ಸಿ ಮೀಥೈಲ್ ಸೈಟೋಸ್ಟಾನ್ ಎಂಬ ಬಹು ವಿಶಿಷ್ಟವಾದ ರಾಸಾಯನಿಕವಿರುವುದನ್ನು ತಿಳಿಯಿತು. ಬ್ಯಾಕ್ಟೀರಿಯಾಗಳಲ್ಲಿ ಈ ರಾಸಾಯನಿಕವಿರುವುದಿಲ್ಲ.  ಆದರೆ ಬ್ಯಾಕ್ಟೀರಿಯಾ ವೈರಸ್ ದಾಳಿಗೆ ತುತ್ತಾದಾಗ, ಅದರ ಕೋಶದಲ್ಲೂ ಸಹ ಈ ವಿಶಿಷ್ಟ ರಾಸಾಯನಿಕವನ್ನು ಉತ್ಪಾದಿಸುವ ಕಿಣ್ವಗಳು ಹೊಸದಾಗಿ ನಿರ್ಮಾಣವಾಗುತ್ತವೆಯೆಂದು 1957ರಲ್ಲಿ ಕೊಹೆನ್  ಸ್ಪಷ್ಟ ಪಡಿಸಿದನು. ಇದರಿಂದ ವೈರಸ್, ಬ್ಯಾಕ್ಟೀರಿಯಾದ ಕೋಶದಲ್ಲಿ ತನಗೆ ಬೇಕಾದ ರಾಸಾಯನಿಕ ಉತ್ಪಾದನೆಗೆ ಪ್ರೇರಣೆ ನೀಡುವುದೆಂದು ಖಚಿತವಾಯಿತು. ಕೊಹೆನ್ ಈ ಸಂಶೋಧನೆ ಆಧುನಿಕ ಜೀವರಸಾಯನಶಾಸ್ತ್ರದಲ್ಲಿ ಕ್ರಾಂತಿ ತಂದಿತು. ಕೊಹೆನ್ ವೈರಸ್, ಪ್ರತಿ ಜೈವಿಕಗಳು, ಚಯಾಪಚಯಗಳ ಬಗೆಗೆ ಗಾಢವಾದ ಸಂಶೋಧನೆ ಮಾಡಿದ್ದಾನೆ. ಕೊಹೆನ್ 1963ರಲ್ಲಿ ಪೆಸ್ಸಿಲ್ವೇನಿಯಾದಲ್ಲಿ ಪ್ರಾಧ್ಯಾಪಕನಾದನು.  ಮುಂದೆ ಚೈಕಿತ್ಸಕ ಸಂಶೋಧನಾ ವಿಭಾಗದ ಮುಖ್ಯಸ್ಥನಾದನು,  ಕೊಹೆನ್ ತನ್ನ ಸಾಧನೆಗಳಿಗಾಗಿ ಅಮೆರಿಕನ್ ಅಸೋಸಿಯೇಷನ್ ಫಾರ್  ಅಡ್ವಾನ್ಸ್‍ಮೆಂಟ್ ಅ¥sóï ಸೈನ್ಸ್‍ನ ಪದಕ ಗಳಿಸಿದನು 1967ರಲ್ಲಿ ನ್ಯಾಷನಲ್ ಅಕಾಡೆಮಿ ಆ¥sóï ಸೈನ್ಸ್ ಸದಸ್ಯನಾಗಿಯೂ ಕೊಹೆನ್ ಸೇವೆ ಸಲ್ಲಿಸಿದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 7/2/2020

© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate