ಅ್ಯಂಡ್ರೆ ಮೈಖೆಲ್ ಲೌಫ್ –(1902-1994) ೧೯೬೫
ಫ್ರಾನ್ಸ್ -ವೈದ್ಯಕೀಯ -ಸೂಕ್ಷ್ಮಜೀವಿ ಅಧ್ಯಯನದ ಮುಂದಾಳು
ಆ್ಯಂಡ್ರೆ 8 ಮೇ 1902 ರಂದು ಅಲಿಯರ್‍ನಲ್ಲಿ ಜನಿಸಿದನು. 19 ಮೇ ವಯಸ್ಸಿನಲ್ಲಿ ಪಾಸ್ತರ್ ಸಂಸ್ಥೆ ಸೇರಿ ವಿಜ್ಞಾನದಲ್ಲಿ ಪದವಿ ಗಳಿಸಿ, ನಂತರ ಒಂದು ವರ್ಷ ವೈದ್ಯಕೀಯ ವ್ಯಾಸಂಗ ಮಾಡಿದನು. ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಪ್ರಯೋಗಾಲಯವೊಂದರಲ್ಲಿ ಆಂಡ್ರೆ ಕೆಲಸ ಮಾಡುತ್ತಿದ್ದನು. 1921ರಲ್ಲಿ ವಿಶ್ವ ವಿಖ್ಯಾತವಾಗಿದ್ದ ಸೂಕ್ಷ್ಮ ಜೀವಿಶಾಸ್ತ್ರಜ್ಞ ಎಡುಯಾರ್ಡ್ ಚಟ್ಟನ್ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡುವ ಸದಾವಕಾಶ ಲೌಪ್ಗ್ಗೆ ದಕ್ಕಿತು. ಮುಂದೆ ಹದಿನೇಳು ವರ್ಷಗಳ ಕಾಲ ಈತನ ಮಾರ್ಗದರ್ಶನ ಹಾಗೂ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸಿದನು. ಈತನ ಶಿಫಾರಸ್ಸಿನ ಮೇರೆಗೆ ಆ್ಯಂಡ್ರೆ , ಪಾಸ್ತರ್ ಸಂಸ್ಥೆಯಲ್ಲಿದ್ದ ಫೆಲಿಕ್ಸ್ ಮೆಸ್ನಿಯ ಸಂಶೋಧನಾ ತಂಡ ಸೇರಿದನು. ಪರೋಪ ಸೂಕ್ಷ್ಮ ಜೀವಿಗಳ ವೃದ್ಧಿ ಚಕ್ರ, ರೂಪಾಂತರ ಪ್ರಕ್ರಿಯೆ ಕುರಿತಾಗಿ ಆ್ಯಂಡ್ರೆಯ ಆರಂಭಿಕ ಸಂಶೋಧನೆಗಳು ಜರುಗಿದವು. ಮುಂದೆ ಅದಿಮ ಜೀವಿಗಳ ಪೌಷ್ಟಿಕತೆ ಕುರಿತಾಗಿ ಅಧ್ಯಯನ ನಡೆಸಿದನು. ಇದರ ಅಂಗವಾಗಿ 1932ರಲ್ಲಿ ಡಾಕ್ಟರೇಟ್ ಗಳಿಸಿದನು. ರಾಕ್ಫೆಲರ್ ಸಂಸ್ಥೆಯ ಅನುದಾನ ಪಡೆದು 1932-1933ರಲ್ಲಿ ಆ್ಯಂಡ್ರೆ ಹೈಡೆಲ್‍ಬರ್ಗ್‍ನಲ್ಲಿ ಒಟ್ಟೋ ಮೇಯರ್’ಹಾಫ್ನೊಂದಿಗೆ ಸಂಶೋಧನೆ ನಡೆಸಿದನು. ಫ್ಲಾಜಲೆಟ್‍ಗಳ ಬೆಳವಣಿಗೆಯ ಅಂಶವಾದ ಹೆಮ್ಯಾಟಿನ್, ಉಸಿರಾಟ ಹಾಗೂ ಬೆಳವಣಿಗೆಯಲ್ಲಿ ಅದರ ಪಾತ್ರ ಕುರಿತಾಗಿ ಆ್ಯಂಡ್ರೆ ನಡೆಸಿದ ಸಂಶೋಧನೆಗಳು ಗಮನಾರ್ಹವಾದುವು. 1936ರಲ್ಲಿ ಎರಡನೇ ಬಾರಿಗೆ ರಾಕ್ಫೆಲರ್ ಅನುದಾನ ಪಡೆದ ಆ್ಯಂಡ್ರೆ ಹಾಗೂ ಆತನ ಪತ್ನಿ ಕೇಂಬ್ರಿಜ್‍ನಲ್ಲಿ ಡೇವಿಡ್ ಕಿಲಿನ್‍ನೊಂದಿಗೆ ಸಂಶೋಧಿಸುವ ಅವಕಾಶ ಪಡೆದರು. ಇಲ್ಲಿರುವಾಗ ಹೆಮೊಫಿûಲಿಸ್ ಇನ್ಫ್ಲೂಯೆಂಜಾಕ್ಕೆ ಅಗತ್ಯವಾಗಿರುವ ಫ್ಯಾಕ್ಟರ್-5ನ್ನು ಅದರ ಕೋಝೈವೇಸ್‍ನೊಂದಿಗೆ ಪತ್ತೆ ಹಬ್ಬಿ, ಬ್ಯಾಕ್ಟಿರಿಯಾ ಅಂಗಕ್ರಿಯೆಯಲ್ಲಿ ಅದರ ಮಹತ್ತರತೆಯನ್ನು ವಿವರಿಸಿದನು. 1938ರಲ್ಲಿ ಪಾಸ್ತರ್ ಸಂಸ್ಥೆಯ ಮುಖ್ಯಸ್ಥವಾದ ಆ್ಯಂಡ್ರೆ , 1959ರಲ್ಲಿ ಪ್ಯಾರಿಸ್‍ನ ಸೂಕ್ಷ್ಮ ಜೀವಿಶಾಸ್ತ್ರ ನಿಕಾಯದಲ್ಲಿ ಪ್ರಾಧ್ಯಾಪಕನಾದನು. ಆ್ಯಂಡ್ರೆಯ ಸಂಶೋಧನೆಗಳಿಂದ ಲೈಸೋಜೆನಿಕ್ ಬ್ಯಾಕ್ಟೀರಿಯಾಗಳು ಬ್ಯಾಕ್ಟೀರಿಯಾ ¥sóÉೀಜ್‍ಗಳನ್ನು ಸ್ರವಿಸುವುದಿಲ್ಲವೆಂದೂ, ಹಾಗಾದಾಗ ಬ್ಯಾಕ್ಟೀರಿಯಾಗಳು ಸಾವನ್ನಪ್ಪುವುವೆಂದು ತಿಳಿಸಿದನು. ಬಾಹ್ಯ ಪ್ರೇರಣೆಯಿಂದ ಮಾತ್ರ ಬ್ಯಾಕ್ಟಿರಿಯಾಗಳು ಬ್ಯಾಕ್ಟಿರಿಯಾ ಫೇಜ್’ಗಳನ್ನು ಸ್ರವಿಸಬಲ್ಲವೆಂದು ಖಚಿತಪಡಿಸಿದನು. ಲೂಯಿ ಸಿಮಿನೊವಿಚ್ ಮತ್ತು ನೀಲ್ಸ್ ಜೆಲ್ಡ್‍ಗಾರ್ಡ್‍ನೊಂದಿಗೆ ನಡೆಸಿದ ಮುಂದುವರೆದ ಅಧ್ಯಯನಗಳಿಂದ ಈ ಬಾಹ್ಯ ಪ್ರೇರಣೆ, ಅತಿ ನೇರಳೆ ವಿಕಿರಣವಾಗಿರುವುದು ಸ್ಪುಟವಾಯಿತು. 1954ರಲ್ಲಿ ಲೌಫ್ ಪೊಲಿಯೋ ವೈರಸ್‍ಗಳ ಅಧ್ಯಯನ ಪ್ರಾರಂಭಿಸಿದನು. ಈತನ ವಿಸ್ತೃತ ಅಧ್ಯಯನಗಳಿಂದ ಪೊಲಿಯೋ ಸೋಂಕು ತಾಗುವ ಕಾರಣಗಳು ಅಸ್ಪಷ್ಟವೆಂದು ತಿಳಿದು ಬಂದಿತು. ಲೌಫ್’ನನ್ನು ನೂರಾರು ಸನ್ಮಾನ ಗೌರವ ಪದವಿಗಳು ಅರಸಿ ಬಂದವು. ಚಿಕಾಗೋ, ಆಕ್ಸ್ಫರ್ಡ್, ಗ್ಲಾಸ್ಗೋಗಳ ಗೌರವ ಪ್ರಾಧ್ಯಾಪಕನಾಗಿದ್ದ ಲೌಫ್ , ಅಂತಾರಾಷ್ಟ್ರೀಯ ಸೂಕ್ಷ್ಮ ಜೀವಿ ಶಾಸ್ತ್ರ ಸಂಘದ ಅಧ್ಯಕ್ಷನಾಗಿದ್ದನು. ಸೂಕ್ಷ್ಮ ಜೀವಿ ಶಾಸ್ತ್ರದಲ್ಲಿನ ಗಮನಾರ್ಹ ಸಾಧನೆಗಳಿಗಾಗಿ ಲೌಫ್ 1965ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 11/24/2019