ಚೇನ್, ಸರ್ ಅರ್ನ್‍ಸ್ಟ್ ಬೊರಿಸ್ (1906-1979) ೧೯೪೫
ಜರ್ಮನಿ- ಬ್ರಿಟನ್-ಜೀವ ರಸಾಯನ ಶಾಸ್ತ್ರ - ಚಿಕಿತ್ಸಕ ಬಳಕೆಗಾಗಿ ಪೆನ್ಸಿಲಿನ್‍ನ್ನು ಪ್ರತ್ಯೇಕಿಸಿದ ತಂಡದ ಸದಸ್ಯ.
ಚೇನ್‍ನ ಪೂರ್ವಜರು ರಷ್ಯಾ ಮೂಲದ ಯಹೂದಿಗಳಾಗಿದ್ದು, ಬರ್ಲಿನ್‍ಗೆ ಬಂದು ನೆಲೆಸಿದ್ದರು. ಈತನ ತಂದೆ ರಸಾಯನಶಾಸ್ತ್ರಜ್ಹನಾಗಿದ್ದು ಆತನೊಂದಿಗೆ ಕಾರ್ಖಾನೆಗೆ ಹೋಗುತ್ತಿದ್ದ ಚೇನ್‍ಗೆ ಅದರಲ್ಲಿ ಆಸಕ್ತಿ ಮೂಡಿತು. ಅಂಗರಚನಾಶಾಸ್ತ್ರ ಹಾಗೂ ರಸಾಯನಶಾಸ್ತ್ರವನ್ನು ಬರ್ಲಿನ್‍ನಲ್ಲಿ ಓದಿದ ಚೇನ್, 1933ರಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದ ನಂತರ ಬರ್ಲಿನ್ ತೊರೆದು ಲಂಡನ್ ಹಾಗೂ ಕೇಂಬ್ರಿಜ್‍ಗಳಲ್ಲಿ ವೃತ್ತಿ ಜೀವನ ಪ್ರಾರಂಭಿಸಿದನು. 1935ರಲ್ಲಿ ಫ್ಲೋರೆ ತಂಡ ಸೇರಿ ಆಕ್ಸ್‍ಫರ್ಡ್‍ನ ಸಿಬ್ಬಂದಿಯಾದನು. 1938ರಲ್ಲಿ ಹೀಟ್ಲೆ ಜೊತೆ ಸೇರಿ , ಪೆನ್ಸಿಲಿನ್ ಪ್ರತ್ಯೇಸಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದನು. 1941ರ ವೇಳೆಗೆ ಪೆನ್ಸಿಲಿನ್ ಪ್ರತ್ಯೇಕಿಕರಣ ಸಾಧ್ಯವಾಗಿ ಅದು ಅತ್ಯಂತ ಪ್ರಬಲ ಪ್ರತಿ ಜೈವಿಕವಾಗಿ (Antibiotic) ಪ್ರಚಂಡ ಯಶಸ್ಸನ್ನು ಗಳಿಸಿತು. 1945ರಲ್ಲಿ ಪೆನ್ಸಿಲಿನ್ ಪ್ರತ್ಯೇಕಿಸಿದ ತಂಡದೊಂದಿಗೆ ನೊಬೆಲ್ ಪುರಸ್ಕೃತನಾದ ಬೊರಿಸ್ 1948ರಲ್ಲಿ ರೋಂನಲ್ಲಿ ನೆಲೆಸಿದನು. 1961ರಲ್ಲಿ ಲಂಡನ್‍ಗೆ ಮರಳಿ ಇಂಪೀರಿಯಲ್ ಕಾಲೇಜನ್ನು ಸೇರಿದನು. ಚೇನ್, ಇ.ಪಿ. ಅಬ್ರಹಂ ಜೊತೆಗೂಡಿ ಪೆನ್ಸಿಲಿನ್‍ನ ಸ್ಫಟಿಕೀಯ ರಾಚನಿಕ ಸ್ವರೂಪ ನಿರ್ಧರಿಸಿದನು. ಇದರಿಂದ ರಚನೆಯಲ್ಲಿ ಸ್ವಲ್ಪ ವ್ಯತ್ಯಾಸವಿರುವ ನಾಲ್ಕು ಬಗೆಯ ಪೆನ್ಸಿಲಿನ್‍ಗಳಿರುವುದು ತಿಳಿದುಬಂದಿತು. ಪೆನ್ಸಿಲಿನ್‍ನ್ನು ನಾಶಗೊಳಿಸಬಲ್ಲ ಪೆನ್ಸಿಲಿನೇಸ್ ಎಂಬ ಕಿಣ್ವವನ್ನು (ಇಟಿzಥಿme) ಚೇನ್ ಶೋಧಿಸಿದನು. ಕೆಲವು ಬ್ಯಾಕ್ಟೀರಿಯಗಳು ಪೆನ್ಸಿಲಿನ್‍ಗೆ ವ್ಮಣಿಯದಿರಲು ಅವು ಪೆನ್ಸಿಲಿನೇಸ್ ಉತ್ಪತ್ತಿ ಮಾಡುವುದೇ ಕಾರಣವೆಂದು ತಿಳಿಸಿದನು.ಚೇನ್ ಹಾವಿನ ವಿಷಗಳು ಹೇಗೆ ಕ್ರಿಯಾಶೀಲವಾಗಿರುವವೆಂದು ಸಹ ಪರಿಶೋಧಿಸಿದನು. ಉತ್ತಮ ಭಾಷಾ ಕೋವಿದನೂ, ಸಂಗೀತಕಾರನೂ ಆಗಿದ್ದ ಚೇನ್ ವಿಜ್ಞಾನದ ಸಂಘಟನೆಗಳ ಬಗೆಗೆ ಹೊಂದಿದ್ದ ದೃಷ್ಟಿಕೋನದಿಂದ ಹಲವರ ವಿರೋಧಿಯೂ ಆಗಿದ್ದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 2/29/2020