ಬರ್ನೆಟ್ ಸರ್ (ಫ್ರಾಂಕ್) ಮ್ಯೂಕಫೆಯೇನ್ (1899-1985 ) ೧೯೬೦
ಆಸ್ಟ್ರೇಲಿಯಾ- ವೈದ್ಯಕೀಯ ವಿಜ್ಞಾನ- ವೈರಸ್ ಹಾಗೂ ಪ್ರತಿರೋಧ ವ್ಯವಸ್ಥೆಯನ್ನು ಕುರಿತು ಸಂಶೋಧಿಸಿದಾತ.
ಮೆಲ್ಬೋರ್ನ್‍ನಲ್ಲಿ ವೈದ್ಯಕೀಯ ಪದವಿ ಪಡೆದು 2 ವರ್ಷಗಳ ಕಾಲ ಲಂಡನ್‍ನಲ್ಲಿ ಬ್ಯಾಕ್ಟೀರಿಯಾಶಾಸ್ತ್ರ ಅಭ್ಯಸಿಸಿದ ನಂತರ ಬರ್ನೆಟ್, ಹುಟ್ಟೂರಾದ ಮೆಲ್ಬೋರ್ನ್‍ನಲ್ಲಿ ನೆಲೆಸಿದನು. 1930ರಲ್ಲಿ ಬ್ಯಾಕ್ಟೀರಿಯಾಗಳ ಮೇಲೆ ದಾಳಿ ಎಸಗುವ ವೈರಸ್‍ಗಳನ್ನು (ಬ್ಯಾಕ್ಟೀರಿಯಾಫೇಜ್) ಕಂಡುಹಿಡಿದ ಬರ್ನೆಟ್, ಕೋಳಿಯ ಭ್ರೂಣದಲ್ಲಿ ಅವುಗಳ ಕೃಷಿ ಪಡೆಯುವಲ್ಲಿ ಯಶಸ್ವಿಯಾದನು. ಇದರ ಫಲವಾಗಿ ಜೀವಿಯೊಂದರಲ್ಲಿ ವಿಷಕ್ಕೆ ವಿಷರೋಧಕ ಉತ್ಪಾದಿಸುವ ಸಾಮರ್ಥ್ಯ ಅದರ ಹುಟ್ಟಿನಿಂದ ಬರದೆ, ಅದರ ಭ್ರೂಣಾವಧಿಯಲ್ಲಿ ಅಭಿವೃದ್ದಿಗೊಳ್ಳುವುದೆಂದು ತೋರಿಸಿದನು. ಇದನ್ನು ಮುಂದೆ ಮೆಡಾನರ್ ಖಚಿತಗೊಳಿಸಿದನು. ಬರ್ನೆಲ್ ವಿಷಮಶೀತ ಜ್ವರದ ವೈರಸ್, ಕಾಲರಾ ವೈಬ್ರಿಯೋ, ಪೊಲಿಯೋ, ಹಾಗೂ ದ್ವಿ ಜ್ವರಗಳ ಸಾಂಕ್ರಾಮಿಕತೆಯ ಬಗೆಗೆ ಕೂಡ ಕೆಲಕಾಲ ಕೆಲಸ ಮಾಡಿದನು. 1951ರಲ್ಲಿ ಬರ್ನೆಲ್ ಮಂಡಿಸಿದ ತಾದ್ರೂಪಿಕ (Clonal) ಆಯ್ಕೆ ಸಿದ್ಧಾಂತ, ಪ್ರತಿರೋಧ ವ್ಯವಸ್ಥೆ ಹೇಗೆ ತನ್ನನ್ನು ಪರರಿಂದ ಗುರುತಿಸುವ ಸಾಮರ್ಥ್ಯಗಳಿಸುತ್ತದೆ0iÉುಂದು ವಿವರಿಸುತ್ತದೆ. ಇದು ಹಲವಾರು ಸಂಶೋಧಕದಿಂದ ಅಸಮ್ಮತಿ ಹಾಗೂ ಮುಂದಿನ ಕೆಲಸಗಳಿಗೆ ಪ್ರೇರಣೆ ಒದಗಿಸಿತು. 1960ರಲ್ಲಿ ಬರ್ನೆಲ್, ಮೆಡಾವರ್ ಜೊತೆ ನೊಬೆಲ್ ಪ್ರಶಸ್ತಿ ಹಂಚಿಕೊಂಡನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 1/28/2020