ಬರೂಖ್ ,ಎಸ್ ಬ್ಲಂಬರ್ಗ್ (1925--) ೧೯೭೬
ಅಸಂಸಂ-ವೈದ್ಯಕೀಯ-ಹೆಪಟೈಟಿಸ್-ಬಿ ಪ್ರತಿಜನಕವನ್ನು ಅನಾವರಣಗೊಳಿಸಿದಾತ.
ಯುರೋಪಿನ ಯಹೂದಿ ಮೂಲದ ಹತ್ತೊಂಬತ್ತನೇ ಶತಮಾನದಲ್ಲಿ ಅಸಂಸಂಗಳಿಗೆ ವಲಸೆ ¨ಂದಿದ್ದ ಕುಟುಂಬದಲ್ಲಿ ಬ್ಲಂಬರ್ಗ್ ಜನಿಸಿದನು. ಪ್ರಾಥಮಿಕ ಶಾಲೆಯಲ್ಲಿರುವಾಗಲೇ ತನ್ನ ಮಾತೃ ಭಾಷೆಯಾದ ಹೀಬ್ರೂವಿನಲ್ಲೇ ಹೊಸ ಒಡಂಬಡಿಕೆಯನ್ನು ಮೂಲದಲ್ಲಿಯೇ ಓದಿದನು. 1943ರಲ್ಲಿ ಅಸಂಸಂ ನೌಕಾಪಡೆ ಸೇರಿದನು. 1947ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದ ಕಾಲೇಜ್ ಆ¥sóï ಫಿಜಿಷಿಯನ್ ಅಂಡ್ ಸರ್ಜನ್ಸ್ ಸೇರಿ ವೈದ್ಯಕೀಯ ಶಿಕ್ಷಣ ಪಡೆದನು. ಪದವಿಯ ಮೂರು ಹಾಗೂ ಅಂತಿಮ ನಾಲ್ಕನೇ ವರ್ಷದಲ್ಲಿ, ಪರೋಪಜೀವಿಶಾಸ್ತ್ರಜ್ಞನಾಗಿದ್ದ ಹೆರಾಲ್ಡ್ ಬ್ರಾನ್, ಬ್ಲಂಬರ್ಗ್ ಹಾಗೂ ಇತರ ವೈದ್ಯಕೀಯ ವಿದ್ಯಾರ್ಥಿಗಳನ್ನು ಕ್ಷೇತ್ರಾಧ್ಯಯನಕ್ಕಾಗಿ ಸುರಿನಾಂಗೆ ನಿಯೋಜಿಸಿದನು. ಸುರಿನಾಂನಲ್ಲಿ ನದಿಯ ಮೂಲಕ ಮಾತ್ರ ಪ್ರವೇಶವಿರುವ ಗಣಿಗಾರಿಕೆಯಿಂದ ಕ್ರಿಯಾಶೀಲವಾಗಿದ್ದ ಮೊಯಂಗೋ ಪಟ್ಟಣಕ್ಕೆ ಬ್ಲಂಬರ್ಗ್ ಹಾಗೂ ಸ್ನೇಹಿತರನ್ನು ನಿಯೋಜಿಸಲಾಯಿತು,. ಇಲ್ಲಿ ಗಣಿಗಳಲ್ಲಿ ಕೆಲಸ ಮಾಡಲು ಜಗತ್ತಿನ ನಾನಾ ಭಾಗಗಳಿಂದ ಕೂಲಿ ಕಾರ್ಮಿಕರನ್ನು ತರಲಾಗಿದ್ದಿತು. ಭಾರತ, ಬ್ರೆಜಿಲ್, ಚೀನ, ಆಫ್ರಿಕಾ ಜಪಾನ್, ಯಹೂದಿ, ಯುರೋಪ್ ಮೂಲದ ಕೂಲಿ ಕಾರ್ಮಿಕರಿಂದ ಈ ಪಟ್ಟಣ ಗಿಜಿಗುಡುತ್ತಿದ್ದಿತು. ಈ ವೈವಿಧ್ಯಮಯ ದೇಶ, ಜನಾಂಗಗಳ ಕಾರ್ಮಿಕರು ರೋಗಗಳಿಗೆ ತುತ್ತಾಗುತ್ತಿದ್ದ, ಪ್ರತಿಕ್ರಿಯಿಸುತ್ತಿದ್ದ ರೀತಿ ವೈಶಿಷ್ಟ್ಯಮಯವಾಗಿದ್ದವು. ಆನೆ ಕಾಲು ರೋಗಕ್ಕೆ ಈ ಜನರಲ್ಲಿನ ವೈವಿಧ್ಯಮಯ ರೋಗರೋಧತ್ವವನ್ನು (Immunity) ಕುರಿತು ಬ್ಲಂಬರ್ಗ್ ಲೇಖನ ಪ್ರಕಟಿಸಿದನು. ಮುಂದೆ ರೋಗನಿರೋಧತ್ವದಲ್ಲಿ ಅನುವಂಶಿಕತೆಯನ್ನು ಕುರಿತಾದ ಅಧ್ಯಯನಕ್ಕೆ ಇದು ಪ್ರೇರಣೆ ನೀಡಿತು. 1951ರಿಂದ 1953ರವರೆಗೆ ಲೋವರ್ ನ್ಯೂಯಾರ್ಕ್‍ನ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ಬ್ಲಂಬರ್ಗ್ ಕೆಲಸ ಮಾಡಿದನು. ಇಲ್ಲಿ ಬೇರೂರಿದ (Chronicle) ರೋಗಗಳಿಗೆ ತುತ್ತಾದ, ದುರ್ಬಲ ವರ್ಗದವರ ಬದುಕು ಬವಣೆ ಕಂಡು ವೈದ್ಯಕೀಯ ಸಂಶೋಧನೆ ಮತ್ತು ಸೇವೆಯ ಮಹತ್ವ ಅರಿತನು. 1957ರಲ್ಲಿ ಆಫ್ರಿಕಾ ಖಂಡದ ನೈಜೀರಿಯಾಕ್ಕೆ ಸಂಶೋಧನಾಕಾಂಕ್ಷಿಯಾಗಿ ಬ್ಲಂಬರ್ಗ್ ಹೋದನು. ಆಕ್ಸ್¥sóÀರ್ಡ್ ವಿಶ್ವವಿದ್ಯಾಲಯದಿಂದ ಬಂದಿದ್ದ ಆಂಥೋನಿ.ಸಿ.ಆಲಿಸನ್ ಬಹುರೂಪಾಂತರತೆ (Polymorphism) ತತ್ತ್ವವನ್ನು ವಿವರಿಸಿದನು. ಇದನ್ನು ಸಂಪೂರ್ಣವಾಗಿ ಅರಿಯಲು ಬ್ಲಂಬರ್ಗ್ ನೈಜೀರಿಯಾದಲ್ಲಿ ಹಲವಾರು ಬುಡಕಟ್ಟುಗಳ, ಸಾಕು ಪ್ರಾಣಿಗಳ ರಕ್ತದ ರಸಿಕೆ (Serum) ಸಂಗ್ರಹಿಸಿದನು. ರಕ್ತದ ಹಿಮೋಗ್ಲೋಬಿನ್ ಮತ್ತು ಹಾಲಿನ ರಸಿಕ ಪೆÇ್ರೀಟೀನ್‍ಗಳ ಬಹುರೂಪಾಂತರತೆ ಬಗೆಗೆ ಅಧ್ಯಯನ ನಡೆಸಿದನು. ಇದರ ಫಲವಾಗಿ ಹಲವಾರು ಹೊಸ ಬಹುರೂಪಾಂತರತೆಯ ಸಾಧ್ಯತೆಗಳೂ, ಹೆಪಟೈಟಿಸ್-ಬಿ ವೈರಸ್ ಅಸ್ತಿತ್ವವು ತಿಳಿದು ಬಂದವು. ಮುಂದೆ ಥಾಮಸ್ ಲಂಡನ್ ಸಹಯೋಗದಲ್ಲಿ ಬ್ಲಂಬರ್ಗ್ ಹೆಪಟೈಟಿಸ್-ಬಿಗೆ ಪ್ರತಿಜನಕವನ್ನು (Antigen) ಕಂಡು ಹಿಡಿದನು. ಈ ಸಾಧನೆಗಳಿಗಾಗಿ ಬ್ಲಂಬರ್ಗ್ 1976ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 8/29/2019