ಬರೂಜ್, ಬೆನಸೆರಾಫ್ –(1920--) ೧೯೮೦
ವೆನೆಜುಯೆಲಾ-ವೈದ್ಯಕೀಯ- ರೋಗರೋಧತ್ವದ (Immunology) ಅಧ್ಯಯನದ ಮುಂದಾಳು.
ಬರೂಜ್‍ನ ಪೂರ್ವಿಕರು ಸ್ಪೇನ್‍ನ ಯಹೂದಿಗಳಾಗಿದ್ದು, ವೆನೆಜುಯೆಲಾದ ಕ್ಯಾರಕಾಸ್‍ನಲ್ಲಿ ನೆಲೆಸಿದ್ದರು. ಬರೂಜ್ ಐದು ವರ್ಷದವನಿರುವಾಗ ಬಟ್ಟೆ ವ್ಯಾಪಾರಿಯಾಗಿದ್ದ ಬರೂಜ್‍ನ ತಂದೆ ಉತ್ತಮ ವ್ಯಾಪಾರದ ಹುಡುಕಾಟದಲ್ಲಿ ಪ್ಯಾರಿಸ್‍ಗೆ ಬಂದು ನೆಲೆಸಿದನು. ಇಲ್ಲಿ ಆತನ ವ್ಯಾಪಾರ ಚೆನ್ನಾಗಿ ಅಭಿವೃದ್ಧಿ ಹೊಂದಿತು. ಬರೂಜ್‍ನ ವಿದ್ಯಾಭ್ಯಾಸ ಫ್ರೆಂಚ್‍ನಲ್ಲಿ ಜರುಗಿತು. ತಮ್ಮ ಮಗ ಅಸಂಸಂದಲ್ಲಿ ವಿದ್ಯಾಭ್ಯಾಸ ಹೊಂದ ಬೇಕೆಂಬ ಮಹತ್ವಾಕಾಂಕ್ಷೆ ಬರೂಜ್ ತಂದೆಗಿದ್ದಿತು. ಇದಕ್ಕಾಗಿ 1940ರಲ್ಲಿ ಈ ಕುಟುಂಬ ಅಸಂಸಂಗಳಿಗೆ ವಲಸೆ ಹೋಯಿತು. ಬರೂಜ್ 1942ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನದ ಪದವಿ ಗಳಿಸಿದನು. ಇದಾದ ನಂತರ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಯತ್ನಿಸಿದನು. 1942ರ ಕಾಲದಲ್ಲಿ ಅತ್ಯುತ್ತಮ ಶೈಕ್ಷಣಿಕ ಹಿನ್ನಲೆಯಿದ್ದರೂ, ಯಹೂದಿ ಜನಾಂಗದ ವಲಸೆ ಬಂದ ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಗಿಟ್ಟಿಸುವುದು ಬಹು ಕಠಿಣವಾಗಿದ್ದಿತು. ಹಲವಾರು ಪ್ರಯತ್ನಗಳ ನಂತರ ತನ್ನ ತಂದೆಯ ಸ್ನೇಹಿತನೂ, ರಿಜ್ ಮಾಂಡ್‍ನಲ್ಲಿರುವ ವರ್ಜೀನಿಯಾ ವೈದ್ಯಕೀಯ ಕಾಲೇಜಿನ ಅಧ್ಯಕ್ಷನ ಸಹಾಯಕನೂ ಆಗಿದ್ದ ಜಾಜ್ ಡಬ್ಲ್ಯೂ ಬೇಕ್‍ಮನ್ ನೆರವಿನಿಂದ 1942ರಲ್ಲಿ ಬರೂಜ್‍ಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದಕ್ಕಿತು. ವಿದ್ಯಾರ್ಥಿಯಾಗಿರುವಾಗಲೇ ಬರೂಜ್ ಅಸಂಸಂದ ಸೇನೆಗೆ ನಿಯೋಜಿತನಾದನು. 1945ರಲ್ಲಿ ನ್ಯೂಯಾರ್ಕ್ ನಗರದ ಕ್ವೀನ್ಸ್ ಜನರಲ್ ಆಸ್ಪತ್ರೆಯಲ್ಲಿ ತರಬೇತಿ ಹೊಂದಿ, 1946ರಲ್ಲಿ ಅಸಂಸಂದ ಸೇನೆಯ ವೈದ್ಯ ವಿಭಾಗದ ¥sóÀಸ್ಟ್ ಲೆಫಿû್ಟನೆಂಟ್ ಆದನು. ಇಲ್ಲಿಂದ ಜರ್ಮನಿಗೆ ವರ್ಗಾವಣೆಯಾದ ಬರೂಜ್ 1947ರಲ್ಲಿ ಸೇನೆಯಿಂದ ಸೇವಾ ಬಿಡುಗಡೆ ಹೊಂದಿ ಕೊಲಂಬಿಯಾ ಯೂನಿರ್ವಸಿಟಿ ಸ್ಕೂಲ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್‍ನಲ್ಲಿ ಎಲ್ವಿನ್ ಕಬರ್ಟ್ ಆಧೀನದಲ್ಲಿ ಸಂಶೋಧನಾ ಜೀವನ ಪ್ರಾರಂಭಿಸಿದನು. ಇಲ್ಲಿ ರೋಗರೋಧ ರಸಾಯನಶಾಸ್ತ್ರದಲ್ಲಿ ಪರಿಶ್ರಮ ಹೊಂದಿದನು. 1949ರಲ್ಲಿ ಪ್ಯಾರಿಸ್‍ನ ಬರ್ನಾರ್ಡ್ ಹಾಲ್ವೆನ್ರ್ಸ್ ಪ್ರಯೋಗಾಲಯಕ್ಕೆ ಬರೂಜ್ ಸೇರಿದನು. ಇಲ್ಲಿ ತನ್ನದೇ ಆದ ಸ್ವಂತ ಪ್ರಯೋಗಾಲಯ ಹೊಂದಬೇಕೆಂದಿದ್ದ ಬರೂಜ್‍ನ ಆಸೆ ಕೈಗೂಡಲಿಲ್ಲ. ಆದ್ದರಿಂದ ನ್ಯೂಯಾರ್ಕ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯಲ್ಲಿ ರೋಗಕಾರಣಶಾಸ್ತ್ರ ವಿಭಾಗದ ಪ್ರಾಧ್ಯಾಪಕನಾದನು. ಇಲ್ಲಿ ಬರೂಜ್ ನಾನಾ ಬಗೆಯ ರೋಗ ರೋಧತ್ವ, ಒಗ್ಗದಿಕೆಗಳ (ಂಟಟeಡಿgಥಿ) ಬಗೆಗೆ ತೀವ್ರ ಸಂಶೋಧನೆ ಕೈಗೊಂಡನು. ಇಲ್ಲಿರುವಾಗ ಪ್ರಾಣಿಗಳಲ್ಲಿನ ರೋಗರೋಧತ್ವದ ಉಗಮದ ಅಧ್ಯಯನಕ್ಕೆ ಅಡಿಗಟ್ಟನ್ನು ನಿರ್ಮಿಸಿದನು. ಇದಕ್ಕಾಗಿ 1980ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019