ಬಾಲ್ಟಿಮೋರ್, ಡೇವಿಡ್ (1938--) ೧೯೭೫
ಅಸಂಸಂ-ಅಣ್ವಯಿಕ ಜೀವಶಾಸ್ತ್ರ ( Molecular Biology)
ಮನಶಾಸ್ತ್ರಜ್ಞೆಯಾಗಿದ್ದ ತಾಯಿಯಿಂದ ಬಾಲಕನಾಗಿದ್ದಾಗಲೇ ಪ್ರೇರಿತನಾದ ಡೇವಿಡ್ ಅಂಗರಚನಾಶಾಸ್ತ್ರದಲ್ಲಿ ಅನನ್ಯ ಆಸಕ್ತಿ ತಳೆದಿದ್ದನು. ಆದರೂ ಡೇವಿಡ್ ಮೊದಲಿಗೆ ಸ್ಮಾರ್ತ್‍ಮೋರ್‍ನಲ್ಲೂ, ನಂತರ ಎಂಐಟಿ ಹಾಗೂ ಅಂತಿಮವಾಗಿ ರಾಕ್‍ಫೆಲರ್ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರವನ್ನು ಅಭ್ಯಸಿಸಿದನು. ನಂತರ ಡೇವಿಡ್ ವೈರಸ್ ಕುರಿತಾದ ಅಧ್ಯಯನದತ್ತ ಮುಖಮಾಡಿದನು. 1972ರಲ್ಲಿ ಎಮ್‍ಐಟಿಯಲ್ಲಿ ಪ್ರಾಧ್ಯಾಪಕನಾಗಿ ಆನಂತರ ಕೇಂಬ್ರಿಜ್ ವೈಟ್ ಹೆಡ್ ಸಂಸ್ಥೆಯ ನಿರ್ದೇಶಕನಾಗಿ ಸೇವೆ ಸಲ್ಲಿಸಿದನು. 1968ರಲ್ಲಿ ಡೇವಿಡ್ ಪೊಲಿಯೋ ವೈರಸ್ ಹೇಗೆ ಮರುಪ್ರತಿಗೊಳ್ಳುವುದೆಂದು ತೋರಿಸಿದನಲ್ಲದೆ, ಈ ವೈರಸ್‍ನ ಅರ್‍ಎನ್‍ಎ. ಹಾಗೂ ಪ್ರೋಟೀನ್ ಕವಚ ರೂಪಗೊಂಡಿರುವ ಬಗೆಯನ್ನು ಅಂಶಿಕವಾಗಿ ವಿವರಿಸಿದನು. ಡೇವಿಡ್ 1970ರಲ್ಲಿ ಅಣ್ವಯಿಕ ಜೀವ ಶಾಸ್ತ್ರಕ್ಕೆ ‘ಕೇಂದ್ರತತ್ತ್ವ’ ವಾಗುವಂತಹ ಸಂಶೋಧನೆಯನ್ನು ಹೊರಗೆಡಹಿದನು. ಡೇವಿಡ್ ಈ ಸಂಶೋಧನೆಯ ತಿರಳಿನಂತೆ ಅರ್.ಎನ್.ಎ.-ಡಿಎನ್‍ಎ ಆಗಿ ಪ್ರತಿರೂಪೀಕರಣವಾಗುತ್ತದೆ (Transcription).. ಕಿಣ್ವಗಳಲ್ಲಿ ಇದು ಜರುಗುತ್ತದೆ. ಈ ಸಂಶೋಧೆನೆಗೆ ಮೊದಲು ಅರ್‍ಎನ್‍ಎ ಡಿಎನ್‍ಎ ಆಗಿ ಪರಿವರ್ತನೆಯಾಗುವ ಸಾಧ್ಯೆತೆ0iÉುೀ ಇಲ್ಲವೆಂದು ಭಾವಿಸಲಾಗಿದ್ದಿತು. ಡೇವಿಡ್‍ನ ಈ ಸಂಶೋಧನೆಯ ಮೇಲೆ ಕ್ರಿಕ್ ನಡೆಸಿದ ವಿಸ್ತೃತ ಪ್ರಯೋಗಗಳಿಂದ ಡಿಎನ್‍ಎ. ಅರ್‍ಎನ್‍ಎ ,ಪೆÇ್ರೀಟಿನ್ ಎನ್ನುವ ಹೂಟ (Scheme) ಸ್ಪಷ್ಟವಾಯಿತು. ಡಿಎನ್‍ಎ, ಅರ್‍ಎನ್‍ಎ ಆಗಿ ಪರಿವರ್ತನೆ ಆದರೆ, ಡಿಎನ್‍ಎ ಪ್ರೊಟೀನ್ ಆಗುವುದಾಗಿ ಖಚಿತಗೊಂಡಿತು. ಎಚ್.ಎಂ.ಟೆಮಿನ್ ಇದೇ ಕಿಣ್ವದ ಈ ಪರಿವರ್ತನೆಯನ್ನು ಸ್ವತಂತ್ರವಾಗಿ ಸಂಶೋಧಿಸಿದ್ದನು. ಆದ್ದರಿಂದ 1975ರಲ್ಲಿ ಡೇವಿಡ್ ಹಾಗೂ ಟೆಮಿನ್‍ಗೆ ಹಂಚಿದಂತೆ ನೊಬೆಲ್ ಪುರಸ್ಕಾರ ದಕ್ಕಿತು. 1990ರಲ್ಲಿ ಡೇವಿಡ್ ರಾಕ್ಫೆಲರ್ ವಿಶ್ವವಿದ್ಯಾಲಯದ ಅಧ್ಯಕ್ಷವಾಗಿ, ಸಂಶೋಧನೆ , ಅನುದಾನ ಅರ್ಜನೆಗಳಲ್ಲಿ ತೊಡಗಿಸಿಕೊಂಡನು. ಡೇವಿಡ್ ಸಹ ಸಂಶೋಧಕನೊಬ್ಬನು 1986ರಲ್ಲಿ ಲೇಖನವೊಂದನ್ನು ಬರೆದು ‘ಸೆಲ್’ ಪತ್ರಿಕೆಯಲ್ಲಿ ಪ್ರಕಟಿಸಿದ್ದನು. ‘ನ್ಯಾಷನಲ್ ಇನ್ಸ್ಟಿಟೂಟ್ ಆಫ್ ಹೆಲ್ತ್’ನವರು 1990ರಲ್ಲಿ ಹೊರಡಿಸಿದ ವರದಿಯೊಂದರಲ್ಲಿ ಡೇವಿಡ್‍ನ ಸಹಸಂಶೋಧಕ ‘ಸೆಲ್’ನಲ್ಲಿ ಪ್ರಕಟಿಸಿದ ಲೇಖನಗಳಲ್ಲಿ ‘ಹುಸಿ ಹಾಗೂ ಹೆಣೆದ ದತ್ತಾಂಶಗಳನ್ನು ಬಳಸಿದ್ದನೆಂದು ಆಪಾದಿಸಲಾಗಿದ್ದಿತು. ಆಗ ಡೇವಿಡ್ ತನ್ನ ಸºಸಂಶೋಧಕನ ರಕ್ಷಣೆಗೆ ನಿಂತನು. ಆದರೆ ಕೆಲದಿನಗಳಲ್ಲೇ ತಾನು ಆರೋಪಿಯ ಪರ ಸೇರಿರುವ ಅಂಶ ಮನದಟ್ಟಾಗಿ ಡೇವಿಡ್ ಕ್ಷಮೆ ಯಾಚಿಸಬೇಕಾಯಿತಲ್ಲದೆ’ ಸಂಶೋಧನೆಯಲ್ಲಿ ವಿಜ್ಞಾನಿಯ, ನೈತಿಕತೆಯ ಪಾತ್ರ’ ಏನಿರಬೇಕೆಂಬ ಮಹತ್ತಾದ ಪ್ರಶ್ನೆಗೆ ಉತ್ತರವೀಯಬೇಕಾಯಿತು. ಇವೆಲ್ಲ ಒತ್ತಡಗಳ ಹಿನ್ನೆಲೆಯಲ್ಲಿ ಡೇವಿಡ್ 1991ರಲ್ಲಿ ಅಧ್ಯಕ್ಷ ಪದವಿಗೆ ರಾಜಿನಾಮೆ ನೀಡಿದನಾದರೂ ತನ್ನ ಸಂಶೋಧನೆಯನ್ನು ಮುಂದುವರೆಸಿದನು. ಅಸಂಸಂದ ಗುಪ್ತಚಾರ ದಳ ಹುಸಿ ಹಾಗೂ ಹೆಣೆದ ದತ್ತಾಂಶಗಳನ್ನೊಳಗೊಂಡ ಲೇಖನ, ವಿಜ್ಞಾನಿ ತಂಡ, ಸಂಸ್ಥಾನಗಳ ಮೇಲೆ ತನಿಖೆ ನಡೆಸಿತಾದರೂ, ವಿಷಯ ವೈಜ್ಞಾನಿಕವೂ, ಜಟಿಲವೂ, ಆದುದಎಂದ ತಪ್ಪಿಸ್ಥರು ಇವರೇ ತಪ್ಪು ಮಾಡಿದ್ದು ಹೀಗೆ ಮಾಡಿದ್ದು ಎಂದು ಪುರಾವೆ ಒದಗಿಸುವಲ್ಲಿ ವಿಫಲವಾಯಿತು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/3/2020