ಬೆಕೆಸಿ , ಜಾರ್ಜ್ ವಾನ್ (1899-1972) ೧೯೬೧
ಹಂಗರಿ-ಅಸಂಸಂ-ಭೌತಶಾಸ್ತ್ರಜ್ಞ-ಕಿವಿಯ ಕ್ರಿಯಾಶೀಲತೆಯನ್ನು ವಿವರಿಸಿದಾತ.
ಬೆಕೆಸಿ, 3 ಜೂನ್ 1899ರಲ್ಲಿ ಹಂಗರಿಯ ಬುಡಾವೆಸ್ಟ್‍ನಲ್ಲಿ ಜನಿಸಿದನು. ಹಂಗರಿ ವಿಶ್ವವಿದ್ಯಾಲಯದಿಂದ 1923ರಲ್ಲಿ ಡಾಕ್ಟರೇಟ್ ಗಳಿಸಿದನು. ಹಂಗರಿ ಸರ್ಕಾರದ ದೂರವಾಣಿ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥನಾಗಿ ವೃತ್ತಿ ಜೀವನ ಪ್ರಾರಂಭಿಸಿದನು. 1946ರ ವರೆಗೆ ಇದೇ ಹುದ್ದೆಯಲ್ಲಿದ್ದನು. ದೂರವಾಣಿ ಸಂಶೋಧನೆಯಲ್ಲಿದ್ದ ಬೆಕೆಸಿ, ಪ್ರಾಣಿಗಳ ಕಿವಿಗಳ ಶ್ರವಣ ಸಾಮಥ್ರ್ಯದ ಸೂಕ್ಷತೆ ವಿಸ್ತಾರಗಳ ಬಗೆಗೆ ಆತ್ಯಾಸಕ್ತನಾದನು. ಹೀಗಾಗಿ ಕಿವಿಯ ಅಧ್ಯಯನವನ್ನು ಗಂಭೀರವಾಗಿ ತೆಗೆದುಕೊಂಡನು. 1946ರಿಂದ 1947ರವರೆಗೆ ಸ್ವೀಡನ್‍ನ ಸ್ಟಾಕ್ ಹೋಂನಲ್ಲಿರುವ ಕುಂಗ್ಲಿಗ್ ಕ್ಯಾರೋಲಿನ್ ಸಂಸ್ಥೆಯಲ್ಲಿ ಸಂಶೋಧನೆ ಮುಂದುವರಿಸಿದನು. 1947ರಲ್ಲಿ ಅಸಂಸಂ ತೆರಳಿದ ಬೆಕೆಸಿ, ಹಾರ್ವರ್ಡ್ ವೈದ್ಯಕೀಯ ಸಂಸ್ಥೆಯಲ್ಲಿ ಕಿವಿಯನ್ನು ಕುರಿತಾದ ತನ್ನ ಸಂಶೋಧನೆಗಳನ್ನು ಮುಂದುವರೆಸಿದನು. ಇದಕ್ಕಾಗಿ ಕಿವಿಯನ್ನು ಹೋಲುವ ಕೃತಕ ಸಾಧನವೊಂದನ್ನು ನಿರ್ಮಿಸಿ ಕಿವಿಯ ಕ್ರಿಯಾ ವಿನ್ಯಾಸ ವಿವರಿಸಿದನು. ಶಬ್ದದ ತರಂಗಗಳು ಕಿವಿಯ ತಮ್ಮಟೆಗೆ ಘಟ್ಟಿಸುತ್ತವೆ. ಆಗ ಉಗಮವಾಗುವ ತರಂಗಗಳು ಒಳಗಿವಿಗೆ ಸಾಗಿ ಬೇಸಿಲರ್ ಪೆÇರೆಯಲ್ಲಿ ಅನುರೂಪವಾದ ಕಂಪನವೇರ್ಪಡುತ್ತದೆ. ಇದನ್ನು ಈ ಮೊದಲೇ ಹೆಲ್ಮ್‍ಹೋಲ್ಟ್ಸ್ ಹಾಗೂ ಇತರರು ಸೂಚಿಸಿದ್ದರು. ಆದರೆ ಕಿವಿಯ ಸಂಪೂರ್ಣ ಕ್ರಿಯಶೀಲತೆ ಅರ್ಥವಾಗಿರಲಿಲ್ಲ. ಬೆಕೆಸಿಯ ಕಿವಿಯ ಕೃತಕ ಮೂಲಗಳಿಂದ ಇದು ಸುಸ್ಪಷವಾಯಿತು. ಕಿವಿ ತಮ್ಮಟೆಯಿಂದ, ಕಂಪನ ಬೇಸಿಲರ್ ಪೆÇರೆಯ ಮೇಲಿನಿಂದ ಕೆಳಗಿನವರೆಗೂ ಒಂದೇ ಬಗೆಯ ಅಲೆಯಾಗಿ ಹಬ್ಬುತ್ತದೆ. ಈ ಅಲೆಯ ಪಾರ(Amplitude) ಬೇಸಿಲರ್ ಪೆÇರೆಯ ನಿರ್ದಿಷ್ಟ ಜಾಗದಲ್ಲಿ ಅತ್ಯಧಿಕವಾಗಿರುತ್ತದೆ. ಈ ನಿರ್ದಿಷ್ಟ ಜಾಗ ಶಬ್ದದ ಲಕ್ಷಣಗಳಿಗನುಗುಣವಾಗಿ ಬೇಸಿಲರ್ ಪೆÇರೆಯ ವಿವಿಧ ಸ್ಥಾನಗಳಿಗೆ ಬದ್ದವಾಗಿರುತ್ತದೆಯೆಂದು ಬೆಕೆಸಿ ತೋರಿಸಿದನು. ಇದು ಶ್ರವಣದ ಸಾಗಿಕೆಯ ಸಿದ್ಧಾಂತವೆಂದು ಹೆಸರಾಯಿತು. ಇದಕ್ಕಾಗಿ ಬೆಕೆಸಿ 1961ರ ನೊಬೆಲ್ ಪ್ರಶಸ್ತಿ ಗಳಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019