ಬರ್ನಾರ್ಡೋ ,ಆಲ್ವರ್ಟೋ ಹೌಸೆ (1887--) ೧೯೪೭
ಅರ್ಜೆಂಟೈನಾ-ವೈದ್ಯಕೀಯ- ಕಾರ್ಬೋಹೈಡ್ರೇಟ್ ಚಯಾಪಚಯ ಹಾಗೂ ಮಧುಮೇಹದ ಆರಂಭಿಕ ಸ್ಥಿತಿಯ ಅಧ್ಯಯನ ನಡೆಸಿದಾತ.
ಬರ್ನಾಡೋ ತಂದೆ ತಾಯಿ ¥sóÁ್ರನ್ಸ್‍ನಿಂದ ವಲಸೆ ಹೋಗಿ ಅರ್ಜೆಂಟೈನಾದಲ್ಲಿ ನೆಲೆಸಿದ್ದರು. ಇವರ ಎಂಟು ಜನ ಮಕ್ಕಳಲ್ಲಿ ಒಬ್ಬನಾಗಿ 10 ಏಪ್ರಿಲ್ 1887 ರಂದು ಬರ್ನಾಡೋ ಜನಿಸಿದನು. 14ನೇ ವಯಸ್ಸಿನಲ್ಲಿ ಬರ್ನಾಡೋ ಬ್ಯುನೆಸ್ ಏರಿಸ್ ವಿಶ್ವವಿದ್ಯಾಲಯದಲ್ಲಿ ಔಷಧಿಶಾಸ್ತ್ರದ ಶಾಲೆಗೆ ಸೇರಿದನು. ಹದಿನೇಳನೇ ವಯಸ್ಸಿಗೆ ಈ ಪದವಿ ಪೂರೈಸಿದನು. ಈತ ಇಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗಲೇ ವೈದ್ಯಕೀಯ ವ್ಯಾಸಂಗಕ್ಕೆ ಸೇರಿದನು. ವೈದ್ಯಕೀಯ ವಿದ್ಯಾಭ್ಯಾಸ ನಡೆದಿರುವಾಗಲೇ ಅಂಗಕ್ರಿಯಾಶಾಸ್ತ್ರ ವಿಭಾಗದಲ್ಲಿ ಕೆಲಸಕ್ಕೆ ಸೇರಿದನು. 1911ರಲ್ಲಿ ಹೈಫೋಫೋಸಿಸ್ ಮೇಲೆ ಸಂಪ್ರಂಬಂಧ ಪ್ರಕಟಿಸಿ ಡಾಕ್ಟರೇಟ್ ಗಳಿಸಿದರು. ಈ ಪ್ರಕಟಣೆ ವಿಶ್ವವಿದ್ಯಾಲಯದ ಬಂಗಾರದ ಪದಕ ಪ್ರಶಸ್ತಿಗೆ ಆಯ್ಕೆಯಾಯಿತು. 1913ರಲ್ಲಿ ಆಲ್ವಿಯರ್ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯನಾದನು. 1919ರಲ್ಲಿ ಬ್ಯೂನಸ್ ಏರಿಸ್ ವಿಶ್ವವಿದ್ಯಾಲಯದಲ್ಲಿ ಅಂಗಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾದನು. ಇದೇ ವರ್ಷ ಬ್ಯುನಸ್ ಏರಿಸ್‍ನ ವೈದ್ಯಕೀಯ ಶಾಲೆಯಲ್ಲೂ ಹುದ್ದೆ ವಹಿಸಿಕೊಂಡ ಬರ್ನಾಡೋ ಅದು ಜಗತ್ತಿನ ಖ್ಯಾತ ವೈದ್ಯಕೀಯ ಕೇಂದ್ರಗಳಲ್ಲಿ ಒಂದಾಗುವಂತೆ ಮಾಡಿದನು. 1943ರವರೆಗೆ ಈತ ಇದರ ನಿರ್ದೇಶಕನಾಗಿದ್ದನು. 1943ರಲ್ಲಿ ಅರ್ಜೆಂಟೈನಾಕ್ಕೆ ಸಮರ್ಪಕ ಪ್ರಜಾಪ್ರಭುತ್ವದ ಅಗತ್ಯವಿದೆಯೆಂದು ಅದಕ್ಕಾಗಿ ಆಡಳಿತದಲ್ಲಿ ಸುಧಾರಣೆಗಳನ್ನು ತರಬೇಕೆಂದು ವಾದಿಸಿದನು. ಇದರ ಪರಿಣಾಮವಾಗಿ ನಿರ್ದೇಶಕ ಹುದ್ದೆಯನ್ನು ತ್ಯಜಿಸಬೇಕಾಯಿತು. ಆದರೆ 1955ರಲ್ಲಿ ಮತ್ತೊಮ್ಮೆ ಸರ್ಕಾರ ಬರ್ನಾಡೋಗೆ ಅದೇ ಹುದ್ದೆಯಲ್ಲಿ ನೇಮಕ ಮಾಡಿತು. ಬರ್ನಾಡೋ ಅಂತಸ್ರಾವಿ ಚೋದನಿಕೆಗಳ (Endocrine Hormones) ಬಗೆಗೆ ಆಸಕ್ತಿ ಹೊಂದಿದ್ದನು. ಹೈಫೋಫೋಸಿಸ್ ಹಿಂಭಾಗ ಕಾರ್ಬೋಹೈಡ್ರೇಟ್ ಚಯಾಪಚಯ(Metabolism) ಹಾಗೂ ಮಧುಮೇಹದ ಆರಂಭಿಕ ಸ್ಥಿತಿಯಲ್ಲಿ ವಹಿಸುವ ಪಾತ್ರದ ಬಗೆಗೆ ಬೆಳಕು ಚೆಲ್ಲಿದನು. ಇದಕ್ಕಾಗಿ 1947ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಅರ್ಜೆಂಟೈನಾದಲ್ಲಿ ವಿಜ್ಞಾನ ಹಾಗೂ ವೈದ್ಯಕೀಯ ಶಿಕ್ಷಣದ ಸುಧಾರಣೆಗೂ ಬರ್ನಾಡೋ ಶ್ರಮಿಸಿದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 5/30/2020