ಬೊವೆಟ್, ಡೇನಿಯಲ್ (1907-92) ೧೯೫೭
ಸ್ವಿಟ್ಸರ್ಲ್ಯಾಂಡ್ -ಫ್ರಾನ್ಸ್-ಇಟೆಲಿ - ಔಷಧಿಶಾಸ್ತ್ರ- ಶಸ್ತ್ರಚಿಕಿತ್ಸೆಗಾಗಿ ಸ್ನಾಯು ವಿಶ್ರಾಂತಕಗಳನ್ನು (Muscle Relaxant )¥ಪರಿಚಯಿಸಿದಾತ
ಬೊವೆಲ್ 23 ಮಾರ್ಚ್ 1907ರಂದು ನ್ಯೂಕಾಟೆಲ್‍ನಲ್ಲಿ, ಜನಿಸಿದನು. ಈತನ ತಂದೆ ಜಿನೇವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದನು. 1927ರಲ್ಲಿ ಜಿನೇವಾ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿಗಳಿಸಿ, ಪ್ರಾಣಿಗಳ ಅಂಗರಚನೆಯ ತೌಲನಿಕ ಅಧ್ಯಯನ ನಡೆಸಿ, 1929ರಲ್ಲಿ ಡಾಕ್ಟರೇಟ್ ಗಳಿಸಿದನು. 1929 ರಿಂದ 1947ರವರೆಗೆ ¥sóÁ್ರನ್ಸ್‍ನ ಪಾಸ್ತರ್ ಸಂಸ್ಥೆಯಲ್ಲಿ ಇ.ಕಾಕ್ಸ್‍ನ ಕೆಳಗೆ ಕೆಲಸಕ್ಕೆ ಸೇರಿ, ಮುಂದೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. 1947ರಲ್ಲಿ ಇಟಲಿಯ ರೋಂನಲ್ಲಿರುವ ಇನ್ಸಿಟಿಟ್ಯ್ಯೂಟ್ ಸುಪೀರಿಯರ್ ಸಾನಿಟಾದ ನಿರ್ದೇಶಕನಾಗಿದ್ದ ಡೋಮಿನಿಕಾ ಮೊರೆಟ್ಟೋನ ಆಹ್ವಾನದ ಮೇರೆಗೆ ಸಂಶೋಧಕ ನಿರ್ದೇಶಕನಾದನು. ಪ್ಯಾರಿಸ್‍ನಲ್ಲಿರುವಾಗ ಬೊವೆಟ್ ಸಂಶೋಧನಾ ತಂಡವೊಂದರ ಸದಸ್ಯನಾಗಿದ್ದನು. ಈ ತಂಡ ಸ್ಟ್ರೆಪೆಲೊಕೊಕ್ಕಿ ಬ್ಯಾಕ್ಟೀರಿಯಾಗಳ ನಂಜು ನಿವಾರಣೆಗೆ ಫ್ರೆಂಟೋಸಿಲ್ ಮದ್ದನ್ನು ಪರಿಚಯಿಸಿತು. ಈ ಮದ್ದು ದೇಹದಲ್ಲಿ ಸಲ್ಫಾನಿಲಮೈಡ್ ಆಗಿ ಪರಿವರ್ತನೆಗೊಂಡು ಪ್ರಭಾವಶಾಲಿಯಾಗಿದ್ದಿತು. ಸಲ್ಫಾನಿಲಮೈಡ್ ಮದ್ದುಗಳು ಅಗ್ಗವಾಗಿದ್ದು ವ್ಯಾಪಕ ಬಳಕೆ ಕಂಡವು. ಬಾಹ್ಯ ಪರಿಸರದ ಕೆಲವು ಪದಾರ್ಥಗಳು ದೇಹ ತೀವ್ರ ಪ್ರತಿಕ್ರಿಯೆಗೊಳ್ಳುವಂತೆ ಮಾಡುತ್ತವೆ. ಇಂತಹ ಸ್ಥಿತಿಯನ್ನು ಒಗ್ಗದಿಕೆ (Allergy) ಎನ್ನುತ್ತಾರೆ. ಇದಕ್ಕೆ ದೇಹದಲ್ಲಿ ಬಿಡುಗಡೆಯಾಗುವ ಹಿಸ್ಟಮಿನ್ ಎಂಬ ರಾಸಾಯನಿಕವೇ ಕಾರಣ. ಹಿಸ್ಟಮಿನ್ ನಿಯಂತ್ರಣದ ಮೂಲಕ ಒಗ್ಗದಿಕೆಗೆ ಪರಿಹಾರ ಒದಗಿಸುವಲ್ಲಿ ಬೊವೆಟ್ ಶ್ರಮಿಸಿದನು. ಬೊವೆಟ್ ಬ್ರೆಝಿಲ್‍ಗೆ ಭೇಟಿ ನೀಡಿದಾಗ ಕ್ಯುರಾರೆ ಹೆಸರಿನ ನರ ವಿಷದ ಬಗೆಗೆ ಅರಿತನು. ಇದನ್ನು ಕುರಿತಾಗಿ ನಡೆಸಿದ ಮುಂದುವರೆದ ಸಂಶೋಧನೆಗಳಿಂದ ಬೊವೆಟ್ ಕ್ಯುರಾರೆಯನ್ನು ಹೋಲುವ ಹಲವಾರು ರಾಸಾಯನಿಕಗಳನ್ನು ಪರಿಚಯಿಸಿದನು. ಇವು ಶಸ್ತ್ರಚಿಕೆತ್ಸೆಯ ಸಮಯದಲ್ಲಿ ಸ್ನಾಯುಗಳಲ್ಲಿ ವಿಶ್ರಾಂತತೆಯನ್ನು ತರಬಲ್ಲವು. ಪ್ರತಿಹಿಸ್ಟಮೈನ್‍ಗಳ ಸಂಶ್ಲೇಷಣೆ ,ಚೋದನಿಕೆಗಳ (Hormone) ಸಂತುಲಿತ ಸ್ಥಿತಿ, ಪಾರ್ಕಿನ್‍ಸೋನಿಸಂ ರೋಗ ಚಿಕಿತ್ಸೆ ಕೇಂದ್ರ ನರಮಂಡಲ ಔಷಧಿಗಳಿಗೆ ತೋರುವ ಪ್ರತಿಕ್ರಿಯೆ ಕುರಿತಾಗಿ ಗಮನಾರ್ಹ ಸಂಶೋಧನೆ ನಡೆಸಿದನು. ದೇಹದ ಅಂಗ ಹಾಗೂ ರಾಸಾಯನಿಕಗಳ ಸಂಶ್ಲೇಷಿತ ರಾಸಾಯನಿಕಗಳ ಪ್ರಭಾವ ಅವುಗಳು ರಕ್ತನಾಳ ಹಾಗೂ ಅಸ್ತಿ ಪಂಜರದ ಸ್ನಾಯುಗಳ ಮೇಲೆ ಬೀರುವ ಪರಿಣಾಮು ಕುರಿತು ನಡೆಸಿದ ಸಂಶೋಧನೆಗಳಿಗಾಗಿ 1957ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/21/2020