ಆಲ್ವರ್ಟ್, ಕ್ಲೌಡ್ –(1899--) ೧೯೭೪
ಬೆಲ್ಜಿಯಂ-ವೈದ್ಯಕೀಯ-ಕ್ಯಾನ್ಸರ್ ಕುರಿತಾಗಿ ಆಳ ಸಂಶೋಧನೆ ನಡೆಸಿದಾತ.
ಆಲ್ಪ್ಸ್ ಪರ್ವತ ಶ್ರೇಣಿಯ ತಪ್ಪಲಿನ ಲಾಂಗಲಿಯರ್ ಹಳ್ಳಿಯಲ್ಲಿ ಆಲ್ಬರ್ಟ್‍ನ ಜನನವಾಯಿತು. ಇದು ¥sóÁ್ರನ್ಸ್ ಮತ್ತು ಕೆರೋಲೇಜಿಮನ್ ದೊರೆಗಳ ಅಳ್ವಿಕೆಗೆ ಒಳಪಟ್ಟು ಕೋಟೆಯಿಂದ ಸುತ್ತುವರಿದಿತ್ತು. ಈ ಪಟ್ಟಣ ಬಹು ವಿರಳ ಜನವಸತಿ ಹೊಂದಿದ್ದಿತು. ಒಟ್ಟು 40 ಜನ ವಿದ್ಯಾರ್ಥಿಗಳಿದ್ದ ಒಂಟಿ ಕೊಠಡಿಯ ಶಾಲೆಯಲ್ಲಿ ಪ್ರಾಥಮಿಕ ಕ್ಲೌಡ್‍ನ ಶಿಕ್ಷಣ ಜರುಗಿತು. ಇಲ್ಲಿ ಎಲ್ಲಾ ವಿಷಯಗಳಿಗೂ , ಎಲ್ಲಾ ತರಗತಿಗಳಿಗೂ ಒಂದಿಬ್ಬರು ಶಿಕ್ಷಕರಿದ್ದರು. ಈ ಹಳ್ಳಿಯಲ್ಲಿ ರಸ್ತೆ, ನೀರು, ವಿದ್ಯುತ್‍ನಂತಹ ಯಾವ ಆಧುನಿಕ ನಾಗರಿಕ ಸೌಲಭ್ಯಗಳೂ ಲಭ್ಯವಿರಲಿಲ್ಲ. ಮೊದಲ ಜಾಗತಿಕ ಯುದ್ದದ ಸಮಯದಲ್ಲಿ ತೀರಾ ಕಗ್ಗತ್ತಲಿನ ರಾತ್ರಿಗಳಲ್ಲಿ ಆಗಾಧವಾದ ಅಮವಾಸ್ಯೆಯ ಆಕಾಶವನ್ನು ದಿಟ್ಟಿಸುತ್ತಾ ಆಲ್ಬರ್ಟ್‍ನ ಹರಯ ಪ್ರಾರಂಭವಾಯಿತು. ಆಲ್ಬರ್ಟ್ ಜನಿಸಿದಾಗ ಆತನ ತಂದೆಗೆ 43 ವರ್ಷ, ತಾಯಿ 45 ವರ್ಷದವರಾಗಿದ್ದರು. ಆಲ್ಬರ್ಟ್ ಏಳು ವರ್ಷದವನಿರುವಾಗ ತಾಯಿಯನ್ನು ಕಳೆದುಕೊಂಡನು. ಈತನ ಹಿರಿಯ ಸಹೋದರರು ಆಗ ಪ್ರಾಢಾಶಾಲಾ ಮಟ್ಟದಲ್ಲಿದ್ದರು. ಇವರು ಪಕ್ಕದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದು ಆಲ್ಬರ್ಡ್ ಸಣ್ಣವನೆಂದು ಹಳ್ಳಿಯಲ್ಲೇ ಇರುತ್ತಿದ್ದನು. ಆರ್ಥಿಕ ಸಂಕಷ್ಟದಿಂದ ಪಾರಾಗಲು ಆಲ್ಬರ್ಟ್ ಕುಟುಂಬ ¥sóÁ್ರನ್ಸ್‍ನ ಗಡಿಯಲ್ಲಿದ್ದ ಉಕ್ಕಿನ ಕಾರ್ಖಾನೆ ಹೊಂದಿದ ಅಥಸ್‍ಗೆ ವಲಸೆ ಹೋಯಿತು. ಇಲ್ಲಿ ಅಣ್ಣಂದಿರು ಓದುತ್ತಿದ್ದ ವಿಜ್ಞಾನದ ಪುಸ್ತಕದಲ್ಲಿನ ಸರಳ ಚಿತ್ರಗಳನ್ನು ನೋಡಿ, ಅವುಗಳನ್ನು ಕುರಿತಾಗಿ ಆಲ್ಬರ್ಟ್ ತನ್ನದೇ ಆದ ಭಾವ ಪ್ರಪಂಚವನ್ನು ವಿಜ್ಞಾನದ ಬಗೆಗೆ ಸೃಜಿಸಿಕೊಂಡನು. ಆಲ್ಬರ್ಟ್ ಹದಿಮೂರನೇ ವಯಸ್ಸಿನಲ್ಲಿ ಮಿದುಳಿನಲ್ಲಿ ಹುಣ್ಣಾಗಿ ಪಾಶ್ರ್ವವಾಯುವಿಗೆ ತುತ್ತಾಗಿದ್ದ ಚಿಕ್ಕಪ್ಪನ ಸಹಾಯಕ್ಕಾಗಿ ಲಾಂಗ್‍ಲಿಯರ್‍ಗೆ ಮರಳಿದನು. ಈತನಿಗೆ ಚಿಕಿತ್ಸೆ ನೀಡಲು ಬರುತ್ತಿದ್ದ ವೈದ್ಯನೊಂದಿಗೆ ಆಗಾಗ್ಗೆ ನಡೆಸುತ್ತಿದ್ದ ಸಂವಾದಗಳಿಂದ ಜೀವಶಾಸ್ತ್ರದ ಬಗೆಗೆ ಕುತೂಹಲ ಮೂಡಿತು. ಮುಂದೆ ಯೂನಿವರ್ಸಿಟಿ ಡೆ ಲೀಗ್ ನಿಂದ 1928ರಲ್ಲಿ ಆಲ್ಬರ್ಟ್ ವೈದ್ಯಕೀಯ ಪದವಿ ಗಳಿಸಿದನು. 1928-29ರಲ್ಲಿ ಬರ್ಲಿನ್‍ನ ಕ್ರೆಬ್ಸ್‍ಪೆÇೀರ್ಷಿಂಗ್ ಸಂಸ್ಥೆ ಹಾಗೂ ರಹ್ಲೆಮ್‍ನ ಕೈಸೆರ್ ವಿಲ್ ಹೆಲ್ಮ್ ಸಂಸ್ಥೆಯಲ್ಲಿ ಆಲ್ಬರ್ಟ್ ಫಿûಷರ್ ಕೆಳಗೆ ಅಂಗಾಂಶ ಕಸಿ ಕಲಿತನು . 1929ರಲ್ಲಿ ರಾಕ್ ಫೆಲರ್ ಸಂಸ್ಥೆ ಸೇರಿದನು ಇದು ಈಗ ರಾಕ್ಫೆಲರ್ ವಿಶ್ವವಿದ್ಯಾಲಯವೆಂದು ಹೆಸರಾಗಿದೆ. ಇಲ್ಲಿ ಕ್ಲೌಡ್ ಕ್ಯಾನ್ಸರ್ ಹಾಗೂ ಜೀವಕೋಶ ಮಟ್ಟದ ಸಂಶೋಧನೆಗಳನ್ನು ನಡೆಸಿದನು. ಕ್ಲೌಡ್ ಬೆಲ್ಜಿಯಂನ ಜೂಲ್ಸ್ ಬಾರ್ಡೆಟ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ನಿರ್ದೇಶಕನಾಗಿ ಸೇವೆ ಸಲ್ಲಿಸಿದನು. ಬೆಲ್ಜಿಯಂನ ಲೌವೇನ್-ಲಾ-ನ್ಯುವೆಯ ಕ್ಯಾಥೊಲಿಕ್ ಡೆ ಲೌವೇನ್ ವಿಶ್ವವಿದ್ಯಾಲಯದ ‘ಲ್ಯಾಬೋರೇಟರಿ ಡೆ ಬಯೋಲಜಿ ಸೆಲ್ಲ್ಯುಲೇರ್ ಎಟ್ ಕ್ಯಾನ್ಸರೋಲಜಿ’ ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆಗಳಿಗಾಗಿ ಕ್ಲೌಡ್ 1975ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಕ್ಲೌಡ್ 22 ಮೇ 1983ರಲ್ಲಿ ಮೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/24/2020