ಮಿಷೆಲ್, ಪೀಟರ್ (ಡೆನ್ನಿಸ್) (1920-1992) ೧೯೭೮
ಬ್ರಿಟನ್-ಜೀವ ರಸಾಯನಶಾಸ್ತ್ರ- ಕೋಶಗಳಲ್ಲಿ ಚೈತನ್ಯ ರವಾನೆಯಾಗುವ ಸಿದ್ಧಾಂತ ನೀಡಿದಾತ.
ಸ್ವಂತ ಪ್ರಯೋಗಾಲಯ ಕಟ್ಟಿ, ಸಾಧನಗಳನ್ನು ನಿರ್ಮಿಸುವುದು ಕನಸಿನ ಮಾತಾಗಿರುವಂತೆ , ಸಿದ್ಧಾಂತವೊಂದು ಮೊದಲು ತೀವ್ರ ವಿರೋಧಕ್ಕೆ ತುತ್ತಾಗಿ ಕ್ರಮೇಣ ಮನ್ನಣೆ ಗಳಿಸುವುದೂ ಸಹ ಇಪ್ಪತ್ತನೇ ಶತಮಾನದ ವೈಜ್ಞಾನಿಕ ರಂಗದಲ್ಲಿ ಅನೂಹ್ಯ ಸಂಗತಿ .ಇವೆರಡೂ ಅನನ್ಯಗಳ ಆಕರವೇ ಮಿಷೆಲ್, ಕೇಂಬ್ರಿಜ್‍ನಲ್ಲಿ ಶಿಕ್ಷಣ ಪಡೆದು, ಎಡಿನ್ ಬರೋದಲ್ಲಿ ಜೀವರಾಸಾಯನಿಕ ಶಾಸ್ತ್ರದ ಬೋಧಕನಾಗಿ ನಂತರ, 1963ರಲ್ಲಿ ಬಾಡ್‍ಮಿನ್‍ನಲ್ಲಿರುವ ಪಾಳು ಗಾಜಿನ ಮನೆ ಖರೀದಿಸಿ ಪ್ರಯೋಗಾಲಯ ನಿರ್ಮಿಸಿದನು, ಇಲ್ಲಿ ಜೆನ್ನಿ¥sóÀರ್ ಮೊಯ್‍ಲಿಯ ನೆರವಿನಿಂದ ಪ್ರಾಣಿಗಳ ಮೈಥೋಕಾಂಡ್ರಿಯಾ ಹಾಗೂ ಸಸ್ಯಗಳ ಕೋಶದಲ್ಲಿರುವ ಕ್ಲೋರೋಪ್ಲಾಸ್ಟ್’ಗಳಲಿ ಚೈತನ್ಯ ಉತ್ಪನ್ನವಾಗಿ, ಹಂಚಿಕೆಯಾಗುವುದನ್ನು ವಿವರಿಸಿದನು. ಇದು ಬಹು ಟೀಕೆಗೆ ತುತ್ತಾಯಿತು. ಇದಾದ ಒಂದು ದಶಕದ ನಂತರ ಇದು ಸಾರ್ವತ್ರಿಕ ಮನ್ನಣೆ ಗಳಿಸಿತು. ಇದಕ್ಕಾಗಿ ಮಿಷೆಲ್ 1978ರ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/24/2019