অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ರಿಕ್ ಫ್ರಾನ್ಸಿಸ್ (ಹ್ಯಾರಿ ಕಾಂಪ್ಟನ್)

ಕ್ರಿಕ್ ಫ್ರಾನ್ಸಿಸ್ (ಹ್ಯಾರಿ ಕಾಂಪ್ಟನ್)

ಕ್ರಿಕ್ ಫ್ರಾನ್ಸಿಸ್ (ಹ್ಯಾರಿ ಕಾಂಪ್ಟನ್) (1910--)  ೧೯೬೨

ಬ್ರಿಟನ್-ಅಣ್ವಯಿಕ ಜೀವ ಶಾಸ್ತ್ರ (Molecular Biology))- ವ್ಯಾಟ್ಸನ್ ಜೊತೆಗೂಡಿ ಡಿಎನ್‍ಎ  ದ್ವಿ -ಸರ್ಪಿಲ (Double Helix) ರಚನೆ ವಿವರಿಸಿದಾತ.  

ಅಣ್ವಯಿಕ ಜೀವಶಾಸ್ತ್ರ ಹೆಸರಿನ ಶಾಖೆಯ ಬೆಳವಣಿಗೆಯೊಂದಿಗೆ ಇಪ್ಪತ್ತನೇ ಶತಮಾನದಲ್ಲಿ ಆರಂಭ ಕಂಡ ಜೀವ ವಿಜ್ಞಾನ ದಾಪುಗಾಲಿಕ್ಕಿ ಮುಂದಕ್ಕೆ ಸಾಗುತ್ತಿದೆ. ಈ ಶಾಖೆಯಲ್ಲಿನ ಮೂಲ, ಕೇಂದ್ರಿಯ ಪರಿಕಲ್ಪನೆಗಳ ಅನ್ವೇಷಣೆ, ಅನಾವರಣಗಳ ದ್ರಷ್ಟಾರರು ಕ್ರಿಕ್ ಹಾಗೂ  ವ್ಯಾಟ್ಸನ್. ಜೀವ ಸೃಷ್ಟಿಯಲ್ಲಿ ಸ್ವಯಂ-ನಕಲಾಗುವ ವಂಶವಾಹಕದ (Genetic) ಸಾಮಾಗ್ರಿಯಾದ ಡಿಎನ್‍ಎ ಎರಡು ಸರ್ಪಿಲಗಳ (Helix)  ರೀತಿಯಲ್ಲಿದ್ದು, ಅಡ್ಡಲಾಗಿ ಎಳೆಗಳಿಂದ ಬಂಧಿಸಲ್ಪಟ್ಟಿವೆಯೆಂದು ಕಂಡು ಹಿಡಿದು , ಕ್ರಾಂತಿಕಾರಕ ಬದಲಾವಣೆ ತಂದ ಕ್ರಿಕ್ ಲಂಡನ್‍ನಲ್ಲಿ ಭೌತಶಾಸ್ತ್ರದ ಪದವಿ ಗಳಿಸಿದನು.  ಕ್ರಿಕ್ ಆರಂಭಿಕ ಸಂಶೋಧನೆಗಳಿಗೆ ಜಾಗತಿಕ ಯುದ್ದ ಅಡಚಣೆಯಾಯಿತು.  ಯುದ್ದ ಕಾಲದಲ್ಲಿ ನೌಕಾಪಡೆಯಲ್ಲಿ ಕ್ರಿಕ್ ಸೇವೆ ಸಲ್ಲಿಸಿದನು.  ಯುದ್ದದ ನಂತರ ಜೀವಶಾಸ್ತ್ರದತ್ತ ಆಸಕ್ತಿ ತಳೆದ ಕ್ರಿಕ್ 1949ರಲ್ಲಿ  ಕೇಂಬ್ರಿಜ್‍ನ ವೈದ್ಯಕೀಯ ಸಂಶೋಧನಾ ಘಟಕ ಸೇರಿದನು. ಬ್ರಾಗ್ ನಿಂದ ಆರಂಭಿಸಲ್ಪಟ್ಟ ಕ್ಷ-ಕಿರಣ ವಿವರ್ತನ (X-ray Diffraction)  ವಿಧಾನಗಳಲ್ಲಿ ನೈಪುಣ್ಯಗಳಿಸಿದ ಕ್ರಿಕ್ , ಅದನ್ನು ಬೈಜಿಕ-ಬಹ್ವಂಗಿಗಳ (Bio-polymer) ರಾಚನಿಕ ಸ್ವರೂಪ ಅರಿಯಲು ಬಳಸಿದನು. ಈ ಕಾಲದಲ್ಲಿ ಬ್ರಾಗ್, ಕ್ಯಾವೆಂಡಿಷ್  ಪ್ರಯೋಗಾಲಯದ ಮುಖ್ಯಸ್ಥನಾಗಿದ್ದನು. 1950ರಲ್ಲಿ ಬ್ರಾಗ್‍ನಿಂದ ಉತ್ತೇಜಿತರಾದ, ಷೆರುಟ್ಜ್ .ಜೆ.ಸಿ.  ಕೆಂಡ್ರ್ಯೂ, ವ್ಯಾಟ್ಸನ್, ಎಚ್.ಇ.ಹಕ್ಸ್ಲೆ ಕ್ರಿಕ್ ಹಾಗೂ ಮುಂದೆ ಬ್ರೆನ್ನೆರ್ ಅಣ್ವಯಿಕ ಜೀವಶಾಸ್ತ್ರದಲ್ಲಿ, ಜೀವ ದ್ರವ್ಯಗಳ ರಾಚನಿಕ ವಿಧಾನ ಕಂಡು ಹಿಡಿಯುವಲ್ಲಿ ಜಗತ್ತಿಗೇ ಅಗ್ರಗಾಮಿಗಳಾದರು. ಇದೇ ಪ್ರಯೋಗಾಲಯದಲ್ಲಿ ಬ್ರಾಗ್ ಸ್ಥಾನವನ್ನು ಅಲಂಕರಿಸಿದ್ದ ರುದರ್’ಫೋರ್ಡ್ ಇಪ್ಪತ್ತು ವರ್ಷಗಳ ಹಿಂದೆ ಕಣ ಭೌತಶಾಸ್ತ್ರಕ್ಕೆ ಇದೇ ಚಾಲನೆ ಹಾಗೂ  ಮುನ್ನಡೆಯನ್ನು ಒದಗಿಸಿದ್ದುದು ಚಾರಿತ್ರಿಕವಾಗಿ ಗಮನಾರ್ಹ. 

1951ರಲ್ಲಿ ಇಪ್ಪತ್ಮೂರರ ಹರಯದ, ಬ್ಯಾಕ್ಟಿರಿಯಾ, ವೈರಸ್‍ಗಳ ಬಗ್ಗೆ ಜ್ಞಾನವಿದ್ದು ಹಾಗೂ ತಳಿಶಾಸ್ತ್ರದಲ್ಲಿ ಬಗೆಗೆ ಕುತೂಹಲ ತಳೆದಿದ್ದ ವ್ಯಾಟ್ಸನ್, ಬ್ರಾಗ್ ನೇತೃತ್ವದ ತಂಡವನ್ನು ಸೇರಿದನು.  ಅಲ್ಪಕಾಲದಲ್ಲೇ ಕ್ರಿಕ್ ಹಾಗೂ ವ್ಯಾಟ್ಸನ್ ಅತ್ಯುತ್ತಮ ಗೆಳೆಯರಾದರು.  ವಂಶವಾಹಕಗಳ ಸ್ವರೂಪ ಹಾಗೂ ನಡವಳಿಕೆಗಳನ್ನು ಅಣ್ವಯಿಕ ಮಟ್ಟದಲ್ಲಿ ಅರಿಯಲು ಸಾಧ್ಯವೆಂಬ ಖಚಿತವಾದ ನಂಬಿಕೆಯಿಂದ, ಈ ಸ್ನೇಹಿತರು ನಾನಾ ಪ್ರಯೋಗಗಳನ್ನು ಕೈಗೊಂಡರು.  ಕ್ರಿಕ್ ಹಾಗೂ ವ್ಯಾಟ್ಸನ್ ನಂಬುಗೆಗಳು ಹುಸಿಯಾಗಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಈ ದಿಶೆಯಲ್ಲಿ ಅವರಿಗೆ ಹಲವಾರು ನಂಬಲರ್ಹ ಸಾಕ್ಷ್ಯಗಳು ಲಭ್ಯವಾದವು. ಈ ಮೊದಲು ಅವೆರಿ ನಡೆಸಿದ ಸಂಶೋಧನೆಗಳಿಂದ , ಡಿಎನ್‍ಎ ವಂಶವಾಹಕಗಳ ಸರಕುಗಳೆಂದು ಖಚಿತವಾಗಿದ್ದಿತು. ಎ.ಆರ್.ಟಾಡ್, ಡಿಎನ್‍ಎ ಸಕ್ಕರೆಗಳ ಸರಪಣಿಯಾಗಿದ್ದು ಫಾಸ್ಪೇಟ್ ಕೊಂಡಿಗಳಿಂದ ಅವು ಪರಸ್ಪರ ಸಂಬಂಧ ಹೊಂದಿರುವುದಾಗಿಯೂ, ಹಾಗೂ ಈ ಸಕ್ಕರೆ ಉಂಗುರಗಳಿಗೆ  ನಾಲ್ಕು ಬಗೆಯ ಮೂಲ ತಳಹದಿಯ ಅಣುಗಳು ಲಗತ್ತಾಗಿರುವುದಾಗಿಯೂ ತೋರಿಸಿದ್ದನು. ಚಾರ್‍ಗಾ¥sóï ಈ ತಳಹದಿಯ ಸರಕುಗಳು ವಿಶಿಷ್ಟ ದರದಲ್ಲಿರುವುದನ್ನು ಸ್ಪಷ್ಟಪಡಿಸಿದ್ದನು. ಕ್ರಿಕ್ ಕ್ಷ-ಕಿರಣ ವಿವರ್ತನೆ ವಿಧಾನದಿಂದ ಡಿಎನ್‍ಎ ಸರ್ಪಿಲ ರೂಪ ಹೊಂದಿದೆಯೇ ಎಂದು ಪರಿಶೀಲಿಸುವ ಸಾಮಾನ್ಯ ಸಿದ್ಧಾಂತ ರೂಪಿಸಿದನು. ಈ ಸಿದ್ಧಾಂತದಂತೆ ಸರ್ಪಿಲ ರಚನೆ ಹೊಂದಿದ ಡಿಎನ್‍ಎಯ ಕ್ಷ-ಕಿರಣ ವಿವರ್ತನೆಯ ನಕ್ಷೆ ಹಾಗೂ ಆಲೇಖಗಳು ನಿರ್ದಿಷ್ಟ ಬಗೆಯಲ್ಲಿರುತ್ತವೆ.  ಲಂಡನ್‍ನ ಕಿಂಗ್ಸ್ ಕಾಲ್ಲೇಜ್‍ನಲ್ಲಿದ್ದ ರೊಸಾಲಿಂಡ್ ಫ್ರಾಂಕ್ಲಿನ್  ಡಿಎನ್‍ಎಯ  ಕ್ಷ-ಕಿರಣ ವಿವರ್ತನೆ ನಕ್ಷೆ  ಹಾಗೂ ಆಲೇಖಗಳನ್ನು ಪಡೆದಿದ್ದಳು. ಇದು ಕ್ರಿಕ್ ಹಾಗೂ ವ್ಯಾಟ್ಸನ್‍ರಿಗೆ ತಿಳಿಯಿತು. ರೊಸಾಲಿಂಡ್‍ಳ ಸಹೋದ್ಯೋಗಿಯಾಗಿದ್ದ ಎಂ.ಎಚ್.ಎಫ್.ವಿಲ್ಕಿನ್ಸ್ ಕ್ರಿಕ್‍ನ ಸ್ನೇಹಿತನಾಗಿದ್ದನು. ಈತನ ಮೂಲಕ ಇವರಿಗೆ ರೊಸಾಲಿಂಡ್ ಡಿಎನ್‍ಎ ಮೇಲೆ ನಡೆಸಿದ ಪ್ರಯೋಗಗಳ ಫಲಿತಾಂಶಗಳು ಲಭ್ಯವಾದವು.  ತಮ್ಮ ಸಿದ್ಧಾಂತ, ರೊಸಾಲಿಂಡ್‍ಳ ಫಲಿತಾಂಶ ಆವರೆಗೆ ಡಿಎನ್‍ಎ ಬಗ್ಗೆ ಲಭ್ಯವಿದ್ದ ಎಲ್ಲಾ ಮಾಹಿತಿಗಳಿಗೂ ಸೂಕ್ತವಾಗುವಂತಹ ವಿವರಣೆ ನೀಡಿದ ಕ್ರಿಕ್ಸ್ ಮತ್ತು ವ್ಯಾಟ್ಸನ್ , ಡಿಎನ್‍ಎ ದ್ವಿ-ಸರ್ಪಿಲ ಮಾದರಿ ನೀಡಿದರು. ಈ ಮಾದರಿ ಈಗ ಸರಿಯೆಂದು ಅಂಗೀಕೃತವಾಗಿದೆ. ಇದರಲ್ಲಿ ಎರಡು ಡಿಎನ್‍ಎ ಸರಪಣಿಗಳು ಸರ್ಪಿಲವಾಗಿ ಒಂದಕ್ಕೊಂದು ಅಭಿಮುಖವಾಗಿ ಅಪ್ರದಕ್ಷಿಣವಾಗಿ ವಲಿತಗೊಂಡಿರುತ್ತವೆ.  ಈ ಸರಪಣಿಗಳ ಹೊರಭಾಗಕ್ಕೆ ಲಗತ್ತಾಗಿ ಸಕ್ಕರೆಮತ್ತು ¥sóÁಸ್ಫೇಟ್ ಸರಪಣಿಗಳಿದ್ದರೆ, ಒಳಮುಖದಲ್ಲಿ ಡಿಎನ್‍ಎ ಸರಪಣಿಗಳನ್ನು ಬಂಧಿಸಿದಂತೆ ಜೋಡಿಗಳಲ್ಲಿ ಎ,ಟಿ,ಜಿ,ಸಿ ಅಮೈನೋ ಆವ್ಮ್ಲಗಳ ತಳಹದಿಗಳಿರುತ್ತವೆ. ಅನುವಂಶಿಕತೆಗೆ ಬೇಕಾದ ಮಹಿತಿ ಈ ಜೋಡಣೆಯಲ್ಲಿ ಅಡಕಗೊಂಡಿರುತ್ತದೆ. ಕ್ರಿಕ್ ಡಿಎನ್‍ಎ ಪ್ರತಿರೂಪೀಕೃತವಾಗಿ (ಖಿಡಿಚಿಟಿsಛಿಡಿiಠಿಣ)  ಆರ್‍ಎನ್‍ಎ ಹಾಗೂ ಅರ್‍ಎನ್‍ಎಯ ರೂಪಾಂತರವಾಗಿ ಪೆÇ್ರೀಟಿನ್ ದಕ್ಕುವುದೆಂದು ತಿಳಿಸಿದನು.  ಕ್ರಿಕ್ ಹಾಗೂ ವ್ಯಾಟ್ಸನ್‍ರವ ಡಿಎನ್‍ಎ ಮಾದರಿ ಮುಂದುವರೆದ ಜೀವರಸಾಯನಶಾಸ್ತ್ರಕ್ಕೆ ಕಾರಣವಾಯಿತು. ಭೂಮಿಯ ಮೇಲಿನ ಜೀವ ಉಗಮದ ಅರಿವಿಗೆ ದೃಢ ಹೆಜ್ಜೆ ಇಡುವಲ್ಲಿ ನೆರವಾಯಿತು. 1962ರಲ್ಲಿ, ಕ್ರಿಕ್, ವ್ಯಾಟ್ಸನ್ ಮತ್ತು ವಿಲ್ಕಿನ್ಸ್ ನೊಬೆಲ್ ಪ್ರಶಸ್ತಿ

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 2/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate