ಅಂಡ್ರೇ , ಫ್ರೆಡರಿಕ್ –ಕುರ್ನಾನ್ (1895--) ೧೯೫೬
ಫ್ರಾನ್ಸ್-ಅಸಂಸಂ-ಹೃದಯ ರೋಗ ನಿರ್ಧಾರದ ವಿಧಾನ ರೂಪಿಸಿದಾತ.
1895ರಲ್ಲಿ ಪ್ಯಾರೀಸ್‍ನಲ್ಲಿ ಜನಿಸಿದ , ಕುರ್ನಾನ್, ಅಲ್ಲಿನ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯದಲ್ಲಿ ಪದವಿ ಗಳಿಸಿದನು. ಹೃದಯ ರೋಗಗಳ ಬಗೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಸಂಸಂಗಳ ಹೋಗಿ, ಅಲ್ಲಿ ಡಿಕಿನ್ಸನ್, ಡಬ್ಲ್ಯೂ ರಿಚರ್ಡ್‍ರೊಂದಿಗೆ, ಸುಮಾರು 35 ವರ್ಷಗಳ ಕಾಲ ಹೃದಯ ಸಂಬಂಧಿ ರೋಗಗಳ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ನಿರತನಾಗಿದ್ದನು. ಇಲ್ಲಿ ಹೃದಯ ಹಾಗೂ ಶ್ವಾಸಕೋಶಗಳು ಕೆಲಸ ಮಡುವುದನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ಹೊಸ ಮಾರ್ಗಗಳನ್ನು ಅನ್ವೇಷಿಸತೊಡಗಿದನು. 1929ರಲ್ಲಿ ವೆರ್ನರ್ ವ್ರೀಸ್‍ಮನ್ ರಬ್ಬರ್ ಕೊಳವೆಯೊಂದನ್ನು ತನ್ನ ಮುಂಗೈ ತೋಳಿನ ಅಪಧಮನಿಯ ಮೂಲಕ ಹೃದಯಕ್ಕೆ ಸಾಗಿಸುವ, ವಿಧಾನವನ್ನು ಜಾರಿಗೆ ತಂದಿದ್ದನು. ಕುರ್ನಾನ್ ಇದನ್ನು ಪರಿಷ್ಕರಿಸಿ, ಹೃದಯದ ಸ್ಥಿತಿಯನ್ನು ತಿಳಿಯಲು ಇದನ್ನು ಪರಿಷ್ಕರಿಸಿದನು. ಇಂತಹ ಹೃದ್ರೋಗ ನಿರ್ಧಾರ ಕುರ್ನಾನ್ ಪ್ರಯೋಗವೆಂದು ಖ್ಯಾತವಾಯಿತು. ಈಗಲೂ ಈ ವಿಧಾನ ವ್ಯಾಪಕವಾಗಿ ಬಳಕೆಯಲ್ಲಿದೆ. 1956ರಲ್ಲಿ ಕುರ್ನಾನ್, ವ್ರೀಸ್’ಮನ್ ಜೊತೆಗೆ ನೊಬೆಲ್ ಪ್ರಶಸ್ತಿ ಪಡೆದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 7/23/2019