ಚಾರ್ಲ್ಸ್, ಬ್ರೆಂಟನ್ ಹಗ್ಗಿನ್ಸ್ (1901--) ೧೯೬೬
ಅಸಂಸಂ-ಕೆನಡಾ-ಕ್ಯಾನ್ಸರ್ ಚಿಕೆತ್ಸೆಯಲ್ಲಿ ಚೋದನಿಕೆಗಳ ಪಾತ್ರ ಕುರಿತಾಗಿ ಅಧ್ಯಯನ ನಡೆಸಿದಾತ.
ಚಾರ್ಲ್ಸ್ ನೋವಾಸ್ಕೋಷಿಯಾದ ಹ್ಯಾಲಿಫಾಕ್ಸ್;ನಲ್ಲಿ 22 ಸೆಪ್ಟೆಂಬರ್ 1901ರಂದು ಜನಿಸಿದನು. ಈತನ ತಂದೆ ಔಷಧಿ ವ್ಯಾಪಾರಿಯಾಗಿದ್ದನು. ಹ್ಯಾಲಿಫಾಕ್ಸ್’ನ ಸಾರ್ವಜನಿಕ ಶಾಲೆಯಲ್ಲಿ ಪದವಿ ಪೂರ್ವದವರೆಗಿನ ಶಿಕ್ಷಣ ಮುಗಿಸಿ 1920ರಲ್ಲಿ ಅಕಾಡಿಯಾ ವಿಶ್ವವಿದ್ಯಾಲಯದಿಂದ ಪದವಿ, 1924ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದನು. ನಂತರ ಮಿಷಿಗನ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕನಾಗಿ ವೃತ್ತಿ ಜೀವನ ಪ್ರಾರಂಭಿಸಿದನು. ಪ್ರೊಸ್ಟ್ಯಾಟಿಕ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಚೋದನಿಕೆಗಳ (Hormone) ಪಾತ್ರ ಕುರಿತಾದ ಸಂಶೋಧನೆಗಳಿಗಾಗಿ 1966ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/22/2020