ಅ್ಯಂಡ್ರೂ ,ವಿ. ಷ್ಕಾಲಿ (1926--) ೧೯೭೭
ಪೋಲೆಂಡ್-ವೈದ್ಯಕೀಯ-ಮೆದುಳಿನಲ್ಲಿ ಪೆಪ್ಟೈಡ್ ಚೋದನಿಕೆಯ ಉತ್ಪನ್ನವನ್ನು ಅನಾವರಣಗೊಳಿಸಿದಾತ
ಆ್ಯಂಡ್ರೂನ ತಂದೆ ಸೈನಿಕನಾಗಿದ್ದು ಹಲವಾರು ಯುದ್ದಗಳಲ್ಲಿ ಭಾಗವಹಿಸಿದ್ದನು 30 ನವೆಂಬರ್ 1926ರಲ್ಲಿ ಆ್ಯಂಡ್ರೂನ ಜನನವಾಯಿತು. ಎರಡನೇ ಜಾಗತಿಕ ಯುದ್ದದಲ್ಲಿ ಪೆÇೀಲೆಂಡ್ ಹಿಟ್ಲರ್‍ನ ವಶವಾದಾಗ, ಬಾಲಕನಾಗಿದ್ದ ಅ್ಯಂಡ್ರೂ ಯಹೂದಿಗಳ ಭಾರಿ ಮಾರಣ ಹೋಮವನ್ನು ಕೇಳಿ, ಕಂಡು ನಡುಗಿದನು. ಯುದ್ದದ ನಂತರ ಇಟಲಿ, ಫ್ರಾನ್ಸ್ ಇಂಗ್ಲೆಂಡ್ ಮೂಲಕ ಸ್ಕಾಟ್‍ಲ್ಯಾಂಡ್‍ಗೆ ಹೋಗಿ ನೆಲೆಸಿದನು. 1949ರಲ್ಲಿ ಲಂಡನ್‍ನಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಸೇರಿದನು. ಇಲ್ಲಿ ಹಲವಾರು ಜನ ಖ್ಯಾತ ಹಾಗೂ ನೊಬೆಲ್ ಪ್ರಶಸ್ತಿ ವಿಜೇತರ ಕೆಳಗೆ ಕೆಲಸ ಮಾಡುವ ಅವಕಾಶ ದಕ್ಕಿತು. 1952ರಲ್ಲಿ ಕೆನಡಾದ ಮಾಂಟ್ರಿಯೆಲ್‍ನ ಮೆಕ್‍ಗಿಲ್ ವಿಶ್ವವಿದ್ಯಾಲಯದಲ್ಲಿ ಆಡ್ರೆನಲ್ ಜೋದನಿಕೆಯ ಪರಿಣಾಮಗಳ ಅಧ್ಯಯನ ಸಾಗಿಸಿದನು. ಈ ಮೂಲಕವಾಗಿ ಮೆದುಳಿನ ಕ್ರಿಯಾಶೀಲತೆ ಹಾಗೂ ಅಂತಸ್ರಾವಿ ಚೋದನಿಕೆಗಳ ಬಗೆಗೆ ಆಸಕ್ತಿ ಮೂಡಿತು. ಈ.ಡಬ್ಲ್ಯೂ.ಹ್ಯಾರಿಸ್ ಪಿಟ್ಯುಟರಿ ಗ್ರಂಥಿಯ ಕ್ರಿಯೆಯನ್ನು ನಿಯಂತ್ರಿಸುವ ಹೈಪೆರ್ಧ್ಯಲಾಮಿಕ್ ಚೋದನಿಕೆಗಳನ್ನು(Hormone) ಕುರಿತಾಗಿ ಮುನ್ನುಡಿದಿದ್ದನು. 1955ರಲ್ಲಿ ಆ್ಯಂಡ್ರ್ಯೂ ಎಂ.ಸಫಾನ್ ಸಹಯೋಗದಲ್ಲಿ ಪ್ರಯೋಗಗಳಿಂದ ಇದು ನಿಜವೆಂದು ತೋರಿಸಿದನು. 1962ರಲ್ಲಿ ಅಸಂಸಂಗಳಿಗೆ ಹೋಗಿ ಅಲ್ಲಿಯ ನಾಗರಿಕನಾದನು. ಇದೇ ವರ್ಷ ನ್ಯೂ ಆರ್ಲಿಯನ್ಸ್ ವಿ ಎ ಆಸ್ಪತ್ರೆಯ ಎಂಡೋಕ್ರೈನ್ ಹಾಗೂ ಪಾಲಿ ಪೆಪ್ಪೈಡ್ ಪ್ರಯೋಗಾಲಯದ ಮುಖ್ಯಸ್ಥನಾದನು. ಇಲ್ಲಿರುವಾಗ ಮಾನವನ ಪರಿಪೂರ್ಣ ವಿಕಸನಕ್ಕೆ ಜನಸಂಖ್ಯಾ ನಿಯಂತ್ರಣ ಅತ್ಯಗತ್ಯವೆಂದು ಅದಕ್ಕಾಗಿ ಜೀವ ವಿಜ್ಞಾನಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಅ್ಯಂಡ್ರ್ಯೂಗೆ ಭಾಸವಾಯಿತು. ಆದ್ದರಿಂದ ಈ ನಿಟ್ಟಿನಲ್ಲಿನ ಪ್ರಯತ್ನವಾಗಿ ಪ್ರಜನನ ಅಂತಸ್ರಾವಿಶಾಸ್ತ್ರ ಹಾಗೂ ಪ್ರಜನನಕ್ಕೆ ಸಂಬಂಧಿಸಿದಂತೆ ಮೆದುಳಿನ ಕ್ರಿಯಾಶೀಲತೆಯನ್ನು ಅರ್ಥೈಸಿಕೊಳ್ಳಲು ಯತ್ನಿಸಿದನು. ಜನನ ನಿಯಂತ್ರಣದಲ್ಲಿ ಸ್ಟೆರಾಯಿಡ್ ಹಾಗೂ ಕ್ಲೊಮಿಫಿûನ್‍ಗಳ ಪಾತ್ರವನ್ನು ಪರಿಶೀಲಿಸಿ ಸಂತಾನ ನಿಯಂತ್ರಣಕ್ಕೆ ಇದಕ್ಕಾಗಿ ಹೊಸ ವಿಧಾನಗಳ ಸಾಧ್ಯತೆಯನ್ನು ತೋರಿಸಿದನು. ಮೆದುಳಿನಲ್ಲಿ ಪೆಪ್ಟೈಡ್ ಚೋದನಿಕೆಯ ಉತ್ಪನ್ನವನ್ನು ಅನಾವರಣಗೊಳಿಸಿದ್ದಕ್ಕಾಗಿ ಆ್ಯಂಡ್ರ್ಯೂ 1977ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 6/20/2020