ಬರ್ನಾರ್ಡ್ ,ಕಟ್ಜ್ –(1911--) ೧೯೭೦
ಜರ್ಮನಿ -ವೈದ್ಯಕೀಯ-ನರತಂತುಗಳ ತುದಿಗಳಲ್ಲಿನ ಕ್ರಿಯಾವಿನ್ಯಾಸ ಕುರಿತಾಗಿ ಸಂಶೋಧಿಸಿದಾತ.
ಬರ್ನಾಡ್ 26 ಮಾರ್ಚ್ 1911ರಂದು ಲೀಪ್‍ಜಿಗ್‍ನಲ್ಲಿ ಜನಿಸಿದನು. ಈತನ ಪೂರ್ವಿಕರು ರಷ್ಯಾ ಮೂಲದ ಯಹೂದಿಗಳಾಗಿದ್ದರು. ಪದವಿ ಪೂರ್ವ ಶಿಕ್ಷಣದವರೆಗಿನ ವಿಧ್ಯಾಭ್ಯಾಸವನ್ನು ಲೀಪ್‍ಜಿಗ್‍ನ ಆಲ್ಬರ್ಟ್ ಜಿಮ್ನಾಷಿಯಂನಲ್ಲಿ ಮುಗಿಸಿದ ಬರ್ನಾರ್ಡ್ 1934ರಲ್ಲಿ ಲೀಪ್‍ಜಿಗ್ ವಿಶ್ವ ವಿದ್ಯಾಲಯದಿಂದ ವೈದ್ಯಕೀಯ ಪದವಿ ಗಳಿಸಿದನು. 1935ರಲ್ಲಿ ಲಂಡನ್‍ಗೆ ವಿಶ್ವ ವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಎ.ವಿ.ಹಿಲ್‍ನ ಮಾರ್ಗದರ್ಶನದಲ್ಲಿ ಸಂಶೋಧಕ ವಿದ್ಯಾರ್ಥಿಯಾದನು. 1939ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯ ಜೆ.ಸಿ.ಎಕ್ಲೆಸ್ ಪ್ರಯೋಗಾಲಯದಲ್ಲಿ ಜೆ.ಸಿ.ಎಕ್ಲೆಸ್ ಹಾಗೂ ಎಸ್ ಡಬ್ಲ್ಯೂ ಕುಫ್ಲರ್ ನೇತೃತ್ವದಲ್ಲಿ ನರ ಸ್ನಾಯು ಸಂಶೋಧನೆಯಲ್ಲಿ ನಿರತನಾದನು. 1942ರಲ್ಲಿ ಆಸ್ಟ್ರೇಲಿಯಾದ ನಾಗರಿಕನಾಗಿ, ಆಸ್ಟ್ರೇಲಿಯನ್ ವಾಯುದಳದಲ್ಲಿ ರಡಾರ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿ ದಕ್ಷಿಣ ಶಾಂತ ಸಾಗರದಲ್ಲಿ ಜಾಗತಿಕ ಯುದ್ದದಲ್ಲಿ ಭಾಗಿಯಾದನು. ಬರ್ನಾಡ್ ಸಂಶೋಧನೆಗಳು ನರವ್ಯೂಹ, ನರ ಸ್ನಾಯುಗಳ ಭೌತ ರಾಸಾಯನಿಕ ಕ್ರಿಯಾವಿನ್ಯಾಸ ಹಾಗೂ ವರ್ಗಾಂತರಗಳಲ್ಲಿ ಕೇಂದ್ರಿಕೃತಗೊಂಡಿದ್ದವು. ನರತಂತುಗಳ ತುದಿಗಳಲ್ಲಿನ (Humoral Transmitter)ಸಂಕೇತಗಳನ್ನು ಸಂಗ್ರಹಿಸುವ, ಬಿಡುಗಡೆಗೊಳಿಸುವ ಹಾಗೂ ನಿಷ್ಕ್ರಿಯಗೊಳಿಸುವ ಕ್ರಿಯಾ ವಿನ್ಯಾಸಗಳನ್ನು ಕುರಿತಾದ ಮಹತ್ತರ ಕಾರ್ಯಗಳಿಗಾಗಿ 1970ರಲ್ಲಿ ಬರ್ನಾರ್ಡ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/24/2019